ಇಂದು ಸಂಜೆಯಿಂದಲೇ ಬೆಂಗಳೂರಲ್ಲಿ ಕರ್ಫ್ಯೂ ಜಾರಿ! ಏನಿರುತ್ತೆ? ಏನಿರಲ್ಲ?
ಬೆಂಗಳೂರು: ಇಂದು ಸಂಜೆಯಿಂದಲೇ ನೀವೆಲ್ಲಾ ಅಲರ್ಟ್ ಆಗಲೇಬೇಕು. ನಾಳೆ ಏನಾದ್ರೂ ಕೆಲ್ಸಗಳಿದ್ರೆ ಮುಂದೂಡಲೇಬೇಕು. ಬೆಂಗ್ಳೂರಲ್ಲಿ ಸಂಜೆಯಿಂದ ಕರ್ಫ್ಯೂ ಜಾರಿಯಾಗ್ತಿದ್ದು, ಇದಕ್ಕಾಗಿ ಪೊಲೀಸರು ಎಲ್ಲಾ ಸಿದ್ಧತೆ ಮಾಡಿಕೊಳ್ತಿದ್ದಾರೆ. ಅಲರ್ಟ್.. ಅಲರ್ಟ್.. ಅಲರ್ಟ್.. ಇಂದು ಸಂಜೆಯಿಂದ ಸೋಮವಾರ ಬೆಳಗ್ಗೆ ತನಕ.. ಒಂದು ಹಗಲು, ಎರಡು ರಾತ್ರಿ ಕಳೆಯೋವರೆಗೂ, ಬರೋಬ್ಬರಿ 36 ಗಂಟೆ ಸಿಟಿ ಮಂದಿ ಅಲರ್ಟ್ ಆಗಿರಲೇಬೇಕು. ಯಾಕಂದ್ರೆ, ಕೊರೊನಾ ವಿರುದ್ಧ ಮತ್ತೊಮ್ಮೆ ಕರ್ಫ್ಯೂ ಬ್ರಹ್ಮಾಸ್ತ್ರ ಜಾರಿಯಾಗಿದೆ. ಇಂದು ಸಂಜೆ 7 ಗಂಟೆಯಿಂದ ಬೆಂಗಳೂರಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತೆ. ನಾಳೆಯ ಲಾಕ್ಡೌನ್ಗಾಗಿ […]

ಬೆಂಗಳೂರು: ಇಂದು ಸಂಜೆಯಿಂದಲೇ ನೀವೆಲ್ಲಾ ಅಲರ್ಟ್ ಆಗಲೇಬೇಕು. ನಾಳೆ ಏನಾದ್ರೂ ಕೆಲ್ಸಗಳಿದ್ರೆ ಮುಂದೂಡಲೇಬೇಕು. ಬೆಂಗ್ಳೂರಲ್ಲಿ ಸಂಜೆಯಿಂದ ಕರ್ಫ್ಯೂ ಜಾರಿಯಾಗ್ತಿದ್ದು, ಇದಕ್ಕಾಗಿ ಪೊಲೀಸರು ಎಲ್ಲಾ ಸಿದ್ಧತೆ ಮಾಡಿಕೊಳ್ತಿದ್ದಾರೆ.
ಅಲರ್ಟ್.. ಅಲರ್ಟ್.. ಅಲರ್ಟ್.. ಇಂದು ಸಂಜೆಯಿಂದ ಸೋಮವಾರ ಬೆಳಗ್ಗೆ ತನಕ.. ಒಂದು ಹಗಲು, ಎರಡು ರಾತ್ರಿ ಕಳೆಯೋವರೆಗೂ, ಬರೋಬ್ಬರಿ 36 ಗಂಟೆ ಸಿಟಿ ಮಂದಿ ಅಲರ್ಟ್ ಆಗಿರಲೇಬೇಕು. ಯಾಕಂದ್ರೆ, ಕೊರೊನಾ ವಿರುದ್ಧ ಮತ್ತೊಮ್ಮೆ ಕರ್ಫ್ಯೂ ಬ್ರಹ್ಮಾಸ್ತ್ರ ಜಾರಿಯಾಗಿದೆ. ಇಂದು ಸಂಜೆ 7 ಗಂಟೆಯಿಂದ ಬೆಂಗಳೂರಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತೆ. ನಾಳೆಯ ಲಾಕ್ಡೌನ್ಗಾಗಿ ಇಂದಿನಿಂದಲೇ ಜನರಿಗೆ ಬಿಸಿ ತಟ್ಟಲಿದೆ.
‘ಜನತಾ ಕರ್ಫ್ಯೂ’ ರೀತಿ ಭಾನುವಾರದ ಲಾಕ್ಡೌನ್..! ಜನತಾ ಕರ್ಫ್ಯೂ.. ಜನರಿಂದ.. ಜನರಿಗಾಗಿ.. ಜನರೇ ನಡೆಸಿದಂತಹ ಕರ್ಫ್ಯೂ.. ದೇಶಕ್ಕೆ ಕೊರೊನಾ ಕಾಲಿಡ್ತಿದ್ದಂತೆಯೇ ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ರು.. ಮಾರ್ಚ್ 22ರ ಭಾನುವಾರ ನಡೆದ ಈ ಜನತಾ ಕರ್ಫ್ಯೂಗೆ ಇಡೀ ಭಾರತವೇ ಸ್ತಬ್ಧವಾಗಿತ್ತು.. ಮನುಕುಲವೇ ಮನೆಯಲ್ಲಿ ಕೂತು ಕರ್ಫ್ಯೂಗೆ ಜೈ ಎಂದಿತ್ತು.. ಇದೀಗ, ಅದೇ ರೀತಿ ರಾಜ್ಯ ಸರ್ಕಾರ ಮತ್ತೊಮ್ಮೆ ಕರ್ಫ್ಯೂ ವಿಧಿಸಿದೆ. ನಾಳೆ ಸಂಪೂರ್ಣ ಲಾಕ್ಡೌನ್ ಘೋಷಿಸಿದ್ದು, ಇಂದು ಸಂಜೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೂ ಎಲ್ಲವೂ ಬಂದ್ ಆಗಿರಲಿದೆ.
ಮನೆಯಿಂದ ಹೊರಗೆ ಕಾಲಿಟ್ರೆ ಬೀಳುತ್ತೆ ಕೇಸ್..! ಸದ್ಯ, ಕರುನಾಡಿನಲ್ಲಿ ನಾಲ್ಕನೇ ಹಂತದ ಲಾಕ್ಡೌನ್ ಮೇ 31ರವರೆಗೂ ಜಾರಿಯಲ್ಲಿದೆ. ನಿರ್ಬಂಧಗಳನ್ನ ಬಹುತೇಕ ಸಡಿಲಗೊಳಿಸಿರೋ ರಾಜ್ಯ ಸರ್ಕಾರ 2ಭಾನುವಾರ ಮಾತ್ರ ಕಂಪ್ಲೀಟ್ ಲಾಕ್ಡೌನ್ ಇರುತ್ತೆ ಎಂದು ತಿಳಿಸಿತ್ತು. ಹೀಗಾಗಿ, ಸಂಡೇ ಲಾಕ್ಡೌನ್ಗೆ ಇಂದು ಸಂಜೆಯಿಂದಲೇ ಸಿಟಿ ಪೊಲೀಸರು ಸಜ್ಜಾಗಿದ್ದಾರೆ. ಕಟ್ಟುನಿಟ್ಟಾದ ಕರ್ಫ್ಯೂ ಜಾರಿಗೊಳಿಸಲು ಮುಂದಾಗಿದ್ದಾರೆ. ಅತ್ಯಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲಾ ವಾಹನಗಳಿಗೂ ನಿರ್ಬಂಧವಿದ್ದು, ಸುಖಾಸುಮ್ಮನೆ ರಸ್ತೆಗೆ ಇಳಿದವರ ಮೇಲೆ ಕೇಸ್ ಬಿಗಿಯೋದು ಪಕ್ಕಾ ಅಂತಿದ್ದಾರೆ. ಹಾಗಾದ್ರೆ ಇಂದು ಸಂಜೆಯಿಂದ ಶುರುವಾಗೋ ಕರ್ಫ್ಯೂ ವೇಳೆ ಏನೇನ್ ಇರಲ್ಲ ಅನ್ನೋದನ್ನ ತೋರಿಸ್ತೀವಿ ನೋಡಿ.
ಬೆಂಗಳೂರಲ್ಲಿ ಏನೇನಿರಲ್ಲ..? ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ಸೇವೆ ಬಂದ್ ಆಗಿರುತ್ತೆ. ಓಲಾ, ಉಬರ್, ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳ ಓಡಾಡುವಂತಿಲ್ಲ. ಸಲೂನ್, ಪಾರ್ಲರ್, ಬಟ್ಟೆ ಅಂಗಡಿ, ಪಾರ್ಕ್ಗಳು ಬಂದ್ ಆಗಿರುತ್ತವೆ. ಇನ್ನು ಫ್ಯಾಕ್ಟರಿ, ಕಾರ್ಖಾನೆ, ಕಂಪನಿಗಳು ಕೂಡ ಬಾಗಿಲು ಮುಚ್ಚಿರುತ್ತವೆ. ಎಲ್ಲಾ ಮದ್ಯಂದ ಅಂಗಡಿಗಳೂ ಕೂಡ ಓಪನ್ ಆಗಲ್ಲ. ಅಷ್ಟೇ ಅಲ್ಲದೆ ಅಗತ್ಯ ವಸ್ತುಗಳನ್ನ ಬಿಟ್ಟು ಉಳಿದ ಅಂಗಡಿಗಳು ತೆರೆಯಲ್ಲ. ಜೊತೆಗೆ ಅನಗತ್ಯವಾಗಿ ಹೊರಗೆ ಯಾರೂ ಕೂಡ ಓಡಾಡುವಂತಿಲ್ಲ. ಹೀಗಾಗಿ ಬ್ಯಾರಿಕೇಡ್ ಹಾಕಿ ರಸ್ತೆಗಳನ್ನ ಕ್ಲೋಸ್ ಮಾಡಲಾಗುತ್ತೆ.
ಬೆಂಗಳೂರಲ್ಲಿ ಏನೇನಿರುತ್ತೆ..? ತರಕಾರಿ ಮಾರಾಟ ಮಾಡೋಕೆ ಅವಕಾಶ ಇರುತ್ತೆ. ಎಪಿಎಂಸಿ ಮಾರುಕಟ್ಟೆ ತೆರೆದಿರುತ್ತದೆ. ಹಾಲು, ಮಾಂಸ, ಅಗತ್ಯ ವಸ್ತುಗಳ ಮಾರಾಟವಿರುತ್ತದೆ. ಆಸ್ಪತ್ರೆ, ಮೆಡಿಕಲ್ ಶಾಪ್, ಕಿರಾಣಿ ಅಂಗಡಿಗಳು ಕೂಡ ತೆರೆದಿರುತ್ವೆ. ಜೊತೆಗೆ ಮದುವೆ ಸಮಾರಂಭಗಳಿಗೆ ಯಾವುದೇ ಅಡ್ಡಿಯಿರಲ್ಲ, ಆದ್ರೆ ಕೇವಲ 50 ಜನರು ಮಾತ್ರ ಭಾಗಿಯಾಗ್ಬೇಕು. ಇನ್ನು ಡಾಕ್ಟರ್, ನರ್ಸ್, ಆಂಬುಲೆನ್ಸ್ಗಳ ಓಡಾಟಕ್ಕೆ ಅವಕಾಶವಿರುತ್ತದೆ.
ಒಟ್ನಲ್ಲಿ, ಲಾಕ್ಡೌನ್ಗೆ ಇಂದಿನಿಂದಲೇ ಪೊಲೀಸ್ರು ರೆಡಿಯಾಗ್ತಿದ್ದಾರೆ. ಆದ್ರೆ, ವಾರದಲ್ಲಿ ಆರು ದಿನ ನಿರ್ಬಂಧಗಳನ್ನ ತೆಗೆದುಹಾಕಿ, ಒಂದು ದಿನ ಮಾತ್ರ ಎಲ್ಲವನ್ನೂ ಬಂದ್ ಮಾಡ್ತಿದ್ದಾರೆ. ಇದು, ಯಾವ ರೀತಿಯ ಲಾಜಿಕ್ ಅನ್ನೋದು ಮಾತ್ರ ಜನರಿಗೆ ಅರ್ಥವಾಗ್ತಿಲ್ಲ.




