AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

6 ತಿಂಗಳ ಹಿಂದೆ 7 ಲಕ್ಷ ರೂ ಸಿಗರೇಟ್ ಬಾಕ್ಸ್ ಕದ್ದ ಆರೋಪಿ ಅರೆಸ್ಟ್

ನೆಲಮಂಗಲ: ಏಳು ಲಕ್ಷ ರೂಪಾಯಿ ಮೌಲ್ಯದ ಸಿಗರೇಟ್ ಬಾಕ್ಸ್​ಗಳನ್ನು ಕದ್ದಿದ್ದ ಇಬ್ಬರು ಕಳ್ಳರ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶ ಮೂಲದ ರಾಮಕೃಷ್ಣ(30) ಬಂಧಿತ ಆರೋಪಿ. 6 ತಿಂಗಳ ಹಿಂದೆ ITC ಕಂಪನಿಯ ಗೋಡಾನ್​ನಿಂದ ಇವರಿಬ್ಬರೂ 7 ಲಕ್ಷ ಮೌಲ್ಯದ ಸಿಗರೇಟ್ ಬಾಕ್ಸ್​ ಕದ್ದಿದ್ದರು. ಸದ್ಯ ಇಬ್ಬರೂ ಕಳ್ಳರ ಪೈಕಿ ಒಬ್ಬನನ್ನು ದಾಬಸ್ ಪೇಟೆ ಪೋಲಿಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಈ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು […]

6 ತಿಂಗಳ ಹಿಂದೆ 7 ಲಕ್ಷ ರೂ ಸಿಗರೇಟ್ ಬಾಕ್ಸ್ ಕದ್ದ ಆರೋಪಿ ಅರೆಸ್ಟ್
ಆಯೇಷಾ ಬಾನು
ಆಯೇಷಾ ಬಾನು|

Updated on:Sep 17, 2020 | 5:23 PM

Share

ನೆಲಮಂಗಲ: ಏಳು ಲಕ್ಷ ರೂಪಾಯಿ ಮೌಲ್ಯದ ಸಿಗರೇಟ್ ಬಾಕ್ಸ್​ಗಳನ್ನು ಕದ್ದಿದ್ದ ಇಬ್ಬರು ಕಳ್ಳರ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶ ಮೂಲದ ರಾಮಕೃಷ್ಣ(30) ಬಂಧಿತ ಆರೋಪಿ.

6 ತಿಂಗಳ ಹಿಂದೆ ITC ಕಂಪನಿಯ ಗೋಡಾನ್​ನಿಂದ ಇವರಿಬ್ಬರೂ 7 ಲಕ್ಷ ಮೌಲ್ಯದ ಸಿಗರೇಟ್ ಬಾಕ್ಸ್​ ಕದ್ದಿದ್ದರು. ಸದ್ಯ ಇಬ್ಬರೂ ಕಳ್ಳರ ಪೈಕಿ ಒಬ್ಬನನ್ನು ದಾಬಸ್ ಪೇಟೆ ಪೋಲಿಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಈ ಕಳ್ಳತನ ನಡೆದಿತ್ತು.

ಪ್ರಕರಣ ದಾಖಲಿಸಿಕೊಂಡು ದಾಬಸ್ ಪೇಟೆ ಪೋಲಿಸರು ತನಿಖೆ ಆರಂಭಿಸಿದ್ದರು. ಈಗ ರಾಮಕೃಷ್ಣ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧನ ವೇಳೆ ಆರೋಪಿ ಬಳಿ ಇದ್ದ 2 ಲಕ್ಷ ಜಪ್ತಿ ಮಾಡಲಾಗಿದೆ. ಇವರು ಕದ್ದ ಮಾಲನ್ನ ಟ್ರಾನ್ಸ್‌ಪೋರ್ಟ್‌ ಕಂಪನಿಗಳ ಬಳಿ ಅತಿ ಕಮ್ಮಿ ಬೆಲೆಗೆ ಮಾರುತ್ತಿದ್ರು. ಇನ್ನೋರ್ವ ಆರೋಪಿ ಅನಿಲ್​ಗೆ ಶೋಧ ಕಾರ್ಯ ಮುಂದುವರೆದಿದೆ.

Published On - 5:18 pm, Thu, 17 September 20

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.