AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಮಂತ್​ ಮಾಡಿದ ತಪ್ಪಿಗೆ ಮನೆಯವರಿಗೆ ಘನಘೋರ ಶಿಕ್ಷೆ; ಈ ವಾರವೇ ಎಲಿಮಿನೇಟ್​ ಆಗ್ತಾರಾ ಬ್ರೋ ಗೌಡ?

ಮೈಕ್​ ಇದ್ದ ಹೊರತಾಗಿಯೂ ಬ್ರೋ ಗೌಡ ಎಲ್ಲರ ಕಿವಿಯಲ್ಲಿ ಹೋಗಿ ಮಾತನಾಡುತ್ತಿದ್ದರು. ಇದಕ್ಕೆ ಸುದೀಪ್​ ಸಿಟ್ಟಾಗಿದ್ದರು. ಅಲ್ಲದೆ ಶಿಕ್ಷೆ ನೀಡುವುದಾಗಿಯೂ ಹೇಳಿದ್ದರು.

ಶಮಂತ್​ ಮಾಡಿದ ತಪ್ಪಿಗೆ ಮನೆಯವರಿಗೆ ಘನಘೋರ ಶಿಕ್ಷೆ; ಈ ವಾರವೇ ಎಲಿಮಿನೇಟ್​ ಆಗ್ತಾರಾ ಬ್ರೋ ಗೌಡ?
ನಿಧಿ-ಶಮಂತ್​
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: Mar 15, 2021 | 3:26 PM

Share

ಶಮಂತ್​ ಅಲಿಯಾಸ್​ ಬ್ರೋ ಗೌಡ ಅವರ ಸ್ವಾರ್ಥಕ್ಕೆ ಇಡೀ ಮನೆಯವರು ಬಲಿ ಪಶು ಆಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ. ಬ್ರೋ ಗೌಡ ತಾನು ಸೇಫ್​ ಆಗೋದಕ್ಕೆ ಎಮೋಷನಲ್​ ನಾಟಕವಾಡಿದರು ಎನ್ನುವ ಮಾತು ಕೇಳಿ ಬಂದ ಬೆನ್ನಲ್ಲೇ ಇಡೀ ಮನೆಯವರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದು ಎಲ್ಲಿ ಹೋಗಿ ನಿಲ್ಲುತ್ತದೆ ಎನ್ನುವುದು ಸದ್ಯದ ಕುತೂಹಲ. ಮೈಕ್​ ಇದ್ದ ಹೊರತಾಗಿಯೂ ಬ್ರೋ ಗೌಡ ಎಲ್ಲರ ಕಿವಿಯಲ್ಲಿ ಹೋಗಿ ಮಾತನಾಡುತ್ತಿದ್ದರು. ಇದಕ್ಕೆ ಸುದೀಪ್​ ಸಿಟ್ಟಾಗಿದ್ದರು. ಲಕ್ಷಾಂತರ ರೂಪಾಯಿ ಖರ್ಚುಮಾಡಿ ಮೈಕ್​ ನೀಡುತ್ತೇವೆ. ಆದರೆ, ಕಿವಿಯಲ್ಲಿ ಹೋಗಿ ಮಾತನಾಡುವ ಮೂಲಕ ಶಮಂತ್​  ಅವರು ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದಿದ್ದ ಸುದೀಪ್​, ಇದಕ್ಕೆ ಶಿಕ್ಷೆ ನೀಡುವುದಾಗಿಯೂ ಹೇಳಿದರು.

ಬಿಗ್​ ಬಾಸ್​ ಮೂರನೇ ವಾರದ ಎಲಿಮಿನೇಷನ್​ಗೆ ಶಮಂತ್​ ನೇರವಾಗಿ ನಾಮಿನೇಟ್​ ಆಗಬೇಕು ಅಥವಾ ಮನೆಯವರೆಲ್ಲರೂ ಬೆಡ್​ರೂಂ ಏರಿಯಾವನ್ನು ಬಿಟ್ಟುಕೊಡಬೇಕು ಎನ್ನುವ ಕಂಡೀಷನ್​ ಹಾಕಿದರು ಸುದೀಪ್​. ಬ್ರೋ ಗೌಡ ಅವರನ್ನು ಉಳಿಸಲು ಮನೆಯಲ್ಲಿ ಕೆಲವರು ಸಮ್ಮತಿ ಸೂಚಿಸಿದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದರು. ಆದರೆ, ಶಮಂತ್​ ಎಮೋಷನಲ್​ ಆಗಿ ಡೈಲಾಗ್​ ಹೊಡೆದರು. ನನ್ನ ಅಪ್ಪ-ಅಮ್ಮ ಉಸಿರಾಡ್ತಿರೋದು ನನ್ನ ಹೆಸರಿಂದ ಎಂದು ಹೇಳಿ ಭಾವುಕರಾದರು. ಹೀಗಾಗಿ ಮನೆಯವರೆಲ್ಲರೂ ಬೆಡ್​ ರೂಂ ಬಿಡೋಕೆ ಒಪ್ಪಿಕೊಂಡರು. ಈ ಮೂಲಕ ಶಮಂತ್​ ಸೇಫ್​ ಆದರು.

ಶಮಂತ್​ ಅವರನ್ನು ಉಳಿಸೋಕೆ ಹೋಗಿ ಈಗ ಮನೆಮಂದಿಯೆಲ್ಲ ಲಿವಿಂಗ್ ಏರಿಯಾದಲ್ಲಿ ಉಳಿದುಕೊಳ್ಳುವಂತಾಗಿದೆ. ಯಾರಿಗೂ ನಿದ್ರೆ ಕೂಡ ಬರುತ್ತಿಲ್ಲ. ಇದು ಮನೆಯವರ ಕೋಪಕ್ಕೆ ಕಾರಣವಾಗಿದೆ. ಎಲ್ಲರೂ ಶಮಂತ್​ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಷ್ಟೇ ಅಲ್ಲ ಶಮಂತ್​ ಸ್ವಾರ್ಥ ಜೀವಿ ಎಂದು ಕಿಡಿಕಾರುತ್ತಿದ್ದಾರೆ.

ಇಂದು ಎಲಿಮಿನೇಷನ್​ಗೆ ನಾಮಿನೇಷನ್​ ಇರಲಿದೆ. ಈ ವೇಳೆ ಶಮಂತ್​ ಅವರನ್ನೇ ನಾವು ನಾಮಿನೇಟ್​ ಮಾಡುತ್ತೇವೆ ಎಂದು ಮನೆ ಮಂದಿ ಹೇಳುತ್ತಿದ್ದಾರೆ. ಈ ಮೂಲಕ ಈ ವಾರ ಶಮಂತ್​ ನಾಮಿನೇಟ್​ ಆಗುವ ಎಲ್ಲಾ ಲಕ್ಷಣ ಇದೆ. ಮೊದಲ ಎರಡು ವಾರ ಸೇಫ್​ ಆಗಿದ್ದ ಶಮಂತ್​ ಈ ವಾರ ನಾಮಿನೇಟ್​ ಆದರೆ ಸೇಫ್​ ಆಗುತ್ತಾರೆಯೇ ಎನ್ನುವುದೇ ಸದ್ಯದ ಪ್ರಶ್ನೆ.

ಇದನ್ನೂ ಓದಿ: BBK8: ಲ್ಯಾಗ್​ ಮಂಜುಗೆ ಮದುವೆ ಆಗಿರುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಯಾರಿಗೂ ಗೊತ್ತಿಲ್ವಂತೆ!

100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ