CS ಕೈ ಸೇರಿದ ರಾಜೀನಾಮೆ ಪತ್ರ.. ಮುಗಿಯಿತಾ ರವೀಂದ್ರನಾಥ್ IPS ಸೇವೆ, ಮುಂದೇನು?
ಬೆಂಗಳೂರು: ಸೀನಿಯಾರಿಟಿ ಇಲ್ಲದಿದ್ದರೂ ಸುನಿಲ್ ಕುಮಾರ್‌ಗೆ ಎಡಿಜಿಪಿ ಶ್ರೇಣಿಯಿಂದ ಡಿಜಿಪಿ ಶ್ರೇಣಿಗೆ ಬಡ್ತಿ ನೀಡಿದಕ್ಕೆ ಐಪಿಎಸ್ ಅಧಿಕಾರಿ ಡಾ. ಪಿ. ರವೀಂದ್ರನಾಥ್ ಅಸಮಾಧಾನಗೊಂಡು ಮೊನ್ನೆ ರಾತ್ರೋರಾತ್ರಿ ಕಂಟ್ರೋಲ್ ರೂಂಗೆ ತೆರಳಿ ಸಿಬ್ಬಂದಿ ಕೈಗೆ ರಾಜೀನಾಮೆ ಸಲ್ಲಿಸಿದ್ದರು. ಈಗ ರಾಜೀನಾಮೆ ಪತ್ರ ಮುಖ್ಯ ಕಾರ್ಯದರ್ಶಿ ಕೈಸೇರಿದೆ. IPSನಲ್ಲಿ ಭುಗಿಲೆದ್ದ ಅಸಮಾಧಾನ: ರಾತ್ರೋರಾತ್ರಿ ADGP ರಾಜೀನಾಮೆ, ಯಾಕೆಂಬುದು DGPಗೂ ಗೊತ್ತಿಲ್ಲ! ಇಲಾಖೆಯಲ್ಲಿ ಅಸಂವಿಧಾನಾತ್ಮಕ ನಡೆ ಆರೋಪಿಸಿ ಮುಖ್ಯ ಕಾರ್ಯದರ್ಶಿ ಹೆಸರಿಗೆ ರಾಜೀನಾಮೆ ಪತ್ರ ಬರೆದಿದ್ದರು. ಈಗ ಆ ಪತ್ರ ಪೊಲೀಸ್ […]

ಬೆಂಗಳೂರು: ಸೀನಿಯಾರಿಟಿ ಇಲ್ಲದಿದ್ದರೂ ಸುನಿಲ್ ಕುಮಾರ್‌ಗೆ ಎಡಿಜಿಪಿ ಶ್ರೇಣಿಯಿಂದ ಡಿಜಿಪಿ ಶ್ರೇಣಿಗೆ ಬಡ್ತಿ ನೀಡಿದಕ್ಕೆ ಐಪಿಎಸ್ ಅಧಿಕಾರಿ ಡಾ. ಪಿ. ರವೀಂದ್ರನಾಥ್ ಅಸಮಾಧಾನಗೊಂಡು ಮೊನ್ನೆ ರಾತ್ರೋರಾತ್ರಿ ಕಂಟ್ರೋಲ್ ರೂಂಗೆ ತೆರಳಿ ಸಿಬ್ಬಂದಿ ಕೈಗೆ ರಾಜೀನಾಮೆ ಸಲ್ಲಿಸಿದ್ದರು. ಈಗ ರಾಜೀನಾಮೆ ಪತ್ರ ಮುಖ್ಯ ಕಾರ್ಯದರ್ಶಿ ಕೈಸೇರಿದೆ.
IPSನಲ್ಲಿ ಭುಗಿಲೆದ್ದ ಅಸಮಾಧಾನ: ರಾತ್ರೋರಾತ್ರಿ ADGP ರಾಜೀನಾಮೆ, ಯಾಕೆಂಬುದು DGPಗೂ ಗೊತ್ತಿಲ್ಲ!
ಇಲಾಖೆಯಲ್ಲಿ ಅಸಂವಿಧಾನಾತ್ಮಕ ನಡೆ ಆರೋಪಿಸಿ ಮುಖ್ಯ ಕಾರ್ಯದರ್ಶಿ ಹೆಸರಿಗೆ ರಾಜೀನಾಮೆ ಪತ್ರ ಬರೆದಿದ್ದರು. ಈಗ ಆ ಪತ್ರ ಪೊಲೀಸ್ ಪ್ರಧಾನ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗೆ ತಲುಪಿದ್ದು, ರಾಜೀನಾಮೆ ಪತ್ರದ ಬಗ್ಗೆ ಮುಖ್ಯ ಕಾರ್ಯದರ್ಶಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಕೇಂದ್ರ ಗೃಹ ಸಚಿವಾಲಯದಿಂದ ಒಂದು ತಿಂಗಳ ಗಡುವು ಬಳಿಕ ರಾಜೀನಾಮೆಯ ಪ್ರಕ್ರಿಯೆಯು ಹಂತವಾಗಿ DPARಗೆ ತಲುಪಲಿದೆ. ನಂತರ ಸಿಎಂ ಬಳಿ ರವಾನೆಯಾಗುತ್ತೆ. ಅಂತಿಮವಾಗಿ ರಾಜೀನಾಮೆ ಪತ್ರ ಕೇಂದ್ರಕ್ಕೆ ತಲುಪುತ್ತೆ. ಅಲ್ಲಿ ಕೇಂದ್ರ ಗೃಹ ಸಚಿವಾಲಯವು ರಾಜೀನಾಮೆ ನೀಡಿರುವ ರವೀಂದ್ರನಾಥ್ ಅವರಿಗೆ ಒಂದು ತಿಂಗಳ ಗಡುವು ನೀಡುತ್ತದೆ. ಈ ಅವಧಿಯಲ್ಲಿ ರವೀಂದ್ರನಾಥ್ ಬಯಸಿದರೆ ತಮ್ಮ ರಾಜೀನಾಮೆ ಪತ್ರವನ್ನು ವಾಪಸ್ ಪಡೆದು, ಸೇವೆಗೆ ಹಾಜರಾಗಬಹುದು.
ಇದನ್ನೂ ಓದಿ: IPS ರವೀಂದ್ರನಾಥ್ ರಾಜೀನಾಮೆ, ಸುನೀಲಕುಮಾರ್ ಪ್ರಮೋಶನ್! ಅಸಲಿಯತ್ತೇನು?