ಬೈಕ್ ಸಮೇತ ಕೊಚ್ಚಿ ಹೋಗುತ್ತಿದ್ದ ಯುವಕ ಸೇಫ್..
ಧಾರವಾಡ: ಬೈಕ್ ಸಮೇತ ಪ್ರವಾಹಕ್ಕೆ ಕೊಚ್ಚಿ ಹೋದ ಯುವಕನನ್ನು ಸ್ಥಳೀಯರು ರಕ್ಷಿಸಿರುವ ಘಟನೆ ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮದ ಹೊರವಲಯದ ಹಂದಿಗ್ಯಾನ್ ಹಳ್ಳದಲ್ಲಿ ನಡೆದಿದೆ. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೇತುವೆ ಮೇಲೆ ಹರಿಯುತ್ತಿದ್ದ ನೀರಿನ ಮೇಲೆಯೇ ಬೈಕ್ ಸಮೇತ ಸೇತುವೆ ದಾಟುವ ವೇಳೆ ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಸಮಯ ಪ್ರಜ್ಞೆಯಿಂದ ಹಗ್ಗ ಬಳಸಿ ಯುವಕ ಹಾಗೂ ಆತನ ಬೈಕನ್ನು ಸ್ಥಳೀಯರು ರಕ್ಷಿಸಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕು ಕಿತ್ತೂರು ಗ್ರಾಮದ ಯುವಕ ಅಶೋಕ […]

ಧಾರವಾಡ: ಬೈಕ್ ಸಮೇತ ಪ್ರವಾಹಕ್ಕೆ ಕೊಚ್ಚಿ ಹೋದ ಯುವಕನನ್ನು ಸ್ಥಳೀಯರು ರಕ್ಷಿಸಿರುವ ಘಟನೆ ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮದ ಹೊರವಲಯದ ಹಂದಿಗ್ಯಾನ್ ಹಳ್ಳದಲ್ಲಿ ನಡೆದಿದೆ. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೇತುವೆ ಮೇಲೆ ಹರಿಯುತ್ತಿದ್ದ ನೀರಿನ ಮೇಲೆಯೇ ಬೈಕ್ ಸಮೇತ ಸೇತುವೆ ದಾಟುವ ವೇಳೆ ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಯುವಕನನ್ನು ಸಮಯ ಪ್ರಜ್ಞೆಯಿಂದ ಹಗ್ಗ ಬಳಸಿ ಯುವಕ ಹಾಗೂ ಆತನ ಬೈಕನ್ನು ಸ್ಥಳೀಯರು ರಕ್ಷಿಸಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕು ಕಿತ್ತೂರು ಗ್ರಾಮದ ಯುವಕ ಅಶೋಕ ಸೋಮರಡ್ಡಿಯನ್ನು ಇಂದು ಸ್ಥಳೀಯರು ಕಾಪಾಡಿದ್ದಾರೆ.




