ಕಬ್ಬನ್​ ಪಾರ್ಕ್​​ನಲ್ಲಿ ನಿಯಮಬಾಹಿರ ನಿರ್ಮಾಣ ಚಟುವಟಿಕೆ ಆರೋಪ: ಸರ್ಕಾರ, ತೋಟಗಾರಿಕೆ ಇಲಾಖೆಗೆ ಹೈಕೋರ್ಟ್ ನೋಟಿಸ್

ಕಬ್ಬನ್ ​ಪಾರ್ಕ್​​ನಲ್ಲಿ ನಿಯಮಬಾಹಿರ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿದೆ ಎಂಬ ಆರೋಪದಡಿ ಕಬ್ಬನ್ ​ಪಾರ್ಕ್​​ ನಡಿಗೆದಾರರ ಸಂಘದಿಂದ ಹೈಕೋರ್ಟ್​ಗೆ PIL ಸಲ್ಲಿಕೆಯಾಗಿತ್ತು. ಇದೀಗ, ಈ ಕುರಿತು ಸರ್ಕಾರ ಮತ್ತು ತೋಟಗಾರಿಕೆ ಇಲಾಖೆಗೆ ಹೈಕೋರ್ಟ್ ನೋಟಿಸ್ ಕಳುಹಿಸಿದೆ.

  • TV9 Web Team
  • Published On - 18:00 PM, 21 Jan 2021
ಕಬ್ಬನ್​ ಪಾರ್ಕ್​​ನಲ್ಲಿ ನಿಯಮಬಾಹಿರ ನಿರ್ಮಾಣ ಚಟುವಟಿಕೆ ಆರೋಪ: ಸರ್ಕಾರ, ತೋಟಗಾರಿಕೆ ಇಲಾಖೆಗೆ ಹೈಕೋರ್ಟ್ ನೋಟಿಸ್
ಕರ್ನಾಟಕ ಹೈಕೋರ್ಟ್​

ಬೆಂಗಳೂರು: ಕಬ್ಬನ್ ​ಪಾರ್ಕ್​​ನಲ್ಲಿ ನಿಯಮಬಾಹಿರ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿದೆ ಎಂಬ ಆರೋಪದಡಿ ಕಬ್ಬನ್ ​ಪಾರ್ಕ್​​ ನಡಿಗೆದಾರರ ಸಂಘದಿಂದ ಹೈಕೋರ್ಟ್​ಗೆ PIL ಸಲ್ಲಿಕೆಯಾಗಿತ್ತು. ಇದೀಗ, ಈ ಕುರಿತು ಸರ್ಕಾರ ಮತ್ತು ತೋಟಗಾರಿಕೆ ಇಲಾಖೆಗೆ ಹೈಕೋರ್ಟ್ ನೋಟಿಸ್ ಕಳುಹಿಸಿದೆ.

ಹೈಕೋರ್ಟ್ ಅನುಮತಿ ಪಡೆಯದೇ ನಿರ್ಮಾಣ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದು ಸಂಘ ತನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಿದೆ. ಹಾಗಾಗಿ, ಅಕ್ರಮ ನಿರ್ಮಾಣಗಳಿಗೆ ತಡೆಯಾಜ್ಞೆ ನೀಡಲು ಸಂಘ ಮನವಿಮಾಡಿದೆ.

ಇದೀಗ, ಸರ್ಕಾರ, ತೋಟಗಾರಿಕೆ ಇಲಾಖೆಗೆ ಹೈಕೋರ್ಟ್ ನೋಟಿಸ್ ನೀಡದೆ. ಜೊತೆಗೆ, ಪಿಐಎಲ್ ವಿಚಾರಣೆಯನ್ನು ನಾಳೆಗೆ ನಿಗದಿಪಡಿಸಿದೆ.

ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು.. 140 ದಿನಗಳ ಜೈಲುವಾಸ ಅಂತ್ಯ