How to | ಸಿಗ್ನಲ್ ಆ್ಯಪ್ ಬಳಕೆ ಹೇಗೆ? ಡೆಸ್ಕ್​ಟಾಪ್​ಗೆ ಡೌನ್​ಲೋಡ್ ಮಾಡಬಹುದಾ?

ಇದು ವಾಟ್ಸ್ಆ್ಯಪ್​ಗಿಂತ ಹೇಗೆ ಭಿನ್ನ ಎಂದು ಕೇಳಿದರೆ ಅದರಂತೆಯೇ ಇದು ಚಾಟಿಂಗ್ ಆ್ಯಪ್. ಇಲ್ಲಿ ದನಿ ಸಂದೇಶ , ಫೋಟೊ ಶೇರಿಂಗ್, ವಿಡಿಯೊ ಚಾಟ್ ಮತ್ತು ಕರೆ ಮಾಡಬಹುದು. ಆದರೆ ಇಲ್ಲಿ ನಿಮ್ಮ ಚಾಟ್ ಅಥವಾ ಕರೆಗಳು end-to-end encrypted ಆಗಿರುತ್ತವೆ. ಅಂದರೆ ನಿಮ್ಮ ಮಾಹಿತಿ ಗೌಪ್ಯವಾಗಿಯೇ ಇರುತ್ತದೆ.

How to | ಸಿಗ್ನಲ್ ಆ್ಯಪ್ ಬಳಕೆ ಹೇಗೆ? ಡೆಸ್ಕ್​ಟಾಪ್​ಗೆ ಡೌನ್​ಲೋಡ್ ಮಾಡಬಹುದಾ?
ಸಿಗ್ನಲ್ ಆ್ಯಪ್
Follow us
ರಶ್ಮಿ ಕಲ್ಲಕಟ್ಟ
| Updated By: ಆಯೇಷಾ ಬಾನು

Updated on: Jan 13, 2021 | 7:00 AM

ವಾಟ್ಸ್ಆ್ಯಪ್ ತನ್ನಲ್ಲಿರುವ ಮಾಹಿತಿಯನ್ನು ಫೇಸ್​ಬುಕ್ ಜತೆ ಶೇರ್ ಮಾಡಿಕೊಳ್ಳುತ್ತಿದೆ ಎಂಬ ಸುದ್ದಿಯ ಬೆನ್ನಲ್ಲೇ ವಾಟ್ಸ್ಆ್ಯಪ್ ಬಳಕೆದಾರರು ಸಿಗ್ನಲ್ ಆ್ಯಪ್​ನತ್ತ ವಲಸೆ ಹೋಗುತ್ತಿದ್ದಾರೆ. ಸದ್ಯ ಆ್ಯಪಲ್ ಸ್ಟೋರ್​ನಲ್ಲಿ ಸಿಗ್ನಲ್ ಜನಪ್ರಿಯ ಆ್ಯಪ್ ಆಗಿ ಹೊರಹೊಮ್ಮಿದೆ.

ವಾಟ್ಸ್ಆ್ಯಪ್ ಬಳಕೆದಾರ ಸ್ನೇಹಿ ಆ್ಯಪ್. ಅಲ್ಲಿಂದ ಸಿಗ್ನಲ್ ಆ್ಯಪ್​ಗೆ ವಲಸೆ ಹೋಗುವುದು ಅಷ್ಟು ಸುಲಭವಾ? ಎಂಬುದು ನಿಮ್ಮ ಪ್ರಶ್ನೆಯಾದರೆ ಅದಕ್ಕೆ ಉತ್ತರ ತುಂಬಾ ಸುಲಭ. ಈ ಹಿಂದೆ ಮೊಬೈಲ್ ಫೋನ್​ಗಳಲ್ಲಿ ಎಸ್ಎಂಎಸ್ ಮೂಲಕವೇ ಚಾಟ್ ಮಾಡುತ್ತಿದ್ದವರು ಸ್ಮಾರ್ಟ್​ಫೋನ್​ಗಳಲ್ಲಿ ವಾಟ್ಸ್ಆ್ಯಪ್ ಬಳಕೆ ಮಾಡಲು ಶುರು ಮಾಡಲಿಲ್ಲವೇ? ಅದೇ ರೀತಿ ಹೊಸ ಆ್ಯಪ್ ಬಳಸುವುದನ್ನು ಬೇಗನೇ ಕಲಿತು ಬಿಡುತ್ತೇವೆ.

ಸಿಗ್ನಲ್ ಆ್ಯಪ್​ ಡೌನ್​ಲೋಡ್ ಮಾಡುವುದು ಹೇಗೆ? ವಾಟ್ಸ್ಆ್ಯಪ್​ಗಿಂತ ಇದು ಹೇಗೆ ಭಿನ್ನ ? ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಸ್ಟೋರ್​ನಲ್ಲಿ ಉಚಿತವಾಗಿ ಸಿಗ್ನಲ್ ಆ್ಯಪ್ ಲಭ್ಯ. ಸುಲಭವಾಗಿ ಡೌನ್​ಲೋಡ್ ಮಾಡಿಕೊಳ್ಳಬಹುದು. ಇದು ವಾಟ್ಸ್ಆ್ಯಪ್​ಗಿಂತ ಹೇಗೆ ಭಿನ್ನ ಎಂದು ಕೇಳಿದರೆ ಅದರಂತೆಯೇ ಇದು ಚಾಟಿಂಗ್ ಆ್ಯಪ್. ಇಲ್ಲಿ ಧ್ವನಿ ಸಂದೇಶ, ಫೋಟೊ ಶೇರಿಂಗ್, ವಿಡಿಯೊ ಚಾಟ್ ಮತ್ತು ಕರೆ ಮಾಡಬಹುದು. ಆದರೆ ಇಲ್ಲಿ ನಿಮ್ಮ ಚಾಟ್ ಅಥವಾ ಕರೆಗಳು end-to-end encrypted ಆಗಿರುತ್ತವೆ. ಅಂದರೆ ನಿಮ್ಮ ಮಾಹಿತಿ ಗೌಪ್ಯವಾಗಿಯೇ ಇರುತ್ತದೆ. ಗ್ರೂಪ್ ಕರೆ ಮಾಡುವುದಾದರೆ 5 ಜನರಿಗೆ ಮಾತ್ರ ಮಾಡಬಹುದು.

ಸಿಗ್ನಲ್ ಆ್ಯಪ್ ಬಳಕೆ ಹೇಗೆ? ಆ್ಯಪಲ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್ ನಿಂದ ಸಿಗ್ನಲ್ ಆ್ಯಪ್​ ಡೌನ್ಲೋಡ್ ಮಾಡಿದ ನಂತರ ಸಿಗ್ನಲ್ ಖಾತೆ ತೆರೆಯಬೇಕು. ಇದಕ್ಕಾಗಿ ಆ್ಯಪ್ ನಿಮ್ಮ ಅನುಮತಿ ಕೇಳುತ್ತದೆ. ಅದಕ್ಕೆ ಒಪ್ಪಿಗೆ ನೀಡಿ, ಖಾತೆ ತೆರೆಯಲು ನಿಮ್ಮ ಫೋನ್ ಸಂಖ್ಯೆ ನಮೂದಿಸಿ, ತಕ್ಷಣವೇ ನಿಮಗೆ ವೆರಿಫಿಕೇಷನ್ ಕೋಡ್ ಬರುತ್ತದೆ. ಅದನ್ನು ನಮೂದಿಸಿದರೆ ನಿಮ್ಮ ಖಾತೆ ತೆರೆದಾಯಿತು. ನಿಮ್ಮ ಪ್ರೊಫೈಲ್​ಗೆ ಹೆಸರಿಡಿ, ಪ್ರೊಫೈಲ್ ಫೋಟೊ ಅಪ್​ಡೇಟ್ ಮಾಡಿ. ಸಿಗ್ನಲ್ ಬಳಸುವ ಬಳಕೆದಾರರು ನಿಮ್ಮ ಸಂಪರ್ಕ ಲಿಸ್ಟ್​ನಲ್ಲಿದ್ದರೆ ಸುಲಭವಾಗಿ ಚಾಟ್ ಮಾಡಬಹುದು.

ಡೆಸ್ಕ್​ಟಾಪ್​ನಲ್ಲಿ ಬಳಸಬಹುದಾ? ವಾಟ್ಸ್ಆ್ಯಪ್​ನ್ನು ಡೆಸ್ಕ್ ಟಾಪ್​ನಲ್ಲಿ ಬಳಸುವಂತೆ ಸಿಗ್ನಲ್ ಆ್ಯಪ್​ ಅನ್ನು ಕೂಡಾ ಡೆಸ್ಕ್​ಟಾಪ್​ನಲ್ಲಿ ಬಳಸಬಹುದು. ಅದಕ್ಕಾಗಿ ನೀವು ಸಿಗ್ನಲ್ ಖಾತೆ ಹೊಂದಿರಬೇಕು ಮತ್ತು ಕಂಪ್ಯೂಟರ್​ನಲ್ಲಿ ಸಿಗ್ನಲ್ ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಬೇಕು.

https://signal.org ಗೆ ಭೇಟಿ ನೀಡಿದರೆ Mac ಅಥವಾ Windows ಕಂಪ್ಯೂಟರ್​ಗಾಗಿ ಸಿಗ್ನಲ್ ಡೌನ್​ಲೋಡ್ ಮಾಡಬಹುದು. ಸಿಗ್ನಲ್ ಇನ್​ಸ್ಟಾಲ್ ಮಾಡಿದ ನಂತರ ಡೆಸ್ಕ್ ಟಾಪ್​ನಲ್ಲಿ ಬಳಸಲು ಈ ರೀತಿ ಮಾಡಿ.

ನಿಮ್ಮ ಮೊಬೈಲ್ ನಲ್ಲಿ ಸಿಗ್ನಲ್ ಆ್ಯಪ್ ಖಾತೆಯ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ. ಅಲ್ಲಿ Linked devices > Link New device. ಡೆಸ್ಕ್ ಟಾಪ್​ನಲ್ಲಿ ಕಾಣುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ, ನಿಮ್ಮ ಖಾತೆಯನ್ನು ಡೆಸ್ಕ್​ಟಾಪ್​ನಲ್ಲಿಯೂ ಬಳಸಿ.

How to | ವಾಟ್ಸ್ಆ್ಯಪ್ ಸಂದೇಶ ಹೋಮ್ ಸ್ಕ್ರೀನ್​ನಲ್ಲಿ ಪೂರ್ತಿಯಾಗಿ ಕಾಣಿಸದಂತೆ ಮಾಡುವುದು ಹೇಗೆ?