AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ vs ಜಪಾನ್ ನಡುವೆ 5 ಓವರ್​ಗಳ ಪಂದ್ಯ!

ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇಂದು (ಸೆಪ್ಟೆಂಬರ್ 22, 2026) ಹೊಸದೊಂದು ಸುವರ್ಣ ಅಧ್ಯಾಯವೊಂದು ಶುರುವಾಗಿದೆ. ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡ, ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತ ಮತ್ತು ಉದಯೋನ್ಮುಖ ಜಪಾನ್ ಪುರುಷರ ಕ್ರಿಕೆಟ್ ತಂಡಗಳು ತಮ್ಮ ಇತಿಹಾಸದಲ್ಲೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿವೆ.

ಭಾರತ vs ಜಪಾನ್ ನಡುವೆ 5 ಓವರ್​ಗಳ ಪಂದ್ಯ!
IND vs JAPImage Credit source: x.com
ಝಾಹಿರ್ ಯೂಸುಫ್
|

Updated on: Sep 22, 2026 | 12:33 PM

Share

ಭಾರತ ಮತ್ತು ಜಪಾನ್​ ನಡುವಣ ಟಿ20 ಪಂದ್ಯ ಶುರುವಾಗಿದೆ. ಜಪಾನ್​ನ ಸನೋ ಇಂಟರ್​ನ್ಯಾಷನಲ್​ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ. ಮಳೆಯ ಕಾರಣದಿಂದಾಗಿ ಮೈದಾನ ಒದ್ದೆಯಾಗಿದ್ದರಿಂದ ಪಂದ್ಯ ಆರಂಭವಾಗುವುದು ತಡವಾಗಿತ್ತು. ಈ ಹಿನ್ನೆಲೆಯಲ್ಲಿ ಓವರ್‌ಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿದ್ದು, ಪಂದ್ಯವನ್ನು ಪ್ರತಿ ತಂಡಕ್ಕೆ ತಲಾ 5 ಓವರ್‌ಗಳಿಗೆ ಸೀಮಿತಗೊಳಿಸಲಾಗಿದೆ.

ಇನ್ನು ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಿದೆ. ಆದರೆ ಈ ಆಡುವ ಬಳಗದಲ್ಲಿ ಯುವ ದಾಂಡಿಗ ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಲಾಗಿಲ್ಲ. ಅದರಂತೆ  ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಓಪನರ್​ಗಳಾಗಿ ಕಣಕ್ಕಿಳಿಯಲಿದ್ದಾರೆ.

ಭಾರತ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಯಶ್ ಠಾಕೂರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್.

ಜಪಾನ್ (ಪ್ಲೇಯಿಂಗ್ XI): ಲಾಚ್ಲಾನ್ ಯಮಾಮೊಟೊ-ಲೇಕ್, ರಿಯೊ ಸಕುರಾನೊ-ಥಾಮಸ್, ಕೆಂಡೆಲ್ ಕಡೋವಾಕಿ-ಫ್ಲೆಮಿಂಗ್ (ನಾಯಕ), ಬೆಂಜಮಿನ್ ಇಟೊ-ಡೇವಿಸ್, ವಟಾರು ಮಿಯೌಚಿ, ಅಲೆಕ್ಸಾಂಡರ್ ಶಿರೈ-ಪ್ಯಾಟ್ಮೋರ್ (ವಿಕೆಟ್ ಕೀಪರ್), ಚಾರ್ಲಿ ಹರಾ-ಹಿಂಝೆ, ಇಬ್ರಾಹಿಂ ಟಕಾಝುಕಿಯಾ, ಟಕಾಝುಕಿಯಾ, ಡೆಕ್ಕೊಮಾಕ್ ಶೋಮಾ ಸುಗಯಾ-ಸ್ಲೇಟರ್.

ಯಾಕಾಗಿ ಈ ಪಂದ್ಯ?

ಭಾರತ ಮತ್ತು ಜಪಾನ್ ದೇಶಗಳ ನಡುವೆ ರಾಜತಾಂತ್ರಿಕ ಬಾಂಧವ್ಯ ಆರಂಭವಾಗಿ ಯಶಸ್ವಿ 75 ವರ್ಷಗಳು ಸಂದಿವೆ. ಈ ಐತಿಹಾಸಿಕ ಮೈಲಿಗಲ್ಲನ್ನು ಕ್ರೀಡೆಯ ಮೂಲಕ ಸಂಭ್ರಮಿಸಲು ಉಭಯ ದೇಶಗಳ ಪ್ರಧಾನಿ ಆಶಯದಂತೆ ‘ಸ್ಪೋರ್ಟ್ 75’ ಎಂಬ ವಿಶೇಷ ಉಪಕ್ರಮವನ್ನು ಕೈಗೊಳ್ಳಲಾಗಿದೆ.

ಈ ಮಹತ್ವದ ಯೋಜನೆಯ ಮೊದಲ ಹೆಜ್ಜೆಯಾಗಿ ಬಿಸಿಸಿಐ ಮತ್ತು ಜಪಾನ್ ಕ್ರಿಕೆಟ್ ಅಸೋಸಿಯೇಷನ್ ಜಂಟಿಯಾಗಿ ಈ ಸ್ಮರಣೀಯ ಪಂದ್ಯವನ್ನು ಆಯೋಜಿಸಿವೆ. ಜಪಾನ್ ಹಾಗೂ ಪೂರ್ವ ಏಷ್ಯಾದಲ್ಲಿ ಕ್ರಿಕೆಟ್ ಕ್ರೀಡೆಯನ್ನು ವ್ಯಾಪಕವಾಗಿ ಉತ್ತೇಜಿಸುವುದು ಈ ಪಂದ್ಯದ ಮುಖ್ಯ ಆಶಯವಾಗಿದೆ.

ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಶ್ರೇಯಸ್ ಅಯ್ಯರ್ (ನಾಯಕ), ಶಿವಂ ದುಬೆ, ಇಶಾನ್ ಕಿಶನ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಯಶ್ ಠಾಕೂರ್, ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ವಿಪ್ರಾಜ್ ನಿಗಮ್, ವೈಭವ್ ಸೂರ್ಯವಂಶಿ.

ಇದನ್ನೂ ಓದಿ: ಮುಖ ಮುಚ್ಚಿಕೊಂಡು ಮನೆಗೆ ಹೋಗಿ: ವಾಸಿಂ ಅಕ್ರಮ್ ಗರಂ!

ಜಪಾನ್ ತಂಡ: ಕೆಂಡೆಲ್ ಕಡೋವಾಕಿ-ಫ್ಲೆಮಿಂಗ್ (ನಾಯಕ), ಶಿರೈ ಪಾಟ್ಮೋರ್ (ವಿಕೆಟ್ ಕೀಪರ್), ಅಲೆಸ್ಟರ್ ಫ್ಲೆಮಿಂಗ್, ಬೆಂಜಮಿನ್ ಇಟೊ ಡೇವಿಸ್, ರಿಯೊ ಸಕುರಾನೊ ಥಾಮಸ್, ಕೊಹೆಯ್ ಕುಬೊಟಾ, ವಟಾರು ಮಿಯೌಚಿ, ಡೆಕ್ಲಾನ್ ಸುಜುಕಿ, ಇಬ್ರಾಹಿಂ ಟಕಹಾಶಿ, ಮಕೊಟೊ ತನಿಯಮಾ, ಲಾಚ್ಲಾನ್ ಯಾಮಾಮೊಟೊ, ಲಾಚ್ಲಾನ್ ಯಮಾಮೊಟೊ ಹರಾ-ಹಿಂಜೆ, ಶೋಮಾ ಸ್ಲೇಟರ್, ಜೇಕ್ ಕುಸುದಾ-ನೈರ್ನ್.

Follow Us