ಏಯ್ ಹೋಗೋ.. ನಂಗೆ Treatment ಬೇಡ -ವೈದ್ಯರಿಗೆ ಗಾಯಗೊಂಡ ಕುಡುಕನ ಆವಾಜ್!
ವಿಜಯಪುರ: ಗಾಯಗೊಂಡಿದ್ದ ಕುಡುಕನೊಬ್ಬ ಚಿಕಿತ್ಸೆ ನೀಡಲು ಮುಂದಾದ ವೈದ್ಯಕೀಯ ಸಿಬ್ಬಂದಿಗೆ ಆವಾಜ್ ಹಾಕಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಮದ್ಯ ಸೇವಿಸಿ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯನ್ನ ಸ್ಥಳೀಯರು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆತಂದರು. ಈ ಮಧ್ಯೆ ಚಿಕಿತ್ಸೆ ನೀಡಲು ಬಂದ ವೈದ್ಯರು ಹಾಗೂ ಸಿಬ್ಬಂದಿ ಜೊತೆ ಕುಡುಕ ವಾಗ್ವಾದಕ್ಕೆ ಇಳಿದ. ಏಯ್, ನಂಗೆ ಟ್ರೀಟ್ಮೆಂಟ್ ಬೇಡ ಹೋಗ್ ಅಂತಾ ಸಿಬ್ಬಂದಿಗೇ ಆವಾಜ್ ಹಾಕಿದ. ಆಸ್ಪತ್ರೆಗೆ ನಿಯೋಜನೆ ಗೊಂಡಿದ್ದ ಮಹಿಳಾ ಪೇದೆ ಗದರಿಸಿದರೂ ಡೋಂಟ್ ಕೇರ್ ಎಂಬಂತೆ ಕಾಲ್ […]

ವಿಜಯಪುರ: ಗಾಯಗೊಂಡಿದ್ದ ಕುಡುಕನೊಬ್ಬ ಚಿಕಿತ್ಸೆ ನೀಡಲು ಮುಂದಾದ ವೈದ್ಯಕೀಯ ಸಿಬ್ಬಂದಿಗೆ ಆವಾಜ್ ಹಾಕಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಮದ್ಯ ಸೇವಿಸಿ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯನ್ನ ಸ್ಥಳೀಯರು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆತಂದರು. ಈ ಮಧ್ಯೆ ಚಿಕಿತ್ಸೆ ನೀಡಲು ಬಂದ ವೈದ್ಯರು ಹಾಗೂ ಸಿಬ್ಬಂದಿ ಜೊತೆ ಕುಡುಕ ವಾಗ್ವಾದಕ್ಕೆ ಇಳಿದ.
ಏಯ್, ನಂಗೆ ಟ್ರೀಟ್ಮೆಂಟ್ ಬೇಡ ಹೋಗ್ ಅಂತಾ ಸಿಬ್ಬಂದಿಗೇ ಆವಾಜ್ ಹಾಕಿದ. ಆಸ್ಪತ್ರೆಗೆ ನಿಯೋಜನೆ ಗೊಂಡಿದ್ದ ಮಹಿಳಾ ಪೇದೆ ಗದರಿಸಿದರೂ ಡೋಂಟ್ ಕೇರ್ ಎಂಬಂತೆ ಕಾಲ್ ಮೇಲೆ ಕಾಲು ಹಾಕೊಂದು ಮಲಗಲು ಮುಂದಾದ ಭೂಪ! ಅಂತೂ ಇಂತೂ, ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹರಸಾಹಸಪಟ್ಟ ಚಿಕಿತ್ಸೆ ನೀಡಿದರು.

Published On - 6:54 pm, Sun, 2 August 20



