ಫೀಸ್​ ಕಟ್ಟದ ಮಕ್ಕಳ ಆನ್​ಲೈನ್ ಕ್ಲಾಸ್​ಗೆ ಬ್ರೇಕ್.. ಐಡಿ ಬ್ಲಾಕ್​ ಮಾಡಿದ ಶಾಲಾ ಆಡಳಿತ ಮಂಡಳಿ!

ಶಾಲೆ ತಿಳಿಸಿದಂತೆ ಪೊಷಕರು ಮೊದಲ ಹಂತದ ಶುಲ್ಕ ಪಾವತಿಸಿದ್ದು, ಎರಡನೇ ಹಂತದ ಶುಲ್ಕ ಕಟ್ಟುವಂತೆ ಶಾಲಾ ಇಲಾಖೆ ಒತ್ತಡ ಹೇರಿದೆ ಈ ಹಿನ್ನೆಲೆಯಲ್ಲಿ ಶೇ.50ರಷ್ಟು ಫೀಸ್​ ತೆಗೆದುಕೊಳ್ಳುವಂತೆ ಪೋಷಕರು ಮನವಿ ಮಾಡಿಕೊಂಡಿದ್ದು, ಇದಕ್ಕೆ ಒಪ್ಪದ ಶಾಲಾ ಇಲಾಖೆ ಆನ್​ಲೈನ್ ಕ್ಲಾಸ್ ಸ್ಥಗಿತಗೊಳಿಸಿದೆ.

ಫೀಸ್​ ಕಟ್ಟದ ಮಕ್ಕಳ ಆನ್​ಲೈನ್ ಕ್ಲಾಸ್​ಗೆ ಬ್ರೇಕ್.. ಐಡಿ ಬ್ಲಾಕ್​ ಮಾಡಿದ ಶಾಲಾ ಆಡಳಿತ ಮಂಡಳಿ!
ಯಶವಂತಪುರದ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನ ಚಿತ್ರಣ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Jan 04, 2021 | 5:14 PM

ಬೆಂಗಳೂರು: ಶುಲ್ಕ ಪಾವತಿ ಮಾಡದ ಕಾರಣಕ್ಕೆ 500 ಮಕ್ಕಳ ಆನ್​ ಲೈನ್ ತರಗತಿ​​ ಐಡಿ ಬ್ಲಾಕ್​ ಮಾಡಿರುವ ಪ್ರಕರಣ ಬೆಂಗಳೂರಿನ ಯಶವಂತಪುರದ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನಲ್ಲಿ ನಡೆದಿದೆ.

​​ಈಗಾಗಲೇ ಶಾಲೆ ತಿಳಿಸಿದಂತೆ ಪೊಷಕರು ಮೊದಲ ಹಂತದ ಶುಲ್ಕ ಪಾವತಿಸಿದ್ದು, ಎರಡನೇ ಹಂತದ ಶುಲ್ಕ ಕಟ್ಟುವಂತೆ ಶಾಲಾ ಆಡಳಿತ ಮಂಡಳಿ ಒತ್ತಡ ಹೇರಿದೆ. ಈ ಹಿನ್ನೆಲೆಯಲ್ಲಿ ಶೇ. 50ರಷ್ಟು ಫೀಸ್​ ತೆಗೆದುಕೊಳ್ಳುವಂತೆ ಪೋಷಕರು ಮನವಿ ಮಾಡಿಕೊಂಡಿದ್ದು, ಇದಕ್ಕೆ ಒಪ್ಪದ ಶಾಲಾ ಆಡಳಿತ ಮಂಡಳಿ, ಆನ್​ಲೈನ್ ಕ್ಲಾಸ್ ಸ್ಥಗಿತಗೊಳಿಸಿದೆ. ಈ ನಿಟ್ಟಿನಲ್ಲಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮುಂದೆ ಇಂದು ಬೆಳಗ್ಗೆಯಿಂದ ನೂರಾರು ಪೋಷಕರು ಕಾಯುತ್ತಿದ್ದಾರೆ. ಸದ್ಯ ಎಲ್​ಕೆಜಿಯಿಂದ 12 ನೇ ತರಗತಿವರೆಗೆ ಈ ಶಾಲೆಯಲ್ಲಿ ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ.

ಶಾಲೆ ಮುಂದೆ ಜಮಾಯಿಸಿರುವ ಪೋಷಕರು

ನ್ಯಾಷನಲ್ ಪಬ್ಲಿಕ್ ಸ್ಕೂಲ್​ನ ಚಿತ್ರಣ

ವಾರ್ಷಿಕ ಶಾಲಾ ಶುಲ್ಕ ಸಂಗ್ರಹಕ್ಕೆ ಸುರೇಶ್ ಕಡಿವಾಣ: ದಿಡ್ಡಿ ಬಾಗಿಲು ತಡವಾಗಿ ಹಾಕುವ ಯತ್ನ!