ಡಯಾಲಿಸಿಸ್ ಪೇಶೆಂಟ್‌ಗೆ ಚಿಕಿತ್ಸೆ ನಿರಾಕರಣೆ, ವೈದ್ಯರಿಗೆ ಮಾನವೀಯತೆಯೇ ಇಲ್ವಾ?

  • Publish Date - 5:55 pm, Tue, 14 July 20 Edited By: sadhu srinath
ಡಯಾಲಿಸಿಸ್ ಪೇಶೆಂಟ್‌ಗೆ ಚಿಕಿತ್ಸೆ ನಿರಾಕರಣೆ, ವೈದ್ಯರಿಗೆ ಮಾನವೀಯತೆಯೇ ಇಲ್ವಾ?

ಬೆಂಗಳೂರು: ಕೊರೊನಾ ಬಂದಾಗಿನಿಂದ ಕೆಲ ವೈದ್ಯರು ಮಾನವೀಯತೆಯನ್ನೆ ಮರೆತಂತಿದೆ. ಯಾಕಂದ್ರೆ ಕೆಲ ಆಸ್ಪತ್ರೆಗಳು ಯಾವುದೇ ರೋಗಿ ಬಂದ್ರೂ ಚಿಕಿತ್ಸೆ ನೀಡದೆ ವಾಪಸ್ ಕಳಿಸುತ್ತಿವೆ. ಹೀಗೆ ಡಯಾಲಿಸಿಸ್ ಮಾಡಲು ಆಸ್ಪತ್ರೆಗಳು ನಿರಾಕರಿಸಿದ್ದರಿಂದ ರೋಗಿಯೊಬ್ಬರು ನರಳಾಡುತ್ತಿರುವ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.

ಹೌದು ಬೆಂಗಳೂರಿನ ನಂದಿನಿ ಲೇ ಔಟ್‌ನ 34 ವರ್ಷದ ನಿವಾಸಿಯೊಬ್ಬರು ಸತತ ನಾಲ್ಕು ದಿನಗಳಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದರೂ ಅವರಿಗೆ ಡಯಾಲಿಸಿಸ್ ಟ್ರೀಟ್‌ಮೆಂಟ್‌ ಸಿಕ್ಕಿಲ್ಲ. ಪರಿಣಾಮ ಪೇಶೆಂಟ್ ಚಿಕಿತ್ಸೆ ಸಿಗದೆ ನರಳಾಡುತ್ತಿದ್ದಾರೆ. ಇನ್ನೊಂದೆಡೆ ಈ ಮೊದಲೇ ಡಯಾಲಿಸಿಸ್ ಟೈಮ್‌ನಲ್ಲಿ ಬಿದ್ದು ಕಾಲು ಮೂಳೆ ಮುರಿದಿದೆ. ಹೀಗಿದ್ರೂ ಆಸ್ಪತ್ರೆಗಳು ವಾಪಸ್ ಕಳುಹಿಸಿ ಅಮಾನವೀಯತೆ ಮೆರೆದಿದ್ದಾರೆ.

ಶಂಕರಮಠದ ರಂಗದೊರೈ ಆಸ್ಪತ್ರೆ, ಎಂಎಸ್ ರಾಮಯ್ಯ, ಕಣ್ವ ಆಸ್ಪತ್ರೆ ಹೀಗೆ ಎಲ್ಲಾ ಕಡೆ ಸುತ್ತಾಡಿ ಎಲ್ಲೂ ಚಿಕಿತ್ಸೆ ಸಿಗದೆ ಮನೆಗೆ ವಾಪಸ್ ಬಂದಿದ್ದಾರೆ. ಒಂದೆಡೆ ಕಾಲು ಮುರಿದಿದೆ, ಮತ್ತೊಂದು ಕಡೆ ಎರಡೂ ಕಿಡ್ನಿ ಫೇಲ್ಯೂರ್ ಆಗಿವೆ. ಈಗ ಚಿಕಿತ್ಸೆ ಸಿಗದೆ ಮನೆಯಲ್ಲಿ ಕೂತಲ್ಲೇ ನರಳಾಟ ನಡೆಸ್ತಿದ್ದಾರೆ ರೋಗಿ.