ಬೈಕ್ ಹಿಂತಿರುಗಿಸಲು ಹೇಳಿದ್ದಕ್ಕೆ ಪ್ರಾಣವನೇ ತೆಗೆದ ಸ್ನೇಹಿತ.. ಯಾವೂರಲ್ಲಿ?
ಹಾಸನ: ಕೊಟ್ಟ ಬೈಕ್ ವಾಪಸ್ ಕೇಳಿದ್ದಕ್ಕೆ ಸ್ನೇಹಿತನನ್ನೇ ಗೆಳೆಯ ಇರಿದು ಕೊಂದಿರುವ ಘಟನೆ ಹಾಸನ ಹೊರ ವಲಯದ ದೇವೇಗೌಡ ನಗರದಲ್ಲಿ ನಡೆದಿದೆ. ನಾರಿಹಳ್ಳಿಯ ಗವಿ ಅಲಿಯಾಸ್ ಗವಿಗೌಡ (23) ಕೊಲೆಯಾದ ಯುವಕ. ಕೃಷ್ಣ ಕೊಲೆ ಆರೋಪಿ. ಗವಿಗೌಡನ ಬೈಕನ್ನು ಸ್ನೇಹಿತ ಕೃಷ್ಣ ಬಳಸುತ್ತಿದ್ದ. ಒಮ್ಮೆ ಬೈಕ್ನಲ್ಲಿ ಅಪಘಾತ ಮಾಡಿಕೊಂಡಿದ್ದ. ಹೀಗಾಗಿ ಬೈಕ್ ರಿಪೇರಿ ಮಾಡಿ ವಾಪಸ್ ಕೊಡು ಎಂದು ಗವಿ, ಕೃಷ್ಣನಿಗೆ ಹೇಳಿದ್ದಾನೆ. ಈ ವೇಳೆ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಕಲಹ ಉಂಟಾಗಿದೆ. ಬಳಿಕ […]

ಹಾಸನ: ಕೊಟ್ಟ ಬೈಕ್ ವಾಪಸ್ ಕೇಳಿದ್ದಕ್ಕೆ ಸ್ನೇಹಿತನನ್ನೇ ಗೆಳೆಯ ಇರಿದು ಕೊಂದಿರುವ ಘಟನೆ ಹಾಸನ ಹೊರ ವಲಯದ ದೇವೇಗೌಡ ನಗರದಲ್ಲಿ ನಡೆದಿದೆ. ನಾರಿಹಳ್ಳಿಯ ಗವಿ ಅಲಿಯಾಸ್ ಗವಿಗೌಡ (23) ಕೊಲೆಯಾದ ಯುವಕ. ಕೃಷ್ಣ ಕೊಲೆ ಆರೋಪಿ.
ಗವಿಗೌಡನ ಬೈಕನ್ನು ಸ್ನೇಹಿತ ಕೃಷ್ಣ ಬಳಸುತ್ತಿದ್ದ. ಒಮ್ಮೆ ಬೈಕ್ನಲ್ಲಿ ಅಪಘಾತ ಮಾಡಿಕೊಂಡಿದ್ದ. ಹೀಗಾಗಿ ಬೈಕ್ ರಿಪೇರಿ ಮಾಡಿ ವಾಪಸ್ ಕೊಡು ಎಂದು ಗವಿ, ಕೃಷ್ಣನಿಗೆ ಹೇಳಿದ್ದಾನೆ. ಈ ವೇಳೆ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಕಲಹ ಉಂಟಾಗಿದೆ. ಬಳಿಕ ಮನಸಲ್ಲಿ ದ್ವೇಷ ಹೊಂದಿದ್ದ ಕೃಷ್ಣ ಬೈಕ್ ರಿಪೇರಿಗೆ ಹಣ ಕೊಡೋದಾಗಿ ಮನೆ ಬಳಿ ಬರಲು ಹೇಳಿ ಚಾಕುವಿನಿಂದ ಗವಿಗೆ ಇರಿದಿದ್ದಾನೆ.
ಚೂರಿ ಇರಿತದಿಂದ ಸ್ಥಳದಲ್ಲೇ ಗವಿಗೌಡನ ಪ್ರಾಣ ಹಾರಿ ಹೋಗಿದೆ. ಘಟನೆಯಿಂದ ರೊಚ್ಚಿಗೆದ್ದ ಆರೋಪಿ ಕೃಷ್ಣನ ಮೇಲೆ ಗವಿ ಪರಿಚಿತರು ಹಲ್ಲೆ ನಡೆಸಿದ್ದಾರೆ. ಸದ್ಯ ಕೃಷ್ಣ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಸಂಬಂಧ ಹಾಸನ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Published On - 1:09 pm, Tue, 20 October 20




