ಆಸ್ಪತ್ರೆನಾ, ರೆಸಾರ್ಟಾ..? ಆಸ್ಪತ್ರೆಯಲ್ಲಿ ಸೋಂಕಿತರ ಸಖತ್ ಡ್ಯಾನ್ಸ್!

  • TV9 Web Team
  • Published On - 12:02 PM, 16 Jul 2020
ಆಸ್ಪತ್ರೆನಾ, ರೆಸಾರ್ಟಾ..? ಆಸ್ಪತ್ರೆಯಲ್ಲಿ ಸೋಂಕಿತರ ಸಖತ್ ಡ್ಯಾನ್ಸ್!

ಮಂಡ್ಯ: ಕೊರೊನಾ ಸೋಂಕು ದೇಹ ಸೇರುತ್ತಿದ್ದಂತೆ ಬದುಕೇ ಮುಗಿದು ಹೋಯಿತು ಎಂದು ಖಿನ್ನತೆಗೆ ಒಳಗಾಗುವವರೆ ಹೆಚ್ಚು. ಆದರೆ ಇಲ್ಲಿ ಸೋಂಕಿತರು ತಮ್ಮ ಎಲ್ಲಾ ನೋವನ್ನು ಮರೆತು ಕೋವಿಡ್ ಆಸ್ಪತ್ರೆಯಲ್ಲಿ ಸಖತ್ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ.

ಕೋವಿಡ್ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೇಕಾದ ಸೌಲಭ್ಯದ ವ್ಯವಸ್ಥೆ ಇರುವುದಿಲ್ಲ. ಹಾಗೂ ಚಿಕಿತ್ಸೆ ಸರಿಯಾಗಿ ಕೊಡಲ್ಲ ಎಂಬ ಸುದ್ದಿಗಳನ್ನು ಪ್ರತಿ ನಿತ್ಯ ಕೇಳಿ ಬರುತ್ತದೆ. ಆದರೆ ಇದರ ನಡುವೆ ಇಲ್ಲೊಂದು ಆಸ್ಪತ್ರೆಯಲ್ಲಿ ಸೋಂಕಿತರು ಮಸ್ತ್ ಎಂಜಾಯ್ ಮಾಡುತ್ತಾ ಟೈಮ್ ಪಾಸ್ ಮಾಡುತ್ತಿದ್ದಾರೆ. ಕರೊನಾ ಆತಂಕ ಬಿಟ್ಟು ವಾರ್ಡ್ ನಲ್ಲಿ ಕುಣಿದು ಕುಪ್ಪಳಿಸಿ ಮನರಂಜಿಸ್ತಿದ್ದಾರೆ. ಆಸ್ಪತ್ರೆಯಲ್ಲಿದ್ರೂ ರೆಸಾರ್ಟ್ ನಲ್ಲಿರುವಂತೆ ಎಂಜಾಯ್ ಮಾಡ್ತಿದ್ದಾರೆ.

ಕೊರೊನಾ ಗೆದ್ದ ವೀರರು ಎಂಬ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ ಸೋಂಕಿತರಾಗಿ ಆಸ್ಪತ್ರೆ ಸೇರಿದವರೆಲ್ಲಾ ಇಂದು ಸ್ನೇಹಿತರಾಗಿದ್ದಾರೆ. ಇವರು ಆಸ್ಪತ್ರೆಯ ಊಟದ ವ್ಯವಸ್ಥೆ ಮತ್ತು ವೈದ್ಯರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ಉತ್ತಮವಾಗಿ ಚಿಕಿತ್ಸೆ ನೀಡ್ತಿದ್ದಾರೆ. ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿ ನೀಡದಂತಹ ಗುಣಮಟ್ಟದ ಆಹಾರ ನೀಡ್ತಿದ್ದಾರೆ ಎಂದು ವೈದ್ಯರ ಪರ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸದ್ಯ ಸೋಂಕಿತರು ಡ್ಯಾನ್ಸ್ ಮಾಡ್ತಿರೊ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈದ್ಯೋ ನಾರಾಯಣ ಹರಿ ಎಂಬ ಮಾತು ಸತ್ಯವಾಗಿದೆ.