ಬಾಗಲಕೋಟೆ: ಜಿಲ್ಲೆಯಲ್ಲಿ 608 ಜನರ ರೌಡಿಶೀಟರ್ ಕೇಸ್ ತೆರವು ಮಾಡಲಾಗಿದೆ. ಗುಣ, ಸನ್ನಡತೆ, ವೃದ್ಧರು, ವಲಸೆ ಹೋದ, ಅಪರಾಧಗಳಲ್ಲಿ ಭಾಗಿಯಾಗದ, 2021ರಿಂದ 2022 ಜನವರಿ ವರೆಗಿನ 608 ಜನರ ಕೇಸ್ ವಾಪಸ್ ಪಡೆಯಲಾಗಿದೆ. ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೋಲಾರ: ಬಂಗಾರಪೇಟೆ ಪಟ್ಟಣದಲ್ಲಿ ಫೆಬ್ರವರಿ 4ರ ವರೆಗೆ ನಿಷೇಧಾಜ್ಞೆ ಜಾರಿ
ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಇಂದು (ಫೆಬ್ರವರಿ 1) ಮಧ್ಯರಾತ್ರಿಯಿಂದ ಫೆಬ್ರವರಿ 4ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಯಾಗಿರಲಿದೆ. ಪುರಸಭೆ ಕಟ್ಟಡ ಉದ್ಘಾಟನೆ ಕುರಿತು ಗಲಾಟೆ ಸಾಧ್ಯತೆ ಹಿನ್ನೆಲೆ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್ ದಯಾನಂದ್ ಆದೇಶ ಹೊರಡಿಸಿದ್ದಾರೆ. ಶಾಸಕ ನಾರಾಯಣಸ್ವಾಮಿ ಕಾರ್ಯಕ್ರಮ ಮಾಡುವ ಸಾಧ್ಯತೆ, ಬಿಜೆಪಿ, ‘ಕೈ’ ಕಾರ್ಯಕರ್ತರ ಮಧ್ಯೆ ಗಲಾಟೆ ಸಾಧ್ಯತೆ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು: ವಿದ್ಯುತ್ ಪ್ರವಹಿಸಿ ಎಲೆಕ್ಟ್ರಿಷಿಯನ್ ಸಾವು ಕೇಸ್; ನಾಲ್ವರು ಆರೋಪಿಗಳ ವಿರುದ್ಧ ಎಫ್ಐಆರ್
ಬೆಂಗಳೂರಲ್ಲಿ ವಿದ್ಯುತ್ ಪ್ರವಹಿಸಿ ಎಲೆಕ್ಟ್ರಿಷಿಯನ್ ಸಾವು ಕೇಸ್ ಸಂಬಂಧಿಸಿ ನಾಲ್ವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಇಟಾ ಗಾರ್ಡನ್ ಅಪಾರ್ಟ್‌ಮೆಂಟ್‌ನ ಮ್ಯಾನೇಜರ್ ಶ್ರೀನಿವಾಸ್, ಸೂಪರ್‌ವೈಸರ್ ಬಾಬುರೆಡ್ಡಿ, ನಜೀಬ್, ನಮ್ರತಾ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಇಟಾ ಅಪಾರ್ಟ್‌ಮೆಂಟ್‌ನ ಪ್ರೆಸಿಡೆಂಟ್ ನಮ್ರತಾ ವಿರುದ್ಧ ಕೇಸ್ ದಾಖಲಿಸಲಾಗಿದೆ. ಸಂಪ್ ಕ್ಲೀನ್ ಮಾಡುವಾಗ ಮೋಹನ್ ಕುಮಾರ್ (29) ಸಾವನ್ನಪ್ಪಿದ್ದರು. ಮಾಗಡಿ ರಸ್ತೆಯಲ್ಲಿರುವ ಇಟಾ ಗಾರ್ಡನ್ ಅಪಾರ್ಟ್‌ಮೆಂಟ್ ನಲ್ಲಿ ಘಟನೆ ನಡೆದಿತ್ತು.
ಇತರ ಅಪರಾಧ ಸುದ್ದಿಗಳು
ಹಾವೇರಿ: ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದ ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮನುಜಾ ಬಸಾಪುರ (20) ಎಂಬ ಯುವತಿಯ ಮೃತದೇಹ ಪತ್ತೆ ಆಗಿದೆ. 5 ದಿನಗಳ ಹಿಂದೆ ಗಂಡನ ಮನೆಯಿಂದ ಕಾಣೆಯಾಗಿದ್ದ ಮನುಜಾಳನ್ನು, ಪತಿ ಬಸವರಾಜ ಕುಟುಂಬಸ್ಥರು ಸೇರಿ ಕೊಲೆ ಮಾಡಿ ಕೆರೆಯಲ್ಲಿ ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಾಗಿನೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ಪತ್ನಿಯ ಆಸ್ತಿಗಾಗಿ ಬಾಮೈದನನ್ನು ಭಾವನೇ ಕೊಂದ ದುರ್ಘಟನೆ ನಡೆದಿದೆ. ಕಿಡ್ನ್ಯಾಪ್ ಮಾಡಿ ಶಿವರಾಜ್‌ನನ್ನು ಶಿವಕುಮಾರ್ ಎಂಬವರು ಹತ್ಯೆಗೈದಿದ್ದಾರೆ. ಕೊಲೆ ಪ್ರಕರಣದಲ್ಲಿ ಸಿದ್ದು, ಶಿವು, ಭೀಮಣ್ಣ ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿ ಶಿವಕುಮಾರ್ ಪರಾರಿ ಆಗಿದ್ದಾನೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಚಿತ್ರದುರ್ಗ: ಜಮೀನು ಖಾತೆ ಮಾಡಿಕೊಡಲು 5 ಸಾವಿರ ಲಂಚ ಸ್ವೀಕರಿಸುತ್ತಿದ್ದ ಹೊಸದುರ್ಗ ತಾಲೂಕಿನ ಮಾಡದಕೆರೆ ಗ್ರಾಮ ಲೆಕ್ಕಿಗ ಸಿದ್ದು ಬಣಕಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಲಕ್ಕಹಳ್ಳಿ ಗ್ರಾ.ಪಂ ಕಚೇರಿಯಲ್ಲಿ ವಿಜಯಕುಮಾರ್ ಎಂಬುವರಿಂದ 5 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ದಾಳಿ ನಡೆಸಲಾಗಿತ್ತು.
ಹಾಸನ: ಆಲೂರು ತಾಲೂಕಿನ ಹರಿಹಳ್ಳಿ ಕೆಂಚಾಂಬ ದೇಗುಲದ ಬಳಿ ಆಕಸ್ಮಿಕ ಬೆಂಕಿಯಿಂದ ರಸ್ತೆಯಲ್ಲಿ ಇಂಡಿಕಾ ಕಾರು ಹೊತ್ತಿ ಉರಿದ ಘಟನೆ ನಡೆದಿದೆ. ಕಾರಿನಲ್ಲಿದ್ದ ಗಂಗಾಧರ್ ಸೇರಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: Crime News: ಆಸ್ತಿ ವಿಚಾರಕ್ಕೆ ತಾಯಿ ಮೇಲೆ ಇಟ್ಟಿಗೆಯಿಂದ ಹಲ್ಲೆ; ಬಂಧನದ ಭೀತಿಯಿಂದ ವಿಷ ಸೇವಿಸಿದ ಮಗ
ಇದನ್ನೂ ಓದಿ: Crime News: ತ್ರಿಕೋನ ಪ್ರೇಮ ಪ್ರಕರಣದಲ್ಲಿ ಲಾಯ್ಡ್ ಡಿಸೋಜ ಸಾವು; ಘಟನೆಯ ವಿವರ ನೀಡಿದ ಪೊಲೀಸ್ ಆಯುಕ್ತ