
ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ತಾಲೂಕು ಆಸ್ಪತ್ರೆಯ ಸಿಬ್ಬಂದಿಗೆ ಕೊರೊನಾ ಪತ್ತೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನ 2 ದಿನಗಳ ಕಾಲ ಸೀಲ್ಡೌನ್ ಮಾಡಲಾಗಿದೆ.
ಗುಪ್ತರೋಗಕ್ಕೆ ಔಷಧಿ ನೀಡುತ್ತಿದ್ದ ಸಿಬ್ಬಂದಿಗೆ ನಿನ್ನೆ ಕೊರೊನಾ ದೃಢವಾಗಿದೆ. ಹೀಗಾಗಿ, ಸೋಂಕಿತ ಸಿಬ್ಬಂದಿಯನ್ನ ತಾಲೂಕಿನ ಹೊರ ವಲಯದ ಬಾಣಂತಿಕೊಡಿ ಗ್ರಾಮದಲ್ಲಿರುವ ಕೊವಿಡ್ ಕೇರ್ ಸೆಂಟರ್ಗೆ ಶಿಫ್ಟ್ ಮಾಡಲಾಗಿದೆ. ಇದೀಗ, ಸಿಬ್ಬಂದಿಯಿಂದ ಔಷಧಿ ತೆಗೆದುಕೊಂಡ ರೋಗಿಗಳಿಗೆ ಸೋಂಕಿನ ಭೀತಿ ಶುರುವಾಗಿದೆ.
Published On - 2:01 pm, Sun, 2 August 20