
ಕೋಲಾರ: ಆ ಅಜ್ಜಿಗೆ ಈಗಾಗಲೇ 85 ವರ್ಷ ವಯಸ್ಸಾಗಿದೆ. ಆದ್ರೆ ಅವರ ನಿಸ್ವಾರ್ಥ ಸೇವೆಗೆ ಮಾತ್ರ ಯಾವುದೇ ವಯಸ್ಸಾಗಿಲ್ಲ. ಹವ್ಯಾಸಕ್ಕಾಗಿ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡುವ ಆ ಅಜ್ಜಿ ಯಾವ ಅನ್ನಪೂರ್ಣೇಶ್ವರಿಗೇನು ಕಡಿಮೆ ಇಲ್ಲ. ಹಾಗಿದ್ರೆ ಯಾರು ಆ ಅಜ್ಜಿ. ಎಲ್ಲಿದ್ದಾರೆ ಅನ್ನೋದನ್ನ ನೋಡೋಣ ಬನ್ನಿ..
ಇನ್ನು ಮೂಲತಃ ತಮಿಳುನಾಡಿನವರಾದ ಇವರು ಕೋಲಾರಕ್ಕೆ ಬಂದು 55 ವರ್ಷಗಳಾಗಿದೆ. ಅಜ್ಜಿ ಮನೆಯವರು ಮೊದಲಿಂದಲೂ ಮಿಕ್ಸರ್ ವ್ಯಾಪಾರ ಮಾಡುತ್ತಿದ್ದು, ಅದರಿಂದಲೇ ಜೀವನ ನಡೆಸ್ತಿದ್ದಾರೆ. ಈಗ ಸ್ವೀಟ್ ಸ್ಟಾಲ್ ಸಹ ಇದ್ದು, ಇದೆ ಮನೆಯಲ್ಲೆ ಸ್ವೀಟ್ ಕೂಡ ತಯಾರು ಮಾಡ್ತಿದ್ದಾರೆ. ಲಾಕ್ಡೌನ್ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೂ ಇಡ್ಲಿ ಮಾರಾಟ ನಿಲ್ಲಿಸಿಲ್ಲ. ಇವರ ಈ ಕಾರ್ಯಕ್ಕೆ ಮನೆಯವರೆಲ್ಲಾ ಒಗ್ಗೂಡಿ ಅಗತ್ಯ ಸಹಕಾರ ನೀಡಿದ್ದಾರೆ. ಬಡವರು, ರೋಗಿಗಳು, ಗಾರ್ಮೆಂಟ್ಸ್ ನೌಕರರು, ಆಟೋ ಚಾಲಕರು ಪ್ರತಿ ನಿತ್ಯ ಇಡ್ಲಿ ಖರೀದಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.
ಒಟ್ನಲ್ಲಿ ಅನ್ನದಾನ ಮಹಾದಾನ ಎನ್ನುವಂತೆ 85 ವರ್ಷದ ಸೆಲ್ವಮ್ಮ 1 ರೂಪಾಯಿ ಇಡ್ಲಿ ಮಾರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇವತ್ತಿಗೂ ಆರೋಗ್ಯವಾಗಿ ತನ್ನ ಮಕ್ಕಳು, ಮೊಮ್ಮಕ್ಕಳಿಗೆ ಪುಣ್ಯ ಬರಲಿ ಅಂತಾ ಅದೆಷ್ಟೋ ಜನರ ಹೊಟ್ಟೆ ತುಂಬಿಸುತ್ತಿರುವ ಈ ಅಜ್ಜಿ ಕಲಿಯುಗದ ಅನ್ನಪೂರ್ಣೆಶ್ವರಿ ಅಂದ್ರೆ ತಪ್ಪಿಲ್ಲ. -ರಾಜೇಂದ್ರಸಿಂಹ
Published On - 8:01 am, Sat, 14 November 20