
ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಮಗ್ಗಿದರಾಗಿಹಳ್ಳಿ ಬಳಿ ಇರುವ ಸರ್ಕಾರಿ ವಸತಿ ಶಾಲೆಯಲ್ಲಿ ಮಾಡಲಾಗಿರುವ ಕೊವಿಡ್ ಕೇರ್ ಸೆಂಟರ್‌ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ.
ಸೆಂಟರ್‌ನಲ್ಲಿ ದಾಖಲಾಗಿರುವ ಸೋಂಕಿತರು ಪ್ರತಿ ನಿತ್ಯ ಅನೇಕ ಸಮಸ್ಯೆಗಳಿಂದ ಪರದಾಡುವಂಥ ಸ್ಥಿತಿ ಉದ್ಭವಿಸಿದೆ. ಕೊವಿಡ್ ಕೇರ್ ಸೆಂಟರ್‌ನಲ್ಲಿ ನೀರಿಲ್ಲ. ಸೊಳ್ಳೆ ಕಾಟ ಹೆಚ್ಚಾಗಿದೆ. ಜೊತೆಗೆ, ಊಟದ ವ್ಯವಸ್ಥೆಯೂ ಸರಿಯಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ. ಬಹುತೇಕ ಸೋಂಕಿತರಿಗೆ ಇದೇ ಕೇಂದ್ರದಲ್ಲಿರಲು ಏರ್ಪಾಡು ಮಾಡಲಾಗಿದೆ. ಆದರೆ ಅಲ್ಲಿನ ಅವ್ಯವಸ್ಥೆ ಕುರಿತು ಸೋಂಕಿತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.