Cyber Crime: ‘ಫಿಶಿಂಗ್’ ಬಲೆ ಬೀಸುವ ವಂಚಕರು ದೊಡ್ಡ ತಿಮಿಂಗಿಲಗಳನ್ನು ಬೇಟೆಯಾಡುವುದು ಹೇಗೆ ಗೊತ್ತಾ?

ಜನರು ಮತ್ತು ಕಂಪನಿಗಳು ಎಷ್ಟೇ ಎಚ್ಚರವಹಿಸಿದರೂ ಕೆಲವೊಮ್ಮೆ ದಾಖಲೆಗಳು ಸೈಬರ್ ಖದೀಮರ ಪಾಲಾಗುತ್ತದೆ, ಮೀನುಗಳು ಬಲೆಗೆ ಬಿದ್ದಂತೆ ಸೈಬರ್ ಚೋರರಿಗೆ ಜನರು ತುತ್ತಾಗುತ್ತಾರೆ. ಅಂದ ಹಾಗೆ, ಸೈಬರ್ ಚೋರರ ಫಿಶಿಂಗ್ ಬಲೆಗೆ ಜನರು ಸುಲಭವಾಗಿ ಬೀಳುವುದು ಹೇಗೆ? ದೊಡ್ಡ ತಿಮಿಂಗಳ ಬೇಟೆ ಹೇಗೆ? ಇಲ್ಲಿದೆ ಮಾಹಿತಿ.

Cyber Crime: 'ಫಿಶಿಂಗ್' ಬಲೆ ಬೀಸುವ ವಂಚಕರು ದೊಡ್ಡ ತಿಮಿಂಗಿಲಗಳನ್ನು ಬೇಟೆಯಾಡುವುದು ಹೇಗೆ ಗೊತ್ತಾ?
Cyber Crime: 'ಫಿಶಿಂಗ್' ಬಲೆ ಬೀಸುವ ವಂಚಕರು ದೊಡ್ಡ ತಿಮಿಂಗಿಲಗಳನ್ನು ಬೇಟೆಯಾಡುವುದು ಹೇಗೆ ಗೊತ್ತಾ?
Follow us
|

Updated on: Apr 06, 2024 | 3:47 PM

ಫಿಶಿಂಗ್​ ಬಲೆಯೊಳಗೆ ಬೀಳುವುದು ಜಸ್ಟ್​ ಆ ಒಂದು ಕ್ಲಿಕ್​ನಿಂದಾಗಿ ಅಷ್ಟೇ. ಗೋಲ್ಡನ್​ ಅವರ್​​ ಎಂಬ ಸುವರ್ಣ ಸಮಯದಲ್ಲಿ ನೀವು ಜಾಗ್ರತೆಯಿಂದ ಇದ್ದು ಕ್ಲಿಕ್ ಮಾಡುವ ಪ್ರಚೋದನೆಯಿಂದ ದೂರವುಳಿದರೆ ಖಂಡಿತಾ ನೀವು ಬಲಿ ಕಾ ಬಕರಾ ಅಗುವುದನ್ನು ತಪ್ಪಿಸಬಹುದು. ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ ಜನರಿಗೆ ಅನುಕೂಲದ ಜೊತೆಗೆ ಸಮಸ್ಯೆಗಳ ಸರಮಾಲೆಯೂ ಕೊರಳಿಗೆ ಸುತ್ತಿಕೊಳ್ಳುತ್ತದೆ. ಉದಾಹರಣೆಗೆ ಸೈಬರ್ ಅಪರಾಧಗಳು. ಇದು ವಿಶ್ವದಲ್ಲೇ ಒಂದು ದೊಡ್ಡ ಸವಾಲಾಗಿದೆ. ಜನರು ಸ್ವಲ್ಪ ಎಡವಿದರೂ ಸಾಕು ಸೈಬರ್ ದಾಳಿಗೆ ತುತ್ತಾಗುತ್ತಾರೆ. ಖಾತೆಗಳು ಹ್ಯಾಕ್ ಆಗುತ್ತವೆ, ಬ್ಯಾಂಕ್ ಖಾತೆಯಲ್ಲಿದ್ದ ಹಣ ಸೈಬರ್ ಚೋರರ ಚೇಬು ಸೇರುತ್ತದೆ, ದತ್ತಾಂಶಗಳ ಕಳವು ಆಗುತ್ತದೆ, ಕಂಪನಿಗಳ ದಾಖಲೆಗಳು ಕಳ್ಳರ ಪಾಲಾಗುತ್ತದೆ. ಜನರು ಮತ್ತು ಕಂಪನಿಗಳು ಎಷ್ಟೇ ಎಚ್ಚರವಹಿಸಿದರೂ ಕೆಲವೊಮ್ಮೆ ದಾಖಲೆಗಳು ಸೈಬರ್ ಖದೀಮರ ಪಾಲಾಗುತ್ತದೆ. ಮೀನುಗಳು ಬಲೆಗೆ ಬಿದ್ದಂತೆ ಸೈಬರ್ ಚೋರರಿಗೆ ಜನರು ತುತ್ತಾಗುತ್ತಾರೆ. ಅಂದ ಹಾಗೆ, ಸೈಬರ್ ಚೋರರ ಫಿಶಿಂಗ್ ಬಲೆಗೆ ಜನರು ಸುಲಭವಾಗಿ ಬೀಳುವುದು ಹೇಗೆ ಎಂಬುದನ್ನು ಮೊದಲು ತಿಳಿಯೋಣ.

ಸೈಬರ್ ಅಪರಾಧಗಳಲ್ಲಿ ಹ್ಯಾಕಿಂಗ್, ಮಾಲ್ವೇರ್ ಮತ್ತು ಫಿಶಿಂಗ್ ಎಂಬ ಮೂರು ವಿಧಗಳು ಇವೆ. ಈ ಪೈಕಿ ಫಿಶಿಂಗ್ ಮೂಲಕ ಸೈಬರ್ ಖದೀಮರು ಜನರನ್ನು ಬಹು ಬೇಗನೆ ಮೋಸದ ಬಲೆಗೆ ಬೀಳಿಸುತ್ತಾರೆ. ಅಲ್ಲದೆ, ಇದಕ್ಕಾಗಿ ಹಲವು ರೀತಿಯಲ್ಲಿ ಖತರ್ನಾಕ್ ಮೋಸದ ಐಡಿಯಾಗಳನ್ನು ಸಿದ್ಧಪಡಿಸಲಾಗುತ್ತದೆ. ಫಿಶಿಂಗ್ ಸೈಬರ್ ಅಪರಾಧದಲ್ಲಿ ವಿವಿಧ ವಿಧಗಳಿವೆ. ಅವುಗಳನ್ನು ನೋಡಣ.

ಇದಕ್ಕೂ ಮೊದಲು ಫಿಶಿಂಗ್ ಅಟ್ಯಾಕ್ ಎಂದರೇನು ಎಂಬುದನ್ನು ತಿಳಿಯೋಣ. ಫ್ರಾಢ್ ಲಿಂಕ್ ಇತ್ಯಾದಿಗಳು ಇನ್ ಬಾಕ್ಸ್ ಅಥವಾ ವಾಟ್ಸ್ ಆ್ಯಪ್, ಇಮೇಲ್ ಮೂಲಕ ಸಂದೇಶಗಳನ್ನು ಕಳುಹಿಸಿ ಹ್ಯಾಕ್ ಮಾಡುವುದಾಗಿದೆ. ಫಿಶರ್​ಗಳು (ಸೈಬರ್ ಖದೀಮರು), ಜನರು ಅಥವಾ ನೌಕರರ ಹೆಸರು, ಉದ್ಯೋಗ ಶೀರ್ಷಿಕೆ ಮತ್ತು ಇಮೇಲ್ ವಿಳಾಸ, ಹಾಗೆಯೇ ಆಸಕ್ತಿಗಳು ಮತ್ತು ಚಟುವಟಿಕೆಗಳಂತಹ ಮಾಹಿತಿಯನ್ನು ಫಿಶಿಂಗ್ ಮೂಲಕ ಸಂಗ್ರಹಿಸುತ್ತಾರೆ.

ಅಂದರೆ, ಆರ್ಥಿಕ ಲಾಭಕ್ಕಾಗಿ ಬಲಿಪಶುವಿನ ಕ್ರೆಡಿಟ್ ಕಾರ್ಡ್ ಮಾಹಿತಿ ಅಥವಾ ಇತರ ವೈಯಕ್ತಿಕ ಡೇಟಾವನ್ನು ಪಡೆಯುವುದು, ಇಮೇಲ್‌ಗಳ ಮೂಲಕ ಉದ್ಯೋಗಿಯ ಲಾಗಿನ್ ಮಾಹಿತಿ ಅಥವಾ ನಿರ್ದಿಷ್ಟ ಕಂಪನಿಯ ವಿರುದ್ಧದ ಸೈಬರ್ ದಾಳಿ ನಡೆಸಿ ವಿವರಗಳನ್ನು ಪಡೆಯುವುದಾಗಿದೆ. ಫಿಶಿಂಗ್ ಇಮೇಲ್‌ಗಳು ಕಂಪನಿಯ ನೆಟ್‌ವರ್ಕ್‌ಗಳಿಗೆ ಸೈಬರ್ ಅಪರಾಧಿಗಳು ಪ್ರವೇಶ ಮಾಡುವ ಮುಖ್ಯ ದಾರಿಯಾಗಿವೆ. ಹಾಗಿದ್ದರೆ ಫಿಶಿಂಗ್​ನಲ್ಲಿ ಯಾವೆಲ್ಲಾ ರೀತಿಯಲ್ಲಿ ಸೈಬರ್ ಸೆಕ್ಯುರಿಟಿ ದಾಳಿ ನಡೆಸಲಾಗುತ್ತದೆ? ಈ ಬಗ್ಗೆ ಟಿವಿ9 ಪ್ರೀಮಿಯಂ ನ್ಯೂಸ್ ಆ್ಯಪ್​ಗೆ ಸೈಬರ್ ಸೆಕ್ಯುರಿಟಿ ಎಕ್ಸ್​ಪರ್ಟ್ ಸತ್ಯನಾರಾಯಣ ಅವರು ನೀಡಿದ ಮಾಹಿತಿ ಇಲ್ಲಿದೆ.

ಸ್ಪಿಯರ್ ಫಿಶಿಂಗ್ (Spear fishing)

ಇಯರ್ ಎಂಡ್​ಗೆ ಬಂದಾಗ ಒಂದು ಸಂಸ್ಥೆ ಸಿಬ್ಬಂದಿ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತದೆ. ಉತ್ತರ ಉದ್ಯೋಗಿಗಳಿಗೆ ಆಫರ್ (ಗಿಫ್ಟ್ ವೋಚರ್)​ ಕೊಡುತ್ತದೆ. ಅಥವಾ ಸಾಮಾನ್ಯವಾಗಿ ಉದ್ಯೋಗಿ ತನ್ನ ಅಫೀಷಿಯಲ್ ಅಕೌಂಟ್ ಬ್ಲಾಕ್ ಆಗಿದ್ದರೆ ಸರಿಪಡಿಸಲು ಕಂಪನಿಗೆ ಮೇಲ್ ಮಾಡುತ್ತಾರೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಸೈಬರ್ ಅಟೇಕರ್ಸ್, ಒಂದು ಸಂಸ್ಥೆಯ ಹೆಸರಿನಲ್ಲಿ ಅದರ ಸಿಬ್ಬಂದಿಗೆ ಇಮೇಲ್ ಮೂಲಕ ಲಿಂಕ್ ಅನ್ನು ಕಳುಹಿಸುತ್ತಾರೆ.

ಹೀಗೆ ಕಳುಹಿಸುವ ಲಿಂಕ್​ಗಳು (URL) ಬಹುತೇಕ ಅದೇ ಕಂಪನಿಗೆ ಸಂಬಂಧಿಸಿದ್ದಂತೆ ತೋರುತ್ತದೆ. ಕೊಂಚ ಬದಲಾವಣೆ ಮಾಡಲಾಗುತ್ತದೆ. ಉದಾಹರಣೆಗೆ: mybank.com ಎಂಬುದನ್ನು my-bank.com ಅಥವಾ mybank.host.com ಅಥವಾ mybank@host.com. ಈ ರೀತಿಯಾಗಿ ಕಳುಹಿಸಲಾಗಿದೆ. ಇದನ್ನು ಇಮೇಲ್ ಫಿಶಿಂಗ್ ಅಂತಾನೂ ಕರೆಯುತ್ತಾರೆ. ಉದಾಹರಣೆ: ಸೋನಿಯಲ್ಲಿನ ಉದ್ಯೋಗಿಗಳಿಂದ ಸಂಪರ್ಕ ಮಾಹಿತಿಯನ್ನು ಪಡೆದುಕೊಳ್ಳಲು ಹ್ಯಾಕರ್‌ಗಳು ಲಿಂಕ್ಡ್‌ಇನ್ ಬಳಸಿದರು. ಬಳಿಕ ಇಮೇಲ್ ಫಿಶಿಂಗ್ ಮೂಲಕ 100 ಟೆರಾಬೈಟ್‌ಗಳಷ್ಟು ಡೇಟಾಗಳನ್ನು ಕಳವು ಮಾಡಿದರು.

ತಿಮಿಂಗಿಲ ಬೇಟೆ (Whaling Attack)

ಇತರ ರೀತಿಯ ಫಿಶಿಂಗ್ ದಾಳಿಗಳಂತೆಯೇ ತಿಮಿಂಗಿಲ ಬೇಟೆ ಇರುತ್ತದೆ. ಇಲ್ಲಿ ತಿಮಿಂಗಿಲ ಎಂಬುದು ದೊಡ್ಡ ಹುದ್ದೆ ಅಲಂಕರಿಸಿರುವ ಹಿರಿಯ ಉದ್ಯೋಗಿಗಳಾಗಿದ್ದಾರೆ. ಹಿರಿಯ ಉದ್ಯೋಗಿಗಳು ಸಾಮಾನ್ಯವಾಗಿ ಸಾಕಷ್ಟು ಮಾಹಿತಿಯನ್ನು ಹೊಂದಿರುತ್ತಾರೆ. ಹೀಗಾಗಿ ದೊಡ್ಡ ವ್ಯಕ್ತಿಗಳನ್ನು ಬೇಟೆಯಾಡಿದರೆ ಹೆಚ್ಚಿನ ಮಾಹಿತಿ ಸಿಗುತ್ತದೆ ಎಂದು ಸೈಬರ್ ಚೋರರು ತಿಮಿಂಗಿಲ ದಾಳಿ ನಡೆಸುತ್ತಾರೆ.

ಈ ರೀತಿಯಾ ದಾಳಿಯಲ್ಲಿ ಯಾವುದೇ URL ನಂತಹ ಲಿಂಕ್​ಗಳನ್ನು ಬಳಸಲಾಗುವುದಿಲ್ಲ. ಬದಲಾಗಿ,  ಅಟ್ಯಾಕರ್​ಗಳು ದೊಡ್ಡ ವ್ಯಕ್ತಿಗಳ ಬಳಿ ಇರುವ ಸೂಕ್ಷ್ಮ ಡೇಟಾವನ್ನು ಕದಿಯಲು ಸಾಮಾನ್ಯವಾಗಿ ನಕಲಿ ತೆರಿಗೆ ರಿಟರ್ನ್‌ಗಳನ್ನು ಬಳಸುತ್ತಾರೆ ಮತ್ತು ಇವುಗಳ ಮೂಲಕ ದಾಳಿಗಳನ್ನು ನಡೆಸುತ್ತಾರೆ.

ಬ್ಯುಸಿನೆಸ್ ಇಮೇಲ್ ಕಾಂಪ್ರಮೈಸ್ ಸೈಬರ್ ದಾಳಿ (BEC Attacks)

ಯಾವುದಾದರು ಒಂದು ಕಂಪನಿ ಜೊತೆ ವೆಂಡರ್ಸ್​ ಇರುತ್ತಾರೆ. ಆ ಕಂಪನಿಯ ಎಲೆಕ್ಟ್ರಿಕ್ ಅಥವಾ ಕಂಪ್ಯೂಟರ್ ಹ್ಯಾಂಡಲ್ ಮಾಡುವುದು ವೆಂಡರ್ಸ್​ಗಳು ಎಂಬುದು ನಿಮಗೆ ಗೊತ್ತಿರಲಿ. ಇಂತಹ ವೆಂಡರ್ಸ್​ಗಳ ಹೆಸರಿನಲ್ಲಿ ವೆಂಡರ್ಸ್​ಗಳು ಟೈಯಪ್ ಆಗಿರುವ ಸಂಸ್ಥೆಗೆ ಸೈಬರ್ ಕಳ್ಳರು ಇಮೇಲ್ ಕಳುಹಿಸಿ “ಈ ತಿಂಗಳಲ್ಲಿ ಇಷ್ಟು ಸರ್ವಿಸ್ ಮಾಡಲಾಗಿದೆ, ಇಷ್ಟು ವೆಚ್ಚು ಆಗಿದೆ” ಎಂದು ಹೇಳಿ ಹಣ ದೋಚುತ್ತಾರೆ. ಇದನ್ನೇ ಬ್ಯುಸಿನೆಸ್ ಇಮೇಲ್ ಕಾಂಪ್ರಮೈಸ್ ಸೈಬರ್ ದಾಳಿ ಎಂದು ಹೇಳುತ್ತಾರೆ.

ವಿಶಿಂಗ್ ಫಿಶಿಂಗ್ (Vishing Attacks)

ಮತ್ತೊಬ್ಬರ ಸೋಗಿನಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ (ಉದಾಹರಣೆ: ಬ್ಯಾಂಕ್ ಅಥವಾ ಅಮೇಜಾನ್ ಪ್ರೈಂ ಇತ್ಯಾದಿ) ತಮ್ಮ ಅಕೌಂಟ್ ಬ್ಲಾಕ್ ಆಗಿದೆ ಎಂದು ಹೇಳಿ ಒಟಿಪಿ ಪಡೆದು ಆ ವ್ಯಕ್ತಿಯ ಹೆಸರಿನ ಖಾತೆಗೆ ಪ್ರವೇಶಿಸುವುದೇ ವಿಶಿಂಗ್ ಫಿಶಿಂಗ್.

ಎಸ್​ಎಂಎಸ್ ಫಿಶಿಂಗ್ (SMS Phishing)

ಇನ್​ಬಾಕ್ಸ್​ನಲ್ಲಿ ಅಪರಿಚಿತ ಲಿಂಕ್​ಗಳು ಬರುವುದನ್ನು ನೀವು ನೋಡಿರುತ್ತೀರಾ. ಇದುವೇ ಎಸ್​ಎಂಎಸ್ ಫಿಶಿಂಗ್. ಈ ಲಿಂಕ್​ಗಳನ್ನು ಕ್ಲಿಕ್ ಮಾಡಿದರೆ ನಿಮ್ಮನ್ನು ನೇರವಾಗಿ ಫೇಕ್ ವೆಬ್​ಸೈಟ್​ಗಳಿಗೆ ಕೊಂಡೊಯ್ಯುತ್ತದೆ. ಇದರಿಂದಾಗಿ ನೀವು ಮೋಸ ಹೋಗುವ ಸಾಧ್ಯತೆಗಳು ಬಹಳಷ್ಟಿದೆ.

ಫಿಶಿಂಗ್ ಸೈಬರ್ ದಾಳಿ

HTTP ಫಿಶಿಂಗ್ (ಹೈಪರ್ ಟೆಕ್ಸ್ಟ್ ಟ್ರಾಸ್ಫರ್ ಪ್ರೋಟೋಕಾಲ್)

ಸಾಮಾನ್ಯ ವೆಬ್​ಸೈಟ್​ಗಳ ಯುಆರ್​ಎಲ್​ನ ಆರಂಭದಲ್ಲಿ https ಎಂದು ಬರೆಯಲಾಗುತ್ತದೆ. ಆದರೆ, ನಿಮಗೆ ಯಾವುದೇ ಲಿಂಗ್​ಗಳು ಬಂದಾಗ https ಅಂತ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರ ಬದಲಾಗಿ http ಎಂದು ಬರೆದಿದ್ದರೆ ಯಾವುದೇ ಕಾರಣಕ್ಕೂ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ. ಯಾಕೆಂದರೆ, ಯಾವುದೇ ವೈಫೈ ನೆಟ್​ವರ್ಕ್​ಗಳಲ್ಲಿ https ಇಲ್ಲದ ವೆಬ್​ಸೈಟ್​ಗಳನ್ನು ತೆರೆಯುವುದು ಸೂಕ್ತವಲ್ಲ. ಯಾಕೆಂದರೆ, https ಅಲ್ಲದ ವೆಬ್​ಸೈಟ್​ಗಳು ಮಾಹಿತಿಯನ್ನು ಗೌಪ್ಯವಾಗಿ ಇಡುವುದಿಲ್ಲ. ಅಂದರೆ, ಅಂತಹ ಯುಆರ್​ಎಲ್ ವೆಬ್​ಸೈಟ್​ನಲ್ಲಿ ನೀವು ಯೂಸರ್ ನೇಮ್-ಪಾಸ್​ವರ್ಡ್​ ಹಾಕಿ ಖಾತೆ ಓಪನ್ ಮಾಡಿದರೆ ನಿಮ್ಮ ಮಾಹಿತಿಯನ್ನು ವೈಫೈ ಮೂಲಕ ಅಟ್ಯಾಕರ್​ಗಳು ಕಳವು ಮಾಡುವ ಸಾಧ್ಯತೆ ಬಹಳಷ್ಟಿದೆ.

Evil Twin Phishing

ಇದನ್ನು ನಾವು ನಿಮಗೆ ಉದಾಹರಣೆ ಮೂಲಕ ವಿವರಿಸುತ್ತೇವೆ. ನೀವು ನಿಮ್ಮ ಮನೆಗೆ ವೈಫೈ ಹಾಕಿಸಿದ್ದೀರಿ ಎಂದಿಟ್ಟುಕೊಳ್ಳಿ. ಅದಕ್ಕೆ Sweet Home ಎಂದು ಹೆಸರು ಕೊಟ್ಟಿರುತ್ತೀರಿ. ಆದರೆ, ಸೈಬರ್ ಚೋರರು ಇದೇ ಹೆಸರಿನಲ್ಲಿ ನಕಲಿ ತದ್ರೂಪಿ ವೈಫೈ ಕ್ರಿಯೇಟ್ ಮಾಡಿರುತ್ತಾರೆ. ಒಂದೊಮ್ಮೆ ನೀವು ಈ ಫೇಕ್ ತದ್ರೂಪಿ ವೈಫೈಗೆ ಕನೆಕ್ಟ್ ಮಾಡಲು ಪಾಸ್​ವರ್ಡ್ ಹಾಕಿದರೆ ಫೈಲ್ಡ್​ ಎಂದು ಬರಬಹುದು. ಆದರೆ, ಈ ಪಾಸ್​ವರ್ಡ್ ನಕಲಿ ತದ್ರೂಪಿ ವೈಫೈಯಲ್ಲಿ ಸ್ಟೋರ್ ಆಗಿರುತ್ತದೆ. ಬಳಿಕ ಅಟ್ಯಾಕರ್ ಆ ಪಾಸ್​ವರ್ಡ್ ಬಳಸಿ ನಿಮ್ಮ ವೈಫೈ ಬಳಕೆ ಮಾಡುವ ಸಾಧ್ಯತೆ ಇರುತ್ತದೆ.

ಮುನ್ನೆಚ್ಚರಿಕಾ ಕ್ರಮಗಳು

    • ವೆಬ್​ಸೈಟ್​ಗಳ ಲಿಂಕ್​ (URL) ಸರಿಯಾಗಿ ಪರಿಶೀಲಿಸಿ
    • ಉಚಿತ ಪಬ್ಲಿಕ್ ನೆಟ್​ವರ್ಕ್​ಗಳಿಗೆ ಲಾಗಿನ್ ಆಗುವುದನ್ನು ತಪ್ಪಿಸಿ
    • ಯಾವುದೇ ಸಾಫ್ಟ್​ವೇರ್​ಗಳನ್ನು ಡೌನ್​ಲೋಡ್ ಮಾಡುವಾಗ ಒಫೀಷಿಯಲ್ ವೆಬ್​ಸೈಟ್​ಗಳಿಂದಲೇ ಡೌನ್​ಲೋಡ್ ಮಾಡಿ
    • ನಂಬಿಕೆಗೆ ಅರ್ಹವಲ್ಲದ ಆ್ಯಪ್​ಗಳನ್ನು ಡೌನ್​ಲೋಡ್ ಮಾಡದಿರಿ
    • ಆ್ಯಂಟಿ ವೈರಸ್​ಗಳನ್ನು ಇನ್​ಸ್ಟಾಲ್ ಮಾಡಿ
    • ತಿಂಗಳಿಗೊಮ್ಮೆ ಪಾಸ್​ವರ್ಡ್ ಬದಲಾಯಿಸಿ

Cyber Crime Phishing Attack is just a click away how people get trapped easily

ಹಾಗೆಯೇ, ಕಂಪ್ಯೂಟರ್​ಗಳಿಗೆ ಆ್ಯಂಟಿ ವೈರಸ್ ಇನ್​ಸ್ಟಾಲ್ ಮಾಡಿ, ನಿಮ್ಮ ಕಂಪ್ಯೂಟರ್​ ಅನ್ನು ಅಪ್​ಡೇಟ್ ಮಾಡುತ್ತಿರಿ, ನಂಬಿಕೆಗೆ ಅರ್ಹವಾಗದ ಆ್ಯಪ್​ಗಳನ್ನು ಇನ್​ಸ್ಟಾಲ್ ಮಾಡಬೇಡಿ. ಆ ಮೂಲಕ ನಿಮ್ಮ ಮಾಹಿತಿ, ಹಣವನ್ನು ಸೈಬರ್ ಚೋರರಿಂದ ಕಾಪಾಡಿಕೊಳ್ಳಿ ಎಂದು ಸತ್ಯನಾರಾಯಣ ಅವರು ಹೇಳಿದ್ದಾರೆ.

ತಾಜಾ ಸುದ್ದಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ