AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ಬಿಗ್​ ಬಾಸ್​ ಕನ್ನಡ ಎರಡನೇ ವಾರದ ಎಲಿಮಿನೇಷನ್​ಗೆ 8 ಸದಸ್ಯರು ನಾಮಿನೇಟ್​

Bigg Boss Kannada 2nd Week Elimination: ಕಳೆದ ಬಾರಿ ನೇರವಾಗಿ ನಾಮಿನೇಟ್​ ಆಗಿದ್ದ ನಿರ್ಮಲಾ ಈ ಬಾರಿಯೂ ಅತಿ ಹೆಚ್ಚು ಮತ ಪಡೆದು ನಾಮಿನೇಟ್​ ಆಗಿದ್ದಾರೆ.

BBK8: ಬಿಗ್​ ಬಾಸ್​ ಕನ್ನಡ ಎರಡನೇ ವಾರದ ಎಲಿಮಿನೇಷನ್​ಗೆ 8 ಸದಸ್ಯರು ನಾಮಿನೇಟ್​
ಬಿಗ್​​ಬಾಸ್​​ ಕನ್ನಡ 8
ರಾಜೇಶ್ ದುಗ್ಗುಮನೆ
| Updated By: Digi Tech Desk|

Updated on:Mar 09, 2021 | 8:28 AM

Share

ಕನ್ನಡ ಬಿಗ್​ ಬಾಸ್​ ಎಂಟನೇ ಸೀಸನ್​ನ ಮೊದಲೇ ವಾರದಲ್ಲಿ ಧನುಶ್ರೀ ನಾಮಿನೇಟ್​ ಆಗಿ ಮನೆಯಿಂದ ಹೊರಹೋಗಿದ್ದರು. ಈಗ ಎರಡನೇ ವಾರದ ಎಲಿಮಿನೇಷನ್​​ ಪ್ರಕ್ರಿಯೆ ಆರಂಭವಾಗಿದೆ. ಈ ವಾರ ಎಂಟು ಜನರು ಬಿಗ್​ ಬಾಸ್​ ಮನೆಯಲ್ಲಿ ನಾಮಿನೇಟ್​ ಆಗಿದ್ದಾರೆ. ಅವರ ಹೆಸರುಗಳ ಬಗ್ಗೆ ಇಲ್ಲಿದೆ ಮಾಹಿತಿ. ಕಳೆದ ಬಾರಿ ನೇರವಾಗಿ ನಾಮಿನೇಟ್​ ಆಗಿದ್ದ ನಿರ್ಮಲಾ ಈ ಬಾರಿಯೂ ಅತಿ ಹೆಚ್ಚು ಮತ ಪಡೆದು ನಾಮಿನೇಟ್​ ಆಗಿದ್ದಾರೆ. ಭಿನ್ನಾಭಿಪ್ರಾಯ, ಎಲ್ಲರ ಜತೆ ಹೊಂದುಕೊಳ್ಳುತ್ತಿಲ್ಲ, ಅವರು ತೆಗೆದುಕೊಳ್ಳುವ ನಿರ್ಧಾರ ಸರಿ ಇರುವುದಿಲ್ಲ, ಅವರಿಂದ ಮನೆಯ ವಾತಾವರಣ ಬದಲಾಗಿದೆ ಎಂದು ಮನೆಯ ಸದಸ್ಯರು ಕಾರಣ ನೀಡಿದರು.

ಪ್ರಶಾಂತ್​ ಸಂಬರಗಿ ಕೂಡ ಈ ಬಾರಿ ನಾಮಿನೇಟ್​ ಆದರು. ಪ್ರಶಾಂತ್​ ಡಾಮಿನೇಟ್​ ಮಾಡುತ್ತಾರೆ. ಎಲ್ಲರನ್ನೂ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಮಾತನಾಡುತ್ತಾರೆ ಎನ್ನುವ ಕಾರಣ ನೀಡಿ ಅವರನ್ನು ಮನೆಯ ಸದಸ್ಯರು ನಾಮಿನೇಟ್​ ಮಾಡಿದರು. ಎಲ್ಲರ ಜತೆ ಸರಿಯಾಗಿ ಬೆರೆಯುತ್ತಿಲ್ಲ, ಒಂಟಿಯಾಗಿ ಇರುತ್ತಾರೆ ಎನ್ನುವ ಕಾರಣ ನೀಡಿ ದಿವ್ಯಾ ಸುರೇಶ್​ ನಾಮಿನೇಟ್​ ಆದರು.

ಇವರ ಜತೆಗೆ ಗೀತಾ, ನಿಧಿ ಸುಬ್ಬಯ್ಯ, ವಿಶ್ವನಾಥ್​ ಮತ್ತು ಚಂದ್ರಕಲಾ ಅವರ ಮೇಲೂ ಈ ಬಾರಿಯ ನಾಮಿನೇಟ್​ ಕತ್ತಿ ತೂಗಾಡುತ್ತಿದೆ. ಇನ್ನು, ಮನೆಯ ಕ್ಯಾಪ್ಟನ್​ ಬ್ರೋ ಗೌಡಗೆ ಒಬ್ಬರನ್ನು ನೇರವಾಗಿ ನಾಮಿನೇಟ್​ ಮಾಡುವ ಅವಕಾಶ ನೀಡಲಾಯಿತು. ಅವರು ಶುಭಾ ಪೂಂಜಾ ಅವರನ್ನು ನಾಮಿನೇಟ್​ ಮಾಡಿದರು.

ಇದನ್ನೂ ಓದಿ: BBK8: ನಾನು ಕ್ಯಾಪ್ಟನ್​ ಆದ್ರೆ ನಿಂಗ್​ ಐತೆ ಹಬ್ಬ; ಶಮಂತ್​ಗೆ ಎಚ್ಚರಿಕೆ ನೀಡಿದ ಲ್ಯಾಗ್​ ಮಂಜು

Published On - 10:35 pm, Mon, 8 March 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ