ಸಜ್ಜನ್ ರಾವ್ ಸರ್ಕಲ್ನಲ್ಲಿ ಅವರೆ ಮೇಳ, ಆದ್ರೆ ಕಸ, ಟ್ರಾಫಿಕ್ನದ್ದೇ ಪ್ರಾಬ್ಲಂ
ಬೆಂಗಳೂರು: ಸ್ವೀಟ್ಸ್ ಅಂದ್ರೆ ಸ್ವೀಟ್ಸ್ಗೂ ಸೈ.. ಸ್ನ್ಯಾಕ್ಸ್ ಅಂದ್ರೆ ಸ್ನಾಕ್ಸ್ಗೂ ಜೈ.. ತಿಂಡಿಗೂ ಓಕೆ.. ಅಡಿಗೆಗೂ ಓಕೆ.. ಟೋಟಲಿ ಅವರೇಕಾಯ್ ಇದ್ರೆ ವೆರೈಟಿ ಖಾದ್ಯಗಳು ರೆಡಿಯಾಗುತ್ತೆ. ಹಿಂಗಾಗೇ ಜನವರಿ ಬಂದ್ರೆ ಬೆಂಗಳೂರಿನ ವಿವಿಪುರಂನಲ್ಲಿ ಸುಪ್ರಸಿದ್ಧ ಅವರೆಕಾಯಿ ಮೇಳ ನಡೆಯುತ್ತೆ. ಆದ್ರೀಗ ಇದೇ ಮೇಳಕ್ಕಾಗಿ ಬಿಜೆಪಿಯಲ್ಲಿ ವಾರ್ ನಡೀತಿದೆ. ‘ಅವರೆ’ ಮೇಳದಿಂದ ಕಸ, ಟ್ರಾಫಿಕ್ನದ್ದೇ ಪ್ರಾಬ್ಲಂ: ವಿವಿಪುರಂನ ಸಜ್ಜನ್ ರಾವ್ ಸರ್ಕಲ್ನಲ್ಲಿ ಪ್ರತೀ ವರ್ಷದ ಜನವರಿ ತಿಂಗಳಲ್ಲಿ ಒಂದು ವಾರದವರೆಗೂ ಅವರೆ ಮೇಳ ನಡೆಯುತ್ತೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ […]
ಬೆಂಗಳೂರು: ಸ್ವೀಟ್ಸ್ ಅಂದ್ರೆ ಸ್ವೀಟ್ಸ್ಗೂ ಸೈ.. ಸ್ನ್ಯಾಕ್ಸ್ ಅಂದ್ರೆ ಸ್ನಾಕ್ಸ್ಗೂ ಜೈ.. ತಿಂಡಿಗೂ ಓಕೆ.. ಅಡಿಗೆಗೂ ಓಕೆ.. ಟೋಟಲಿ ಅವರೇಕಾಯ್ ಇದ್ರೆ ವೆರೈಟಿ ಖಾದ್ಯಗಳು ರೆಡಿಯಾಗುತ್ತೆ. ಹಿಂಗಾಗೇ ಜನವರಿ ಬಂದ್ರೆ ಬೆಂಗಳೂರಿನ ವಿವಿಪುರಂನಲ್ಲಿ ಸುಪ್ರಸಿದ್ಧ ಅವರೆಕಾಯಿ ಮೇಳ ನಡೆಯುತ್ತೆ. ಆದ್ರೀಗ ಇದೇ ಮೇಳಕ್ಕಾಗಿ ಬಿಜೆಪಿಯಲ್ಲಿ ವಾರ್ ನಡೀತಿದೆ.
‘ಅವರೆ’ ಮೇಳದಿಂದ ಕಸ, ಟ್ರಾಫಿಕ್ನದ್ದೇ ಪ್ರಾಬ್ಲಂ: ವಿವಿಪುರಂನ ಸಜ್ಜನ್ ರಾವ್ ಸರ್ಕಲ್ನಲ್ಲಿ ಪ್ರತೀ ವರ್ಷದ ಜನವರಿ ತಿಂಗಳಲ್ಲಿ ಒಂದು ವಾರದವರೆಗೂ ಅವರೆ ಮೇಳ ನಡೆಯುತ್ತೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ನಾಳೆಯಿಂದ ಈ ವರ್ಷದ ಮೇಳ ಶುರುವಾಗ್ಬೇಕಿತ್ತು. ಆದ್ರೆ ಈ ಬಾರಿ ಮೇಳಕ್ಕೆ ಪರ್ಮಿಷನ್ ಕೊಡ್ಬಾರ್ದು ಅಂತಾ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹಾಗೂ ಬಿಜೆಪಿ ಕಾರ್ಪೊರೇಟರ್ ವಾಣಿ ರಾವ್ ಸೇರಿದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸ್ತಿದ್ದಾರೆ. ಮೇಳದಿಂದ ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಉಂಟಾಗ್ತಿದ್ದು, ಹೆಚ್ಚು ಕಸ ಉತ್ಪತ್ತಿಯಾಗ್ತಿದೆ. ಹಾಗೇ ಟ್ರಾಫಿಕ್ ಜಾಮ್ ಉಂಟಾಗ್ತಿದೆ. ಹೀಗಾಗಿ ಮೇಳವನ್ನ ಯಾವ್ದಾದ್ರೂ ಚೌಟ್ರಿಯಲ್ಲಿ ಮಾಡಿಕೊಳ್ಳಲಿ ಅಂತಿದ್ದಾರೆ ಶಾಸಕರು.
ಇತ್ತ ಬಿಜೆಪಿ ಕಾರ್ಪೊರೇಟರ್ ವಾಣಿ ರಾವ್ ಕೂಡ ಮೇಳದಲ್ಲಿ ಒಳ್ಳೆ ಗುಣಮಟ್ಟದ ಆಹಾರ ನೀಡ್ತಿಲ್ಲ. ಹೀಗಾಗೇ ಬೇರೆ ಕಡೆ ಮೇಳ ಮಾಡ್ಲಿ ಅಂತಿದ್ದಾರೆ. ಆದ್ರೆ ಮೇಯರ್ ಗೌತಮ್ ಕುಮಾರ್ ಹಾಗೂ ಡಿಸಿಎಂ ಅಶ್ವತ್ಥ್ ನಾರಾಯಣ್ ಅವರೆ ಮೇಳದ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಮೇಳಕ್ಕೆ ಅನುಮತಿ ನೀಡುವಂತೆ ಪಾಲಿಕೆ ಆಯುಕ್ತರ ಮೇಲೆ ಒತ್ತಡ ಹೇರ್ತಿದ್ದಾರೆ. ಈ ಬಗ್ಗೆ ಮಾತಾಡಿರೋ ಮೇಯರ್ ಮೇಳಕ್ಕೆ ಒಂದು ದಿನದ ಅನುಮತಿ ಕೊಡಿಸುವ ಬಗ್ಗೆ ಚರ್ಚೆ ಮಾಡೋದಾಗಿ ಹೇಳಿದ್ರು.
ಸದ್ಯ ಮೇಳ ನಡೆಸ್ಬೇಕೋ ಬೇಡ್ವೋ ಅನ್ನೋ ಬಗ್ಗೆ ಬಿಜೆಪಿ ನಾಯಕರ ನಡುವೆಯೇ ಗೊಂದಲವಿದೆ. ಹೀಗಾಗಿ ಈ ಗೊಂದಲ ಅವರೆಮೇಳದ ಮೇಲೆ ಎಫೆಕ್ಟ್ ಆಗುತ್ತಾ ಅನ್ನೋದೇ ಪ್ರಶ್ನೆಯಾಗಿದೆ.
Published On - 12:53 pm, Fri, 17 January 20