ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಯಶಸ್ವಿ, ಸೋಂಕಿತ ಗುಣಮುಖ! ಎಲ್ಲಿ?
ಹುಬ್ಬಳ್ಳಿ: ಈ ಮೊದಲು ರಾಜ್ಯದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ನಡೆಸಲಾಗಿತ್ತು. ಆದರೆ ಅದು ವಿಫಲವಾಗಿತ್ತು. ಸದ್ಯ ಕೊರೊನಾ ಸೋಂಕಿನಿಂದ ಬಳಲುತ್ತಿರುವವರಿಗೆ ಕಿಮ್ಸ್ ಸಿಹಿ ಸುದ್ದಿ ನೀಡಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಾಡಲಾದ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ. ಮೊದಲ ಬಾರಿಯ ಪ್ರಯತ್ನದಲ್ಲೇ ಕಿಮ್ಸ್ ವೈದ್ಯರು ಯಶಸ್ಸು ಕಂಡಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ದೇಹದಿಂದ ಪ್ಲಾಸ್ಮಾ ಪಡೆದು ಮತ್ತೊಬ್ಬ ಸೋಂಕಿತನಿಗೆ ಚಿಕಿತ್ಸೆ ನೀಡಲಾಗಿತ್ತು. ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಡಾ. ರಾಮ ಕುಲಗೋಡ ನೇತೃತ್ವದಲ್ಲಿ 64 ವರ್ಷದ […]
ಹುಬ್ಬಳ್ಳಿ: ಈ ಮೊದಲು ರಾಜ್ಯದಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ನಡೆಸಲಾಗಿತ್ತು. ಆದರೆ ಅದು ವಿಫಲವಾಗಿತ್ತು. ಸದ್ಯ ಕೊರೊನಾ ಸೋಂಕಿನಿಂದ ಬಳಲುತ್ತಿರುವವರಿಗೆ ಕಿಮ್ಸ್ ಸಿಹಿ ಸುದ್ದಿ ನೀಡಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಾಡಲಾದ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ. ಮೊದಲ ಬಾರಿಯ ಪ್ರಯತ್ನದಲ್ಲೇ ಕಿಮ್ಸ್ ವೈದ್ಯರು ಯಶಸ್ಸು ಕಂಡಿದ್ದಾರೆ.
ಕೊರೊನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ದೇಹದಿಂದ ಪ್ಲಾಸ್ಮಾ ಪಡೆದು ಮತ್ತೊಬ್ಬ ಸೋಂಕಿತನಿಗೆ ಚಿಕಿತ್ಸೆ ನೀಡಲಾಗಿತ್ತು. ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಡಾ. ರಾಮ ಕುಲಗೋಡ ನೇತೃತ್ವದಲ್ಲಿ 64 ವರ್ಷದ ಕೊರೊನಾದಿಂದ ಬಳಲುತ್ತಿದ್ದ P-363ಗೆ 200 ML ನಂತೆ ಎರಡು ಬಾರಿ ಪ್ಲಾಸ್ಮಾ ಥೆರಪಿ ಮಾಡಲಾಗಿತ್ತು. ಸದ್ಯ ಈಗ ಸೋಂಕಿತ ವ್ಯಕ್ತಿ ಗುಣಮುಖನಾಗಿದ್ದು, ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ.
Published On - 11:52 am, Tue, 2 June 20