Karnataka Budget 2021: ರಾಜ್ಯ ಸರ್ಕಾರದ ಆದಾಯಕ್ಕೆ ಹೇಗೆಲ್ಲ ಬಿದ್ದಿದೆ ಕತ್ತರಿ?

Karnataka Budget 2021: ರಾಜ್ಯ ಸರ್ಕಾರದ ಆದಾಯಕ್ಕೆ ಹೇಗೆಲ್ಲ ಬಿದ್ದಿದೆ ಕತ್ತರಿ?
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

ಮಾರ್ಚ್ 8ನೇ ತಾರೀಕಿನಂದು ಕರ್ನಾಟಕ ಬಜೆಟ್ 2021- 22 ಮಂಡಿಸಲಿದ್ದಾರೆ 78 ವರ್ಷದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಇದು ಅವರು ಮಂಡಿಸುತ್ತಿರುವ ಎಂಟನೇ ಬಜೆಟ್. ಈ ಹಿನ್ನೆಲೆಯಲ್ಲಿ ಕರ್ನಾಟಕದ ಆರ್ಥಿಕ ಸ್ಥಿತಿ ಹೇಗಿದೆ ಎಂಬ ಅಂಕಿ- ಅಂಶ ಇಲ್ಲಿದೆ.

Srinivas Mata

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 25, 2021 | 7:24 PM


ಕರ್ನಾಟಕ ಬಜೆಟ್ 2021- 22 ಅನ್ನು ಮಾರ್ಚ್ 8ನೇ ತಾರೀಕು ಮಂಡನೆ ಮಾಡಲಿದ್ದಾರೆ ಹಣಕಾಸು ಇಲಾಖೆ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರ ತನ್ನ ಆದಾಯ ಹಾಗೂ ವೆಚ್ಚದಲ್ಲಿ ಏನೆಲ್ಲ ಲೆಕ್ಕಾಚಾರ ಇರಿಸಿಕೊಂಡಿತ್ತೋ ಅವೆಲ್ಲ ತಲೆಕೆಳಗಾಗಿದೆ. ಕೊರೊನಾ ನೀಡಿದ ಹೊಡೆತ ದೊಡ್ಡ ಸವಾಲನ್ನೇ ಎದುರಿಗೆ ತಂದುನಿಲ್ಲಿಸಿದೆ. 2020ರ ಏಪ್ರಿಲ್​​ನಿಂದ ಡಿಸೆಂಬರ್ ಮಧ್ಯೆ ರಾಜ್ಯದ ಆರ್ಥಿಕ ಸ್ಥಿತಿ ಹೇಗಿತ್ತು ಗೊತ್ತೆ? ಬಜೆಟ್ ಲೆಕ್ಕಾಚಾರ ಹಾಗೂ ಅದಕ್ಕೆ ಹೋಲಿಸಿದಲ್ಲಿ ವಾಸ್ತವ ಮತ್ತು ಕಳೆದ ವರ್ಷಕ್ಕಿಂತ ಏರಿಕೆ ಆಗಿದೆಯೋ ಇಳಿಕೆ ಆಗಿದೆಯೋ ಇತ್ಯಾದಿ ಆಸಕ್ತಿಕರ ಮಾಹಿತಿಗಳು ನಿಮ್ಮೆದುರು ಇದೆ.

ಸ್ವಂತ ತೆರಿಗೆ ರಾಜಸ್ವ (Own Tax Revenues)
2020- 21ನೇ ಸಾಲಿನ ಬಜೆಟ್ ಅಂದಾಜು 1,11,991 ಕೋಟಿ ರೂ.
2020-21ರಲ್ಲಿ ಏಪ್ರಿಲ್​​ನಿಂದ ಡಿಸೆಂಬರ್ ತನಕ ಸಂಗ್ರಹ ಆಗಿರುವುದು 65,439 ಕೋಟಿ ರೂ.
ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ10.92ರಷ್ಟು ಆದಾಯ ಇಳಿಕೆ

ವಾಣಿಜ್ಯ ತೆರಿಗೆ (Commercial Tax)
2020- 21ನೇ ಸಾಲಿನ ಬಜೆಟ್ ಅಂದಾಜು 66,327 ಕೋಟಿ ರೂ.
2020-21ರಲ್ಲಿ ಏಪ್ರಿಲ್​​ನಿಂದ ಡಿಸೆಂಬರ್ ತನಕ ಸಂಗ್ರಹ ಆಗಿರುವುದು 38,163 ಕೋಟಿ ರೂ.
ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ12.81ರಷ್ಟು ಆದಾಯ ಇಳಿಕೆ

ಅಬಕಾರಿ (State excise)
2020- 21ನೇ ಸಾಲಿನ ಬಜೆಟ್ ಅಂದಾಜು 22,700 ಕೋಟಿ ರೂ.
2020-21ರಲ್ಲಿ ಏಪ್ರಿಲ್​​ನಿಂದ ಡಿಸೆಂಬರ್ ತನಕ ಸಂಗ್ರಹ ಆಗಿರುವುದು 16,787 ಕೋಟಿ ರೂ.
ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ 3.51ರಷ್ಟು ಆದಾಯ ಏರಿಕೆ

ಮೋಟಾರು ವಾಹನ ತೆರಿಗೆ (Motor Vehicles)
2020- 21ನೇ ಸಾಲಿನ ಬಜೆಟ್ ಅಂದಾಜು 7,115 ಕೋಟಿ ರೂ.
2020-21ರಲ್ಲಿ ಏಪ್ರಿಲ್​​ನಿಂದ ಡಿಸೆಂಬರ್ ತನಕ ಸಂಗ್ರಹ ಆಗಿರುವುದು 3,631 ಕೋಟಿ ರೂ.
ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ 26.91ರಷ್ಟು ಆದಾಯ ಇಳಿಕೆ

ಮುದ್ರಾಂಕ ಮತ್ತು ನೋಂದಣಿ (Stamp and Registration)
2020- 21ನೇ ಸಾಲಿನ ಬಜೆಟ್ ಅಂದಾಜು 12,655 ಕೋಟಿ ರೂ.
2020-21ರಲ್ಲಿ ಏಪ್ರಿಲ್​​ನಿಂದ ಡಿಸೆಂಬರ್ ತನಕ ಸಂಗ್ರಹ ಆಗಿರುವುದು 6,837 ಕೋಟಿ ರೂ.
ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ 18.56 ರಷ್ಟು ಆದಾಯ ಇಳಿಕೆ

ಇತರೆ (Others)
2020- 21ನೇ ಸಾಲಿನ ಬಜೆಟ್ ಅಂದಾಜು 3,194 ಕೋಟಿ ರೂ.
2020-21ರಲ್ಲಿ ಏಪ್ರಿಲ್​​ನಿಂದ ಡಿಸೆಂಬರ್ ತನಕ ಸಂಗ್ರಹ ಆಗಿರುವುದು 1,020 ಕೋಟಿ ರೂ.
ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ 17.30 ರಷ್ಟು ಆದಾಯ ಇಳಿಕೆ

ಸ್ವಂತ ತೆರಿಗೆಯೇತರ ರಾಜಸ್ವ (Own Non Tax Revenue)
2020- 21ನೇ ಸಾಲಿನ ಬಜೆಟ್ ಅಂದಾಜು 7,767 ಕೋಟಿ ರೂ.
2020-21ರಲ್ಲಿ ಏಪ್ರಿಲ್​​ನಿಂದ ಡಿಸೆಂಬರ್ ತನಕ ಸಂಗ್ರಹ ಆಗಿರುವುದು 4,666 ಕೋಟಿ ರೂ.
ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ 0.89 ರಷ್ಟು ಆದಾಯ ಇಳಿಕೆ

ಕೇಂದ್ರ ಸರ್ಕಾರದ ತೆರಿಗೆಯ ಹಂಚಿಕೆ (Devolution From Government Of India)
2020- 21ನೇ ಸಾಲಿನ ಬಜೆಟ್ ಅಂದಾಜು 28,591 ಕೋಟಿ ರೂ.
2020-21ರಲ್ಲಿ ಏಪ್ರಿಲ್​​ನಿಂದ ಡಿಸೆಂಬರ್ ತನಕ ಬಂದಿರುವುದು 13,550 ಕೋಟಿ ರೂ.
ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ 39.88 ರಷ್ಟು ಇಳಿಕೆ

ಕೇಂದ್ರ ಸರ್ಕಾರದಿಂದ ಸಹಾಯಾನುದಾನ (GIA and contribution)
2020- 21ನೇ ಸಾಲಿನ ಬಜೆಟ್ ಅಂದಾಜು 31,570 ಕೋಟಿ ರೂ.
2020-21ರಲ್ಲಿ ಏಪ್ರಿಲ್​​ನಿಂದ ಡಿಸೆಂಬರ್ ತನಕ ಬಂದಿರುವುದು 21,594 ಕೋಟಿ ರೂ.
ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡಾ 22.39 ರಷ್ಟು ಇಳಿಕೆ

ಅಬಕಾರಿ ಇಲಾಖೆಯ ಆದಾಯ ಒಂದನ್ನು ಹೊರತುಪಡಿಸಿದರೆ ರಾಜ್ಯ ಸರ್ಕಾರಕ್ಕೆ ಬರಬೇಕಾದ ಯಾವ ಆದಾಯದಲ್ಲೂ ಏರಿಕೆ ಕಂಡಿಲ್ಲ. ಅದರಲ್ಲೂ ಕೇಂದ್ರ ಸರ್ಕಾರದಿಂದ ಬರಬೇಕಾದ ತೆರಿಗೆ ಹಂಚಿಕೆ ಮತ್ತು ಸಹಾಯಾನುದಾನದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಿದೆ. ಇಲ್ಲಿ ಪ್ರಸ್ತಾವ ಮಾಡಬೇಕಿರುವ ಮತ್ತೊಂದು ಸಂಗತಿ ಏನೆಂದರೆ, 2020- 21ನೇ ಸಾಲಿಗೆ ಅಂದಾಜು ಮಾಡಿದ್ದ ವಿತ್ತೀಯ ಕೊರತೆ ಪ್ರಮಾಣ 46,072 ಕೋಟಿ ರೂಪಾಯಿ. ಡಿಸೆಂಬರ್ ಕೊನೆ ಹೊತ್ತಿಗೆ ಅದು 25,043 ಕೋಟಿ ರೂಪಾಯಿ ಆಗಿತ್ತು. ಕಳೆದ ಸಾಲಿನ ಇದೇ ಅವಧಿಯ ವಿತ್ತೀಯ ಕೊರತೆಗೆ ಹೋಲಿಸಿದಲ್ಲಿ 140 ಪರ್ಸೆಂಟ್ ದಾಟಿಹೋಗಿದೆ.

ಒಂದು ಸರ್ಕಾರ ಹಣಕಾಸು ವರ್ಷಕ್ಕೆ (ಏಪ್ರಿಲ್ 1ರಿಂದ ಮಾರ್ಚ್ 31ರ ತನಕ) ತನ್ನ ಆದಾಯ- ವೆಚ್ಚದ ಅಂದಾಜು ಪಟ್ಟಿಯನ್ನು ಪ್ರಸ್ತಾಪ ಮಾಡುತ್ತದೆ. ಆದಾಯಕ್ಕಿಂತ ವೆಚ್ಚ ಹೆಚ್ಚಾಗಿದ್ದಾಗ ವ್ಯತ್ಯಾಸದ ಮೊತ್ತವು ವಿತ್ತೀಯ ಕೊರತೆ (Fiscal deficit) ಆಗುತ್ತದೆ. ವಿತ್ತೀಯ ಕೊರತೆ ಹೆಚ್ಚಾಗಿದೆ ಎಂದಾದಲ್ಲಿ ತಾನು ಇರಿಸಿಕೊಂಡ ಗುರಿಗಿಂತ ಹೆಚ್ಚಿನ ವೆಚ್ಚವನ್ನು ಸರ್ಕಾರ ಮಾಡುತ್ತಿದೆ ಎಂದರ್ಥ. ಅದರಲ್ಲೂ 2020- 21ನೇ ಸಾಲಿಗೆ ರಾಜ್ಯಕ್ಕೇ ಇರಲಿ, ಕೇಂದ್ರಕ್ಕೇ ಇರಲಿ ಕೊರೊನಾದ ಕಾರಣಕ್ಕೆ ಖರ್ಚಿನ ಪ್ರಮಾಣ ಸಿಕ್ಕಾಪಟ್ಟೆ ಹೆಚ್ಚಾಗಿದೆ. 2021- 22ನೇ ಸಾಲಿನ ಬಜೆಟ್​​ಗೂ ಸವಾಲುಗಳೇನೂ ಕಡಿಮೆ ಇಲ್ಲ. ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಇದನ್ನು ಹೇಗೆ ದಾಟುತ್ತದೋ ಕಾದುನೋಡಬೇಕು.

ಇದನ್ನೂ ಓದಿ: Karnataka Budget 2021: ಕರ್ನಾಟಕ ಬಜೆಟ್ ಇತಿಹಾಸ, 10 ಆಸಕ್ತಿಕರ ಸಂಗತಿ


Follow us on

Related Stories

Most Read Stories

Click on your DTH Provider to Add TV9 Kannada