ರಾಜ್ಯಾದ್ಯಂತ ಇಂದು ‘ಮಾಸ್ಕ್ ಡೇ’ ಆಚರಣೆ, ಪಾದಯಾತ್ರೆ ಮೂಲಕ ಕೊರೊನಾ ಜಾಗೃತಿ
ಬೆಂಗಳೂರು: ಕ್ರೂರಿ ಕೊರೊನಾ ಕರುನಾಡಿನಲ್ಲಿ ಅಬ್ಬರಿಸುತ್ತಿದೆ. ತನ್ನ ಮಾಯಜಾಲದ ಮೂಲಕ ಸಾಮ್ರಾಜ್ಯವನ್ನ ವಿಸ್ತರಿಸಿಕೊಳ್ಳುತ್ತಿದೆ. ಅದರಲ್ಲೂ ರಾಜ್ಯವನ್ನು ಮಹಾನಂಟು ಬಿಟ್ಟು ಬಿಡದೆ ಕಾಡುತ್ತಿದ್ದು, ಸೋಂಕಿತರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ.ಕೊರೊನಾ ಕರ್ನಾಟಕದಲ್ಲಿ ಈ ಮಟ್ಟಿಗೆ ಅಬ್ಬರಿಸುತ್ತಿದ್ದರು ನಮ್ ಜನ ತಲೆಕೆಡಿಸಿಕೊಂಡಿಲ್ಲ. ಮಾಸ್ಕ್‌ಗಳನ್ನ ಹಾಕದೆ ಬೇಕಾ ಬಿಟ್ಟಿ ತಿರುಗಾಡುತ್ತಿದ್ದಾರೆ. ಅದಕ್ಕೆ ಸರ್ಕಾರ ಇವತ್ತು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಪಾದಯಾತ್ರೆ ಮೂಲಕ ಕೊರೊನಾ ಬಗ್ಗೆ ಜಾಗೃತಿ ಕೊರೊನಾ ಕಟ್ಟಿ ಹಾಕೋಕೆ ಮಾಸ್ಕ್ ಬಳಕೆ ಅತೀ ಮುಖ್ಯವಾಗಿದೆ. ಹೀಗಿದ್ದರೂ ಜನರು ಮಾಸ್ಕ್ ಬಳಕೆ ಮಾಡುತ್ತಿಲ್ಲ. […]

ಬೆಂಗಳೂರು: ಕ್ರೂರಿ ಕೊರೊನಾ ಕರುನಾಡಿನಲ್ಲಿ ಅಬ್ಬರಿಸುತ್ತಿದೆ. ತನ್ನ ಮಾಯಜಾಲದ ಮೂಲಕ ಸಾಮ್ರಾಜ್ಯವನ್ನ ವಿಸ್ತರಿಸಿಕೊಳ್ಳುತ್ತಿದೆ. ಅದರಲ್ಲೂ ರಾಜ್ಯವನ್ನು ಮಹಾನಂಟು ಬಿಟ್ಟು ಬಿಡದೆ ಕಾಡುತ್ತಿದ್ದು, ಸೋಂಕಿತರ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ.ಕೊರೊನಾ ಕರ್ನಾಟಕದಲ್ಲಿ ಈ ಮಟ್ಟಿಗೆ ಅಬ್ಬರಿಸುತ್ತಿದ್ದರು ನಮ್ ಜನ ತಲೆಕೆಡಿಸಿಕೊಂಡಿಲ್ಲ. ಮಾಸ್ಕ್‌ಗಳನ್ನ ಹಾಕದೆ ಬೇಕಾ ಬಿಟ್ಟಿ ತಿರುಗಾಡುತ್ತಿದ್ದಾರೆ. ಅದಕ್ಕೆ ಸರ್ಕಾರ ಇವತ್ತು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪಾದಯಾತ್ರೆ ಮೂಲಕ ಕೊರೊನಾ ಬಗ್ಗೆ ಜಾಗೃತಿ ಕೊರೊನಾ ಕಟ್ಟಿ ಹಾಕೋಕೆ ಮಾಸ್ಕ್ ಬಳಕೆ ಅತೀ ಮುಖ್ಯವಾಗಿದೆ. ಹೀಗಿದ್ದರೂ ಜನರು ಮಾಸ್ಕ್ ಬಳಕೆ ಮಾಡುತ್ತಿಲ್ಲ. ಸರ್ಕಾರ ಅರಿವು ಮೂಡಿಸಿದರೂ ಜನರು ಪಾಲನೆ ಮಾಡುತ್ತಿಲ್ಲ. ಈ ಕಾರಣಕ್ಕಾಗಿ ಇಂದು ಮಾಸ್ಕ್ ಡೇ ನಡೆಸುವ ಮೂಲಕ ಮಾಸ್ಕ್ ಬಳಕೆಯ ಅಗತ್ಯತೆ ಕುರಿತಾಗಿ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದೆ. ಜಿಲ್ಲಾ, ತಾಲೂಕು, ಕಾರ್ಪೊರೇಷನ್ ಮಟ್ಟದಲ್ಲಿ ಆಡಳಿತ, ಚುನಾಯಿತ ಪ್ರತಿನಿಧಿಗಳು , ಗಣ್ಯವ್ಯಕ್ತಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿಕೊಂಡು ಪಾದಯಾತ್ರೆ ಮೂಲಕ ಕಾರ್ಯಕ್ರಮ ನಡೆಸಲು ಸೂಚಿಸಲಾಗಿದೆ.
ಇಂದು ‘ಮಾಸ್ಕ್ ಡೇ’ ಮಾಸ್ಕ್ ಡೇ ಪಾದಯಾತ್ರೆಯಲ್ಲಿ 50 ಜನರನ್ನು ಮೀರಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಜನರು ಭಾಗಿಯಾಗಬಾರದು. ಪಾದಯಾತ್ರೆಯಲ್ಲಿ ಭಾಗಿಯಾಗುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಕೊರೊನಾ ನಿಯಂತ್ರಣದ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕು. ಜೊತೆಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಜೊತೆಗೆ ಇದರ ಅಗತ್ಯತೆಯ ಕುರಿತಾಗಿ ಜನರಿಗೆ ಮಾಹಿತಿ ನೀಡಲು ಫಲಕಗಳನ್ನು ಬಳಸಬೇಕು ಎಂದು ಸೂಚಿಸಲಾಗಿದೆ.
ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಹಾಕಿಕೊಳ್ಳಿ, ಸ್ಯಾನಿಟೈಸರ್ ಬಳಸಿ ಅಂತ ಜನರಿಗೆ ಹೇಳಿ ಹೇಳಿ ಸಾಕಾಗಿದೆ. ಆದ್ರೆ ಜನ ಮಾತ್ರ ಇದರ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ. ಹೀಗಾಗಿ ಇವತ್ತು ಸರ್ಕಾರ ಮಾಸ್ಕ್‌ಡೇ ಅಂತ ಆಚರಿಸಿ ಜನರಲ್ಲಿ ಮತ್ತಷ್ಟು ಅರಿವು ಮೂಡಿಸಲು ಮುಂದಾಗಿದೆ. ಆದ್ರೆ ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.
Published On - 6:49 am, Thu, 18 June 20




