ಬೆಂಗಳೂರಿನಲ್ಲಿ ಇಲ್ಲಿವರೆಗೂ ಕೊರೊನಾಗೆ 30 ಜನ ಬಲಿ, ಒಬ್ಬೊಬ್ಬರ ವಿವರವೂ ಹೀಗಿದೆ
ಬೆಂಗಳೂರಿನಲ್ಲಿ ಇಲ್ಲಿವರೆಗೂ ಕೊರೊನಾಗೆ 30 ಜನ ಬಲಿಯಾಗಿದ್ದಾರೆ. 30 ರಲ್ಲಿ ಓರ್ವ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿ, 29 ಜನ ನಾನಾ ಖಾಯಿಲೆ ಹಾಗೂ ಕೊರೊನಾ ಸೋಂಕು ತಗುಲಿ ಸಾವು ಕಂಡಿದ್ದಾರೆ. ಜೂನ್ 3 ರವರೆಗೂ ಬೆಂಗಳೂರಿನಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 11 ಇತ್ತು. ಕಳೆದ 10 ದಿನದಲ್ಲಿ 18 ಜನ ಸಾವನ್ನಪ್ಪಿದ್ದಾರೆ. ಇಂದೂ (ಜೂ.14) ಮೂವರ ಸಾವು: ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇಂದು (ಜೂನ್ 14) ಕೊರೊನಾಗೆ ಮತ್ತೆ ಮೂವರು ಬಲಿಯಾಗಿದ್ದಾರೆ. 85 ವರ್ಷದ ಕೊರೊನಾ […]
ಬೆಂಗಳೂರಿನಲ್ಲಿ ಇಲ್ಲಿವರೆಗೂ ಕೊರೊನಾಗೆ 30 ಜನ ಬಲಿಯಾಗಿದ್ದಾರೆ. 30 ರಲ್ಲಿ ಓರ್ವ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿ, 29 ಜನ ನಾನಾ ಖಾಯಿಲೆ ಹಾಗೂ ಕೊರೊನಾ ಸೋಂಕು ತಗುಲಿ ಸಾವು ಕಂಡಿದ್ದಾರೆ. ಜೂನ್ 3 ರವರೆಗೂ ಬೆಂಗಳೂರಿನಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 11 ಇತ್ತು. ಕಳೆದ 10 ದಿನದಲ್ಲಿ 18 ಜನ ಸಾವನ್ನಪ್ಪಿದ್ದಾರೆ.
ಇಂದೂ (ಜೂ.14) ಮೂವರ ಸಾವು: ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇಂದು (ಜೂನ್ 14) ಕೊರೊನಾಗೆ ಮತ್ತೆ ಮೂವರು ಬಲಿಯಾಗಿದ್ದಾರೆ. 85 ವರ್ಷದ ಕೊರೊನಾ ರೋಗಿ, 65 ವರ್ಷದ ವರ್ಷದ ಕೊರೊನಾ ರೋಗಿ ಮತ್ತು 40 ವರ್ಷದ ಕೊರೊನಾ ರೋಗಿ ಮೃತಪಟ್ಟಿದ್ದಾರೆ.
ರಾತ್ರಿ ಎರಡು, ಬೆಳಗ್ಗೆ ಮತ್ತೊಂದು ಸಾವು ಸಂಭವಿಸಿದೆ. ನಿನ್ನೆ ಬೆಂಗಳೂರಿನಲ್ಲಿ ಏಳು ಸಾವು ಸಂಭವಿಸಿತ್ತು. ಇಂದು ಮತ್ತೆ ಮೂರು ಸಾವು. 85 ವರ್ಷದ ಮಹಿಳೆಯನ್ನು ಸೆಂಟ್ ಜಾನ್ ಆಸ್ಪತ್ರೆ ಇಂದ ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗಿತ್ತು. 40 ವರ್ಷದ ವ್ಯಕ್ತಿಯನ್ನು ಜಯನಗರ ಜನರಲ್ ಆಸ್ಪತ್ರೆ ಇಂದ ಶಿಫ್ಟ್ ಮಾಡಲಾಗಿತ್ತು.
ಜೂನ್ 7 ರಂದು ಇಬ್ಬರು ಸಾವು: 61 ವರ್ಷದ ಮಹಿಳೆ ಹೈಪೋ ಥೈರಾಡಿಸನ್ಸ್ ಹಾಗೂ ಉಸಿರಾಟದ ತೊಂದರೆ 57 ವರ್ಷದ ಪುರುಷ ಕ್ಯಾನ್ಸರ್ ಹಾಗೂ ರಕ್ತದೊತ್ತಡ
ಜೂನ್ 8 ರಂದು ಮೂವರು ಸಾವು: 67 ವರ್ಷದ ಪುರುಷ: ಹೃದಯ ಸಂಬಂಧಿಸಿದ ಖಾಯಿಲೆ ಹಾಗೂ ಐಎಲ್ ಐ 48 ವರ್ಷದ ಮಹಿಳೆ: ಉಸಿರಾಟದ ತೊಂದರೆ ಹಾಗೂ ಐಎಲ್ ಐ 65 ವರ್ಷದ ಮಹಿಳೆ: SARi
ಜೂನ್ 9 ರಂದು ಓರ್ವ ವ್ಯಕ್ತಿ ಸಾವು 65 ವರ್ಷದ ಪುರುಷ: ಕಿಡ್ನಿ ತೊಂದರೆ ಹಾಗೂ ಐಎಲ್ಐ
ಜೂನ್ 10 ರಂದು ಇಬ್ಬರ ಸಾವು 32 ವರ್ಷದ ಪುರುಷ: ಯಾವುದೇ ಖಾಯಿಲೆ ಇರಲಿಲ್ಲ ಕೊರೊನಾಗೆ ಬಲಿ 57 ವರ್ಷದ ಪುರುಷ: ಐಎಲ್ ಐ ಸಮಸ್ಯೆ
ಜೂನ್ 11 ರಂದು ಇಬ್ಬರ ಸಾವು 35 ವರ್ಷದ ಪುರುಷ: ಐಎಲ್ಐ ಸಮಸ್ಯೆ 60 ವರ್ಷದ ಪುರುಷ: ಐಎಲ್ಐ ಸಮಸ್ಯೆ
ಜೂನ್ 12 ರಂದು ನಾಲ್ವರ ಸಾವು 61 ವರ್ಷದ ರೋಗಿ: ಐಎಲ್ಐ, ಮಧುಮೇಹ ಸಮಸ್ಯೆ 65 ವರ್ಷದ ರೋಗಿ: ಉಸಿರಾಟದ ತೊಂದರೆ 52 ವರ್ಷದ ರೋಗಿ: ಉಸಿರಾಟದ ತೊಂದರೆ 49 ವರ್ಷದ ರೋಗಿ: ಐಎಲ್ಐ
ಜೂನ್ 13 ರಂದು ಇಬ್ಬರ ಸಾವು 23 ವರ್ಷದ ಯುವಕ: ಜ್ವರ ಮತ್ತು ತಲೆನೋವು ಇತ್ತು 62 ವರ್ಷದ ಯುವಕ: ಐಎಲ್ ಐ ಸಮಸ್ಯೆ
Published On - 11:17 am, Sun, 14 June 20