ಮರಿ ಹಾಕಿದ ಆನೆ ಜೊತೆಗೆ ಕಾಫಿ ತೋಟದಲ್ಲಿಯೇ ಬೀಡುಬಿಟ್ಟ ಗಜ ಪಡೆ!

  • TV9 Web Team
  • Published On - 10:58 AM, 16 Sep 2020
ಮರಿ ಹಾಕಿದ ಆನೆ ಜೊತೆಗೆ ಕಾಫಿ ತೋಟದಲ್ಲಿಯೇ ಬೀಡುಬಿಟ್ಟ ಗಜ ಪಡೆ!

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮ ಸಮೀಪದ ಕಾಫಿ ತೋಟದಲ್ಲಿ 20ಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟಿವೆ. ಕಾಫಿ ತೋಟದಲ್ಲಿ ದಿಢೀರನೇ ಯಾಕಪ್ಪಾ ಈ ಪಾಟಿ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ ಅಂದ್ರೆ.. ಗುಂಪಿನಲ್ಲಿದ್ದ ಆನೆಯೊಂದು ಮರಿ ಹಾಕಿದೆ. ಹಾಗಾಗಿ, ಕಾಫಿ ತೋಟದಲ್ಲಿ ಈ ಕಾಡಾನೆಗಳು‌ ವಿಹಾರ ಮಾಡುತ್ತಿವೆ.

ಪುಂಡಾನೆಗಳ ಸ್ಥಳಾಂತರಕ್ಕೆ ಸ್ಥಳೀಯರ ಆಗ್ರಹ
ಹಗಲಿನಲ್ಲೇ ಕಾಫಿ ತೋಟದಲ್ಲಿ ಕೆಲ ಆನೆಗಳು ಗಡದ್ ನಿದ್ದೆ ಮಾಡುತ್ತಿವೆ. ಆದ್ರೆ ತೋಟದಲ್ಲಿ ಅರಾಮಾಗಿ ಮಲಗಿರುವ ಆನೆ ಹಿಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಆನೆ ಹಾವಳಿಯಿಂದ ಬೆಳೆ ಹಾನಿ ಆತಂಕ ಮನೆ ಮಾಡಿದೆ.