ನೀರಿನ ಘಟಕದಲ್ಲೂ ದುಡ್ಡು ನುಂಗಿದ ಭೂಪ, ಕೊನೆಗೆ ದುಡ್ಡು ಕಕ್ಕಿಸಿದ ಜಿ.ಪಂ CEO
ಬೆಂಗಳೂರು: ಜನಪ್ರತಿನಿಧಿ ಅನ್ನಿಸಿಕೊಂಡಾಕ್ಷಣ ದುಡ್ಡು ನುಂಗುವುದೇ ಪ್ರೋಗ್ರಾಂ ಹಾಕಿಕೊಂಡು ಬಿಡುತ್ತಾರೆ ಜನ. ಅವರು ಬೇರೆ ಯಾರೂ ಅಲ್ಲ.. ನಮ್ಮ-ನಿಮ್ಮ ಮಧ್ಯೆಯೇ ಇದ್ದವರು ಎಂಬುದು ಮತ್ತಷ್ಟು ಬೇಸರದ ಸಂಗತಿ. ಬೆಂಗಳೂರು ಉತ್ತರ ತಾಲೂಕಿನ ಕಾಚೋಹಳ್ಳಿ ಗ್ರಾಮ ಪಂಚಾಯತಿಯಲ್ಲಿಯೂ ಹೀಗೆ ಆಗಿದೆ. ಅದೂ ಕುಡಿಯುವ ನೀರಿನಲ್ಲೂ ದುಡ್ಡು ತಿಂದಿದ್ದಾನೆ ಈ ಭೂಪ. ಕುಡಿಯುವ ನೀರಿನ ಘಟಕದ ದುಡ್ಡು ನುಂಗಿದ ಆರೋಪದ ಮೇಲೆ ಜಿಲ್ಲಾ ಪಂಚಾಯತಿ ಕಾಚೋಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನಿಗೆ ನೋಟಿಸ್ ನೀಡಿದೆ. ಉಪಾಧ್ಯಕ್ಷ ನರಸಿಂಹಮೂರ್ತಿಗೆ ಇದೇ ಗ್ರಾಮ ಪಂಚಾಯ್ತಿಯ […]
ಬೆಂಗಳೂರು: ಜನಪ್ರತಿನಿಧಿ ಅನ್ನಿಸಿಕೊಂಡಾಕ್ಷಣ ದುಡ್ಡು ನುಂಗುವುದೇ ಪ್ರೋಗ್ರಾಂ ಹಾಕಿಕೊಂಡು ಬಿಡುತ್ತಾರೆ ಜನ. ಅವರು ಬೇರೆ ಯಾರೂ ಅಲ್ಲ.. ನಮ್ಮ-ನಿಮ್ಮ ಮಧ್ಯೆಯೇ ಇದ್ದವರು ಎಂಬುದು ಮತ್ತಷ್ಟು ಬೇಸರದ ಸಂಗತಿ. ಬೆಂಗಳೂರು ಉತ್ತರ ತಾಲೂಕಿನ ಕಾಚೋಹಳ್ಳಿ ಗ್ರಾಮ ಪಂಚಾಯತಿಯಲ್ಲಿಯೂ ಹೀಗೆ ಆಗಿದೆ. ಅದೂ ಕುಡಿಯುವ ನೀರಿನಲ್ಲೂ ದುಡ್ಡು ತಿಂದಿದ್ದಾನೆ ಈ ಭೂಪ.
ಕುಡಿಯುವ ನೀರಿನ ಘಟಕದ ದುಡ್ಡು ನುಂಗಿದ ಆರೋಪದ ಮೇಲೆ ಜಿಲ್ಲಾ ಪಂಚಾಯತಿ ಕಾಚೋಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನಿಗೆ ನೋಟಿಸ್ ನೀಡಿದೆ. ಉಪಾಧ್ಯಕ್ಷ ನರಸಿಂಹಮೂರ್ತಿಗೆ ಇದೇ ಗ್ರಾಮ ಪಂಚಾಯ್ತಿಯ ಒಬ್ಬ ಸದಸ್ಯನೂ ಸಾಥ್ ನೀಡಿದ್ದಾನೆ. ಘಟಕದಲ್ಲಿ ನೀರು ಪಡೆಯಲು ಮೆಷಿನ್ ಗೆ ಹಾಕುವ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಈ ಇಬ್ಬರೂ ಐನಾತಿಗಳು. ತನಿಖೆ ನಡೆಸಿದ ಜಿಲ್ಲಾ ಪಂಚಾಯತಿ ಸಿಇಓ ಹಣ ಕಟ್ಟುವಂತೆ ಆದೇಶಿಸಿದ್ದಾರೆ.
ಕಾಚೋಹಳ್ಳಿ ಗ್ರಾಮದಲ್ಲಿರುವ 2 ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ಈ ದುರ್ವ್ಯವಹಾರ ನಡೆದಿದೆ. ಘಟಕದಿಂದ ಬಂದ 4 ಲಕ್ಷ 80 ಸಾವಿರ ರೂಪಾಯಿಯನ್ನು ಇವರಿಬ್ಬರೂ ಗುಳುಂ ಮಾಡಿದ್ದಾರೆ ಎಂದು ಟಿವಿ9 ಗೆ PDO ಸುಕನ್ಯಾ ಮಾಹಿತಿ ನೀಡಿದ್ದಾರೆ.
ಅರೋಪ ಸಾಬೀತು ಬಳಿಕ 1 ಲಕ್ಷ 20 ಸಾವಿರ ಹಣವನ್ನು ಗ್ರಾಮ ಪಂಚಾಯ್ತಿ ವಸೂಲಿ ಮಾಡುವಲ್ಲಿ ಯಶಸ್ವಿಯಾಗಿರುವುದು ಸಮಾಧಾನಕರ. ಆದ್ರೆ ಉಳಿದ ಹಣ ಕಟ್ಟಲು ಗ್ರಾ.ಪಂ. ಉಪಾಧ್ಯಕ್ಷ ಮೀನಾಮೇಷ ಎಣಿಸುತ್ತಿದ್ದಾನೆ. ಬೇಲಿಯೇ ಎದ್ದು ಹೊಲ ಮೇಯ್ದಿರುವುದಕ್ಕೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published On - 11:03 am, Fri, 19 June 20