AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣೀರಲ್ಲಿಯೂ ಇದೆ ಕೊರೊನಾ‌! ಹುಷಾರು, ಮುಟ್ಟಿದ್ರೆ ಬಂದ್ಬಿಡುತ್ತೆ ಕೊರೊನಾ ಸೋಂಕು

ಬೆಂಗಳೂರು: ಕೊರೊನಾದಿಂದ ಕಂಗೆಟ್ಟ ಜನರ ಜೀವನ ಕಣ್ಣೀರಲ್ಲಿ ಕೈ ತೊಳೆಯೋ ಹಾಗಾಗಿದೆ. ಕೊರೊನಾ ಪೀಡಿತರಂತೂ ಕಣ್ಣೀರ ಧಾರೆಯನ್ನೇ ಹರಿಸ್ತಿದ್ದಾರೆ.  ಪರಿಸ್ಥಿತಿ ಹೀಗಿರುವಾಗ  ಜನಕ್ಕೆ ಸಾಂತ್ವನದ ಜತೆಗೆ ಏನ್‌ ಬೇಕಾದ್ರೂ ಮಾಡಿ, ಆದ್ರೆ ಕಣ್ಣೀರು ಮಾತ್ರ ಹಾಕಬೇಡಿ ಅಂತಾ ಬೇಡಿಕೊಳ್ಳೋ ಹಾಗೆ ಆಗಿದೆ. ಹೌದು, ಕೊರಾನಾ ಪೀಡಿತರು ಕಣ್ಣೀರು ಹಾಕಿದ್ರೂ ಈಗ ಡೇಂಜರ್‌.. ಡೇಂಜರ್! ಯಾಕಂದ್ರೆ ಕೊರೊನಾ ಪೀಡಿತರ ಕಣ್ಣೀರಲ್ಲಿ ಕೂಡಾ ಕೊರೊನಾ ವೈರಸ್‌ಗಳಿರೋದು ಸಂಶೋಧನೆಯಲ್ಲಿ ಕಂಡು ಬಂದಿದೆ. ಬೆಂಗಳೂರಿನ ಖ್ಯಾತ ಮಿಂಟೋ ಆಸ್ಪತ್ರೆ ವೈದ್ಯರು ನಡೆಸಿದ ಈ […]

ಕಣ್ಣೀರಲ್ಲಿಯೂ ಇದೆ ಕೊರೊನಾ‌! ಹುಷಾರು, ಮುಟ್ಟಿದ್ರೆ ಬಂದ್ಬಿಡುತ್ತೆ ಕೊರೊನಾ ಸೋಂಕು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: ಆಯೇಷಾ ಬಾನು|

Updated on:Jun 15, 2020 | 10:55 AM

Share

ಬೆಂಗಳೂರು: ಕೊರೊನಾದಿಂದ ಕಂಗೆಟ್ಟ ಜನರ ಜೀವನ ಕಣ್ಣೀರಲ್ಲಿ ಕೈ ತೊಳೆಯೋ ಹಾಗಾಗಿದೆ. ಕೊರೊನಾ ಪೀಡಿತರಂತೂ ಕಣ್ಣೀರ ಧಾರೆಯನ್ನೇ ಹರಿಸ್ತಿದ್ದಾರೆ.  ಪರಿಸ್ಥಿತಿ ಹೀಗಿರುವಾಗ  ಜನಕ್ಕೆ ಸಾಂತ್ವನದ ಜತೆಗೆ ಏನ್‌ ಬೇಕಾದ್ರೂ ಮಾಡಿ, ಆದ್ರೆ ಕಣ್ಣೀರು ಮಾತ್ರ ಹಾಕಬೇಡಿ ಅಂತಾ ಬೇಡಿಕೊಳ್ಳೋ ಹಾಗೆ ಆಗಿದೆ.

ಹೌದು, ಕೊರಾನಾ ಪೀಡಿತರು ಕಣ್ಣೀರು ಹಾಕಿದ್ರೂ ಈಗ ಡೇಂಜರ್‌.. ಡೇಂಜರ್! ಯಾಕಂದ್ರೆ ಕೊರೊನಾ ಪೀಡಿತರ ಕಣ್ಣೀರಲ್ಲಿ ಕೂಡಾ ಕೊರೊನಾ ವೈರಸ್‌ಗಳಿರೋದು ಸಂಶೋಧನೆಯಲ್ಲಿ ಕಂಡು ಬಂದಿದೆ. ಬೆಂಗಳೂರಿನ ಖ್ಯಾತ ಮಿಂಟೋ ಆಸ್ಪತ್ರೆ ವೈದ್ಯರು ನಡೆಸಿದ ಈ ಪರೀಕ್ಷೆಯಲ್ಲಿ ಕೊರೊನಾ ಪೀಡಿತರ ಕಣ್ಣೀರಲ್ಲಿ ವೈರಸ್‌ಗಳು ಪತ್ತೆಯಾಗಿವೆ.

45 ರೋಗಿಗಳ ಕಣ್ಣೀರಲ್ಲಿ ಪತ್ತೆ ಸುಮಾರು 45 ಕೊರೊನಾ ಪಾಸಿಟಿವ್‌ ಇರುವ ರೋಗಿಗಳನ್ನ ಈ ಪರೀಕ್ಷೆಯಲ್ಲಿ ಬಳಸಿಕೊಳ್ಳಲಾಗಿತ್ತು. ಇದ್ರಲ್ಲಿ 45 ಜನರ ಕಣ್ಣಿನ ದ್ರವವನ್ನ ಸಂಗ್ರಹಿಸಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಲಾಗಿದೆ. ಆಗ ಬಂದ ರಿಸಲ್ಟ್‌ ವೈದ್ಯಲೋಕವನ್ನೇ ದಂಗು ಬಡಿಸಿದೆ. ಯಾಕಂದ್ರೆ ಕೊರೊನಾ ಪಾಸಿಟಿವ್ ವ್ಯಕ್ತಿಗಳ ಕಣ್ಣೀರಲ್ಲೂ ಕೊರೊನಾ ಸೋಂಕಿರುವುದು ಕನ್‌ಫರ್ಮ್‌ ಆಗಿದೆ.

ಅಷ್ಟೇ ಅಲ್ಲ, ಕೆಲ ಅಸಿಂಪ್ಟಮ್ಸ್‌ ಅಂದ್ರೆ ಕೊರೊನಾದಿಂದ ಸೋಂಕಿತರಾಗಿದ್ರೂ, ಆ ರೋಗದ ಲಕ್ಷಣಗಳಿಲ್ಲದೇ ಇರೋ ವ್ಯಕ್ತಿಯ ಕಣ್ಣೀರಲ್ಲೂ ಸೋಂಕುಗಳಿರೋದು ಪತ್ತೆಯಾಗಿದೆ. ಇಂಥ ವ್ಯಕ್ತಿಗಳ ಕಣ್ಣೀರು ಸೋಂಕಿದ ಕಡೆ ಯಾರಾದ್ರೂ ಸ್ಪರ್ಷಿಸಿದ್ರೆ ಅವರಿಗೂ ಕೋವಿಡ್‌-19 ಗ್ಯಾರಂಟಿ ಅನ್ನುತ್ತಿದೆ ನಮ್ಮದೇ ವೈದ್ಯಲೋಕ.

ಕಣ್ಣೀರ ಜಾಗ ಮುಟ್ಟಿದ್ರೆ ಬರುತ್ತೆ  ಇದರರ್ಥ ಕೊರೊನಾ ಪೀಡಿತರ ಕಣ್ಣೀರು ಬಿದ್ದಲ್ಲಿ, ಅಥವಾ ಕಣ್ಣೀರು ಮುಟ್ಟಿದ ಕೈಗಳಿಂದ ಸ್ಪರ್ಶಿಸಿದ ಸ್ಥಳದಲ್ಲಿ ಕೊರೊನಾ ವೈರಸ್‌ಗಳು ಅಂಟಿಕೊಳ್ಳುತ್ತವೆ. ಇಂಥ ಜಾಗದಲ್ಲಿ ಯಾರಾದ್ರೂ ಕೈ ಇಟ್ರೆ, ಕುಳಿತ್ರೆ ಅವರಿಗೂ ಕೊರೊನಾ.. ಕರೆಯದೇ ಬರೋ ಅತಿಥಿಯಾಗಿ ವಕ್ಕರಿಸಿಕೊಳ್ಳುತ್ತೆ. ಅಷ್ಟೇ ಅಲ್ಲ ಅವರ ಕಣ್ಣಲ್ಲೂ ಕೊರೊನಾ ಕಣ್ಣೀರು ಬರಿಸುತ್ತೆ.

ಬೆಂಗಳೂರಿನ ಮಿಂಟೋ ಆಸ್ಪತ್ರೆಯ ವೈದ್ಯರ ಈ ಸಂಶೋಧನೆ ಈಗ ಒಂದು ಎಚ್ಚರಿಕೆಯ ಗಂಟೆ. ಇದು ಜನಸಾಮಾನ್ಯರಿಗಷ್ಟೇ ಅಲ್ಲ, ವೈದ್ಯರಿಗೂ ಕೂಡಾ ಮುನ್ನೆಚ್ಚರಿಕೆಯ ಸಂದೇಶ. ಅದ್ರಲ್ಲೂ  ನೇತ್ರ ವೈದ್ಯರು ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಬೇಕಿದೆ.

Published On - 1:06 pm, Sun, 14 June 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್