AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನನ್ನು ಯಾಮಾರಿಸಿ ನನ್ನ ಗುಪ್ತಾಂಗ ಚಿತ್ರೀಕರಿಸಿದರು’: ನಟಿ ಶರನ್​ ಸ್ಟೋನ್ ಬದುಕಿನ​ ಶಾಕಿಂಗ್​ ಸತ್ಯ ​ಬಹಿರಂಗ!

ಮಾ.30ರಂದು ಶರನ್​ ಸ್ಟೋನ್ ಅವರ ಆತ್ಮಚರಿತ್ರೆ ‘ದಿ ಬ್ಯೂಟಿ ಆಫ್​ ಲಿವಿಂಗ್​ ಟ್ವೈಸ್​’ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಆ ಪುಸ್ತಕದ ಕೆಲವು ಅಧ್ಯಾಯಗಳು ಪ್ರಕಟ ಆಗಿದ್ದು, ಅದರಲ್ಲಿ ಈ ಕಹಿ ಘಟನೆ ಬಗ್ಗೆ ವಿವರಿಸಲಾಗಿದೆ.

‘ನನ್ನನ್ನು ಯಾಮಾರಿಸಿ ನನ್ನ ಗುಪ್ತಾಂಗ ಚಿತ್ರೀಕರಿಸಿದರು’: ನಟಿ ಶರನ್​ ಸ್ಟೋನ್ ಬದುಕಿನ​ ಶಾಕಿಂಗ್​ ಸತ್ಯ ​ಬಹಿರಂಗ!
ಶರನ್​ ಸ್ಟೋನ್​
ಮದನ್​ ಕುಮಾರ್​
| Updated By: guruganesh bhat|

Updated on: Mar 21, 2021 | 11:42 AM

Share

ಚಿತ್ರರಂಗದಲ್ಲಿ ಮಹಿಳೆಯರನ್ನು ಮೋಸಗೊಳಿಸಿದ ಹಲವು ಉದಾಹರಣೆಗಳಿವೆ. ಅಂಥದ್ದೇ ಮತ್ತೊಂದು ಪ್ರಸಂಗದ ಬಗ್ಗೆ ಹಾಲಿವುಡ್​ ನಟಿ ಶರನ್​ ಸ್ಟೋನ್​ ಬಾಯಿ ಬಿಟ್ಟಿದ್ದಾರೆ. ಶೂಟಿಂಗ್​ ಸಮಯದಲ್ಲಿ ತಮ್ಮನ್ನು ಹೇಗೆಲ್ಲ ಯಾಮಾರಿಸಲಾಯಿತು ಎಂಬುದನ್ನು ಅವರು ಹೇಳಿಕೊಂಡಿದ್ದಾರೆ. ಅದೇ ವಿಚಾರ ಈಗ ಎಲ್ಲೆಡೆ ಚರ್ಚೆ ಆಗುತ್ತಿದೆ. ಶರನ್​ ಸ್ಟೋನ್​ಗೆ ಗೊತ್ತಾಗದ ರೀತಿಯಲ್ಲಿ ಅವರ ಗುಪ್ತಾಂಗವನ್ನು ನಿರ್ದೇಶಕ ಪೌಲ್​ ವೆರ್ಹೋವೆನ್​ ಚಿತ್ರೀಕರಿಸಿದ್ದರು ಎಂಬ ವಿಚಾರ ಜಗಜ್ಜಾಹೀರಾಗಿದೆ.

60ಕ್ಕೂ ಹೆಚ್ಚು ಹಾಲಿವುಡ್​ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆದವರು ಶರನ್​ ಸ್ಟೋನ್​. ಅದರಲ್ಲೂ 1992ರಲ್ಲಿ ತೆರೆಕಂಡ ‘ಬೇಸಿಕ್​ ಇನ್​ಸ್ಟಿಂಕ್ಟ್​’ ಚಿತ್ರದ ಬಳಿಕ ಶರನ್​ ರಾತ್ರೋ ರಾತ್ರಿ ಸ್ಟಾರ್ ನಟಿಯಾದರು. ಆದರೆ ಆ ಸಿನಿಮಾ ಚಿತ್ರೀಕರಣದ ವೇಳೆ ಅವರಿಗೆ ಅನ್ಯಾಯ ಮಾಡಲಾಗಿತ್ತು. ನಿರ್ದೇಶನ ತಂಡದವರು ಶರನ್​ ಅವರನ್ನು ಯಾಮಾರಿಸಿ ಅವರ ಗುಪ್ತಾಂಗವನ್ನು ಚಿತ್ರೀಕರಿಸಿದ್ದರಂತೆ. ಈ ವಿಚಾರವನ್ನು ಆತ್ಮಚರಿತ್ರೆಯಲ್ಲಿ ಅವರು ಬರೆದುಕೊಂಡಿದ್ದಾರೆ.

ಮಾ.30ರಂದು ಶರನ್​ ಅವರ ಆತ್ಮಚರಿತ್ರೆ ‘ದಿ ಬ್ಯೂಟಿ ಆಫ್​ ಲಿವಿಂಗ್​ ಟ್ವೈಸ್’ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಆ ಪುಸ್ತಕದ ಕೆಲವು ಅಧ್ಯಾಯಗಳು ಖಾಸಗಿ ಮ್ಯಾಗಝಿನ್​ನಲ್ಲಿ ಪ್ರಕಟ ಆಗಿದ್ದು, ಅದರಲ್ಲಿ ಈ ಕಹಿ ಘಟನೆ ಬಗ್ಗೆ ವಿವರಿಸಲಾಗಿದೆ. ಶರಣ್​ ಅವರಿಗೆ ಈಗ 63 ವರ್ಷ. ‘ಬೇಸಿಕ್​ ಇನ್​ಸ್ಟಿಂಕ್ಟ್​’ ಚಿತ್ರೀಕರಣದ ಸಮಯದಲ್ಲಿ ಅವರಿಗೆ 34ರ ಪ್ರಾಯ. ಆ ಚಿತ್ರದ ಪೊಲೀಸ್​ ತನಿಖೆಯ ದೃಶ್ಯವೊಂದರಲ್ಲಿ ಶರನ್​ ಅವರು ಕಾಲು ಮೇಲೆ ಕಾಲು ಹಾಕಿ ಕೂರುವ ಶಾಟ್​ ಇದೆ. ಆ ಸನ್ನಿವೇಶದಲ್ಲಿ ಅವರು ಒಳ ಉಡುಪು ಧರಿಸಿಲ್ಲ ಎಂಬುದನ್ನು ನಿರ್ದೇಶಕರು ಬಿಂಬಿಸಬೇಕಿತ್ತು. ಆದರೆ ಪರದೆ ಮೇಲೆ ಗುಪ್ತಾಂಗ ಕಾಣುವುದಿಲ್ಲ ಎಂದು ಸುಳ್ಳು ಹೇಳಿ ಶರನ್​ರನ್ನು ನಂಬಿಸಲಾಗಿತ್ತು!

ಪ್ರೊಜೆಕ್ಷನ್​ ರೂಮ್​ನಲ್ಲಿ ಮೊದಲ ಬಾರಿಗೆ ಆ ದೃಶ್ಯವನ್ನು ನೋಡಿದಾಗ ಶರನ್​ ವಿಚಲಿತರಾಗಿದ್ದರು. ಯಾಕೆಂದರೆ ತುಂಬ ಸ್ಪಷ್ಟವಾಗಿ ಅವರ ಗುಪ್ತಾಂಗ ಕಾಣುವ ರೀತಿಯಲ್ಲಿ ನಿರ್ದೇಶಕರು ಚಿತ್ರಿಸಿದ್ದರು. ಕೂಡಲೇ ಆ ನಿರ್ದೇಶಕನ ಕೆನ್ನೆಗೆ ಬಾರಿಸಿ, ನಂತರ ತಮ್ಮ ಲಾಯರ್​ ಭೇಟಿ ಮಾಡಿದ್ದಾಗಿ ಶರನ್​ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, ಸಿನಿಮಾದಲ್ಲಿ ಕೆಮಿಸ್ಟ್ರೀ ಚೆನ್ನಾಗಿ ಇರಬೇಕಾದರೆ ಸಹ-ನಟರ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಸಿನಿಮಾ ನಿರ್ಮಾಣ ಸಂಸ್ಥೆಯವರು ಬಲವಂತ ಮಾಡುತ್ತಿದ್ದರು ಎಂಬ ಕಹಿ ಸತ್ಯವನ್ನೂ ಶರನ್​ ಬಾಯಿ ಬಿಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಅವರ ‘ದಿ ಬ್ಯೂಟಿ ಆಫ್​ ಲಿವಿಂಗ್​ ಟ್ವೈಸ್​’ ಕೃತಿ ಬಿಡುಗಡೆಗೂ ಮುನ್ನವೇ ಹೈಪ್​ ಪಡೆದುಕೊಂಡಿದೆ.

ಇದನ್ನೂ ಓದಿ: 2016ರಲ್ಲಿ ನಡೆದಿದ್ದ ಪ್ರಕರಣ.. ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಶಿಕ್ಷಕನಿಗೆ 10 ವರ್ಷ ಜೈಲು ಶಿಕ್ಷೆ

ಸುದ್ದಿ ವಿಶ್ಲೇಷಣೆ: ಕನ್ನಡ ನಟಿಯರು ಮಾತ್ರ ಸುಂಟರಗಾಳಿಗೆ ಸಿಲುಕುತ್ತಿರುವುದೇಕೆ?

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!