ಬೆಂಗಳೂರು: ಮುಂಬೈನಿಂದ ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಆಟೋದಲ್ಲಿ ಪರಾರಿಯಾಗಿದ್ದ ಇಬ್ಬರು ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕ್ವಾರಂಟೈನ್ಗೆ ಹೋಗಬೇಕಾಗುತ್ತೆ ಎಂದು ಪೊಲೀಸರ ಕಣ್ಣು ತಪ್ಪಿಸಿ ಇಬ್ಬರು ಆಟೋದಲ್ಲಿ ಎಸ್ಕೇಪ್ ಆಗಿದ್ದರು.
ತಕ್ಷಣ ಬೆನ್ನತ್ತಿದ ಬೆಂಗಳೂರು ಪೊಲೀಸರು ಪರಾರಿಯಾದವರನ್ನು ಪತ್ತೆಹಚ್ಚಿದ್ದಾರೆ. ಬಳಿಕ ಬಿಬಿಎಂಪಿ ಅಧಿಕಾರಿಗಳು ಇಬ್ಬರ ಕೈಗೂ ಸೀಲ್ ಹಾಕಿ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದಾರೆ.
ಬೆಳಗ್ಗೆ ಮುಂಬೈನಿಂದ ಬೆಂಗಳೂರಿಗೆ ರೈಲಿನಲ್ಲಿ 1700ಕ್ಕೂ ಹೆಚ್ಚು ಜನ ಆಗಮಿಸಿದ್ದರು. ಅದರಲ್ಲಿ ಪರಾರಿಯಾಗಿದ್ದ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಆದ್ರೆ ಇನ್ನೂ ಹಲವು ಜನರು ನಾಪತ್ತೆಯಾಗಿರುವ ಗುಮಾನಿ ಇದೆ. ಹೀಗಾಗಿ ಬೆಂಗಳೂರು ಪೊಲೀಸರು ಪರಾರಿಯಾದವರ ಬೆನ್ನು ಬಿದ್ದಿದ್ದಾರೆ.
Published On - 12:31 pm, Tue, 2 June 20