ಮನೆಯಲ್ಲಿ, ಪೂಜಾ ಕಾರ್ಯಗಳಲ್ಲಿ ಶಂಖನಾದ ಮಾಡುವುದು ಏಕೆ? ಶಂಖದ ಪ್ರಾಮುಖ್ಯತೆ ಏನು?
ಶಂಖನಾದವು ನಮ್ಮ ನೋವು, ಕಷ್ಟ, ಚಿಂತೆಗಳನ್ನು ತೊಡೆದುಹಾಕಬಲ್ಲದು ಎಂಬ ನಂಬಿಕೆ ಇದೆ. ಶಂಖನಾದವು ಪೂಜೆ-ಪುನಸ್ಕಾರದ ಜತೆಗೆ ಅನಾರೋಗ್ಯಕರ ವಾತಾವರಣವನ್ನು ದೂರಮಾಡಲು ಕೂಡ ಬಳಕೆಯಾಗುತ್ತದೆ.
ಸಮುದ್ರ ಮಥನದ ಕಾಲದಲ್ಲಿ ಸಾಗರದ ಉದರದಿಂದ ಹೊರಬಂದ 14 ವಸ್ತುಗಳಲ್ಲಿ ಶಂಖವೂ ಒಂದು ಎಂದು ಹೇಳುತ್ತಾರೆ. ಸನಾತನ ಸಂಸ್ಕೃತಿ, ಸಂಪ್ರದಾಯಗಳಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿರುವ ಶಂಖವು ದೇವತಾ ಆರಾಧನೆಗಳಲ್ಲಿ ಬಳಕೆಯಾಗುತ್ತವೆ. ಜೈನ, ಬುದ್ಧ, ಶೈವ, ವೈಷ್ಣವ ಸಮುದಾಯಗಳಲ್ಲಿ ಶಂಖ ವಿಶೇಷ ಸ್ಥಾನ ಹೊಂದಿದೆ. ಶ್ರೀ ವಿಷ್ಣು ದೇವರಿಗೆ ಶಂಖ ಬಹಳ ಪ್ರೀತಿ ಎಂದೂ ಹೇಳಲಾಗುತ್ತದೆ.
ಶಂಖ ಎಂಬ ವಸ್ತು ಹುಟ್ಟಿದ್ದು ಹೇಗೆ? ಶಂಖನಾದವು ನಮ್ಮ ನೋವು, ಕಷ್ಟ, ಚಿಂತೆಗಳನ್ನು ತೊಡೆದುಹಾಕಬಲ್ಲದು ಎಂಬ ನಂಬಿಕೆ ಇದೆ. ಶಂಖನಾದವು ಪೂಜೆ-ಪುನಸ್ಕಾರದ ಜತೆಗೆ ಅನಾರೋಗ್ಯಕರ ವಾತಾವರಣವನ್ನು ದೂರಮಾಡಲು ಕೂಡ ಬಳಕೆಯಾಗುತ್ತದೆ. ದುಷ್ಟ ಶಕ್ತಿಗಳನ್ನು ಶಿಕ್ಷಿಸಲು, ಶಿಷ್ಟ ರಕ್ಷಣೆಗೆ ಶಂಖನಾದ ಮಾಡಬೇಕು ಎಂಬ ನಂಬಿಕೆಯೂ ಇದೆ. ಅದೇ ಕಾರಣಕ್ಕೆ ಸಂಧ್ಯಾ ಕಾಲದಲ್ಲಿ ಮನೆಯಲ್ಲಿ ಶಂಖನಾದ ಮಾಡುತ್ತೇವೆ. ಶಂಖವು ವಿಷ್ಣು ದೇವರ ವಿರೋಧಿ ಶಕ್ತಿಯಾದ ದುಷ್ಟ ದಂಭ ಎಂಬವನ ದಮನದ ಬಳಿಕ ತಯಾರಾಯಿತು ಎಂಬುದು ಒಂದು ಪ್ರತೀತಿ.
ಪೂಜಾಕಾರ್ಯಗಳಲ್ಲಿ ಶಂಖ ಯಾಕೆ ಬೇಕು? ನಮ್ಮ ಪೂರ್ವಜರು ಹಾಗೂ ಅದಕ್ಕೂ ಮೊದಲಿನ ಹಿರಿಯರು ಕೂಡ ಪೂಜಾ ವಿಧಿವಿಧಾನಗಳಲ್ಲಿ ಶಂಖವನ್ನು ಬಳಸುತ್ತಿದ್ದಾರೆ. ಶಂಖನಾದವನ್ನು ಅನುರಣಿಸುತ್ತಿದ್ದಾರೆ. ಶ್ರೀಹರಿಯ ಅತಿಪ್ರಿಯ ನಾದವು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತದೆ ಎಂಬುದು ಭಕ್ತರ ನಂಬಿಕೆ. ಶಂಖನಾದದ ಪ್ರತಿಧ್ವನಿ ಹರಡುತ್ತಿದ್ದಂತೆ ಎಲ್ಲಾ ತೊಡಕುಗಳು, ಕಷ್ಟಗಳು ದೂರವಾಗುತ್ತದೆ. ಋಣಾತ್ಮಕ ಶಕ್ತಿಯನ್ನು ನಾಶಮಾಡುತ್ತದೆ ಎಂಬ ನಂಬಿಕೆ ಇದೆ.
ಶಂಖವನ್ನು ಪೂಜಿಸುವುದು ಹೇಗೆ? ಶಂಖವನ್ನು ಮನೆಗೆ ತಂದ ಬಳಿಕ, ಅದನ್ನು ಸ್ವಚ್ಛವಾದ ಸ್ಥಾನದಲ್ಲಿ ಇರಿಸಬೇಕು. ನೀರಿನಿಂದ ಶುಭ್ರವಾಗಿ ತೊಳೆದುಕೊಳ್ಳಬೇಕು. ಬಳಿಕ, ಹಾಲು ಮತ್ತು ಗಂಗಾ ಜಲವನ್ನು ಶಂಖಕ್ಕೆ ಎರೆಯಬೇಕು. ಶಂಖವನ್ನು ಮತ್ತೊಮ್ಮೆ ಸ್ವಚ್ಛಗೊಳಿಸಿ ಹೂವು, ಗಂಧದಿಂದ ಸಿಂಗರಿಸಬೇಕು. ಪೂಜಾಪೀಠದಲ್ಲಿ ಇರಿಸಿ, ಪೂಜಾಕಾರ್ಯ ನಡೆಸಬೇಕು. ಲಕ್ಷ್ಮೀ ದೇವಿ, ವಿಷ್ಣು ದೇವರನ್ನು ಪ್ರಾರ್ಥಿಸಬೇಕು.
ಶಂಖದ ಇತರ ವಿಶೇಷತೆಗಳು ಶಂಖವು ಸಮುದ್ರ ಮಥನ ಕಾಲದಲ್ಲಿ ಲಕ್ಷ್ಮೀ ದೇವಿಯ ಜತೆಗೆ ಹುಟ್ಟಿದ ವಸ್ತು. ಹಾಗಾಗಿ, ಶಂಖ ಇದ್ದ ಮನೆಯಲ್ಲಿ ಲಕ್ಷ್ಮೀದೇವಿಯೂ ವಾಸಿಸುತ್ತಾಳೆ. ಅಂದರೆ, ಸಂಪತ್ತು ನೆಲೆಗೊಳ್ಳುತ್ತದೆ ಎಂಬುದು ನಂಬಿಕೆ. ದಕ್ಷಿಣಾಭಿಮುಖವಾಗಿ ಇರಿಸಿದ ಶಂಖವು ಅತಿ ಪವಿತ್ರ ಎಂದು ಕರೆಸಿಕೊಳ್ಳುತ್ತದೆ. ಶಂಖವನ್ನು ಪೂಜೆ ಮಾಡುವ ಸ್ಥಳದಲ್ಲಿ, ಸದಾ ನೀರು ತುಂಬಿ ಇರಿಸಬೇಕು.
ಇದನ್ನೂ ಓದಿ: Amarnath Yatra: ಸರ್ವೇಶ್ವರನ ಭಕ್ತರಿಗೆ ಸಿಹಿ ಸುದ್ದಿ; ಅಮರನಾಥ ಯಾತ್ರೆಗೆ ಅನುಮತಿ
ದಾವಣಗೆರೆಯಲ್ಲಿ ಭಕ್ತರ ಜತೆ ಮಾತನಾಡುವ ದೇವರು… ಏನಿದರ ವಿಶೇಷತೆ?
Published On - 7:03 am, Mon, 15 March 21