‘ಬಾಂಬೆ ಬೇಗಮ್ಸ್’ ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕನ್ನಡತಿ!

‘ಬಾಂಬೆ ಬೇಗಮ್ಸ್' ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕನ್ನಡತಿ!
ಐವರು 'ಬೇಗಮ್ಸ್'ಗಳ ಪೈಕಿ ಕನ್ನಡತಿ ಆಧ್ಯಾ ಆನಂದ್ ಕೂಡ ಒಬ್ಬರಾಗಿದ್ದಾರೆ ಎಂಬುದು ವಿಶೇಷ.

ಸಿಂಗಾಪುರ್‌ನಲ್ಲಿನ ಹಲವು ಜಾಹೀರಾತು, ಚಲನಚಿತ್ರ, ಕಿರುಚಿತ್ರ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದ ಉತ್ತರ ಕನ್ನಡ ಮೂಲದ ಆಧ್ಯಾ ಆನಂದ್, ಬಾಲಿವುಡ್ ನಿರ್ದೇಶಕಿ ಅಲಂಕೃತ ಶ್ರೀವಾಸ್ತವ ಅವರ ನಿರ್ಮಾಣ, ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ‘ಬಾಂಬೆ ಬೇಗಮ್ಸ್' ಸರಣಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

guruganesh bhat

|

Feb 20, 2021 | 12:33 PM

ಕಾರವಾರ: ಮಾರ್ಚ್ 8ರ ಮಹಿಳಾ ದಿನದಂದು ನೆಟ್‌ಫ್ಲಿಕ್ಸ್ ನಲ್ಲಿ (Netflix) ಬಿಡುಗಡೆಗೊಳ್ಳಲಿರುವ ‘ಬಾಂಬೆ ಬೇಗಮ್ಸ್’ ಸರಣಿಯಲ್ಲಿ ಕನ್ನಡತಿಯೊಬ್ಬರು ಕಾಣಿಸಿಕೊಂಡಿದ್ದಾರೆ.  ‘ಬಾಂಬೆ ಬೇಗಮ್ಸ್’ನ (Bombay Begums) ಟ್ರೇಲರ್ ಬಿಡುಗಡೆಗೊಂಡಿದ್ದು,‘ಶಾಯ್ ಇರಾನಿ’ಯಾಗಿ ಉತ್ತರ ಕನ್ನಡ ಮೂಲದ ಆಧ್ಯಾ ಅನಂದ್ ನಟಿಸಿದ್ದಾರೆ. ಸಿಂಗಾಪುರ್‌ನಲ್ಲಿನ ಹಲವು ಜಾಹೀರಾತು, ಚಲನಚಿತ್ರ, ಕಿರುಚಿತ್ರ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದ ಉತ್ತರ ಕನ್ನಡ ಮೂಲದ ಆಧ್ಯಾ ಆನಂದ್, ಬಾಲಿವುಡ್ ನಿರ್ದೇಶಕಿ ಅಲಂಕೃತ ಶ್ರೀವಾಸ್ತವ ಅವರ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ‘ಬಾಂಬೆ ಬೇಗಮ್ಸ್’ ಸರಣಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆಧುನಿಕ ಮುಂಬೈನ ಐವರು ವಿವಿಧ ಕ್ಷೇತ್ರದ ಮಹಿಳೆಯರ ಸುತ್ತ ಹೆಣೆದುಕೊಂಡಿರುವ ‘ಬಾಂಬೆ ಬೇಗಮ್ಸ್’ನಲ್ಲಿ ಪೂಜಾ ಭಟ್, ಶಹಾನಾ ಗೋಸ್ವಾಮಿ, ಅಮೃತಾ ಸುಭಾಷ್, ಪ್ಲಬಿತಾ ಬೋರ್‌ಠಾಕೂರ್ ಸೇರಿದಂತೆ ಐವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಐವರು ‘ಬೇಗಮ್ಸ್’ಗಳ ಪೈಕಿ ಕನ್ನಡತಿ ಆಧ್ಯಾ ಆನಂದ್ ಕೂಡ ಒಬ್ಬರಾಗಿದ್ದಾರೆ ಎಂಬುದು ವಿಶೇಷ.

ಸಿಂಗಾಪುರ್ ನಲ್ಲಿ ನೆಲೆಸಿರುವ ಉತ್ತರ ಕನ್ನಡ ಮೂಲದ ಪ್ರಿಯಾ ನಾಯಕ ಹಾಗೂ ಆನಂದ್ ನಾಯಕ ಅವರ ಪುತ್ರಿಯಾಗಿರುವ ಆಧ್ಯಾ ಹುಟ್ಟಿದ್ದು ಮಡಿಕೇರಿಯಲ್ಲಾದರೂ ಬೆಳೆದಿದ್ದು ಸಿಂಗಾಪುರ್‌ನಲ್ಲಿ. ತಮ್ಮ 7ನೇ ವಯಸ್ಸಿನಲ್ಲೇ ಆ್ಯಕ್ಟಿಂಗ್, ಮಾಡೆಲಿಂಗ್, ಡ್ಯಾನ್ಸಿಂಗ್ ಹಾಗೂ ಬ್ಯಾಡ್ಮಿಂಟನ್‌ನಲ್ಲಿ ಆಸಕ್ತಿ ತೋರಿದ ಈಕೆ, ಸಿಂಗಾಪುರ್ ನಲ್ಲಿ ರಂಗಭೂಮಿ ತರಬೇತಿ ಹಾಗೂ ಬಾಲಿವುಡ್ ನ ಅನುಪಮ್ ಖೇರ್ ಮತ್ತು ಅತುಲ್ ಮೊಂಗಿಯಾ ಅವರ ಇನ್ ಸ್ಟಿಟ್ಯೂಟ್ ನಲ್ಲೂ ತರಬೇತಿ ಪಡೆದಿದ್ದಾರೆ. ಪ್ರತಿಷ್ಠಿತ ಕೇನ್ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್- 2017ರಲ್ಲಿ ಪ್ರದರ್ಶನ ಕಂಡಿದ್ದ ‘ಎ ಯೆಲ್ಲೋ ಬರ್ಡ್’ ಸಿನೇಮಾ, ‘ಒನ್ ಅವರ್ ಟು ಡೇಲೈಟ್’, ‘ಸ್ಕೈಸಿಟಿ’ಯಂಥ ಕಿರುಚಿತ್ರಗಳಲ್ಲಿ ಕೂಡ ನಟಿಸಿದ್ದರು.

ADHYA ANAND PHOTOSHOOT

ಫೋಟೋಶೂಟ್ ಒಂದರಲ್ಲಿ ಆಧ್ಯಾ ಆನಂದ್

ಸೋನಿ ಟಿವಿಯ ಸೂಪರ್ ಡ್ಯಾನ್ಸ್ ಸಿಂಗಾಪುರ್‌ನ ವಿಜೇತೆಯಾಗಿರುವ ಆದ್ಯಾ ಆನಂದ್, ಸಿಂಗಾಪುರ್‌ನಲ್ಲಿ ವ್ಹೂಪೀಸ್ ವರ್ಲ್ಡ್, ಲಯನ್ ಮಮ್ಸ್ ಸರಣಿಗಳಲ್ಲಿ ‘ವರ್ಲ್ಡ್ ವಿಜ್ಜ್ ಸ್ಲೈಮ್ ಪಿಟ್’, ‘ಮೆನಂತು ಇಂಟರ್ನ್ಯಾಷನಲ್’ 2 ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಕಿರುತೆರೆ ಧಾರಾವಾಹಿಗಳಲ್ಲೂ ನಟಿಸಿದ್ದಾಳೆ. ಈಕೆ ಝೀ ಟಿವಿಯ ಪ್ರಪ್ರಥಮ ಜೂನಿಯರ್ ನಿರೂಪಕಿಯಾಗಿ ನಡೆಸಿಕೊಟ್ಟಿದ್ದ ‘ಬ್ರೈನ್ ಬೂಸ್ಟರ್ಸ್’ ಕಾರ್ಯಕ್ರಮವು 18 ದೇಶಗಳಲ್ಲಿ ಎರಡು ಸೀಸನ್‌ಗಳಲ್ಲಿ ಪ್ರಸಾರ ಕಂಡಿತ್ತು.

ಕನ್ನಡದಲ್ಲೂ ನಟಿಸುವ ಅಭಿಲಾಷೆ

ನಟನೆ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗೆ ಈಕೆಗೆ ಸಿಂಗಾಪುರ್‌ನ ಸಿಂಗ್ಟೆಲ್‌ನಿಂದ 2018ರಲ್ಲಿ ಯುವ ಸಾಧಕಿ ಪ್ರಶಸ್ತಿ, ಸಿಂಗಾಪುರ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಹಬ್ಬದಲ್ಲಿ ಸಿಂಗಾರ ಪುರಸ್ಕಾರಕ್ಕೆ 2016ರಲ್ಲೇ ಈಕೆ ಭಾಜನಳಾಗಿದ್ದಾಳೆ. ಅಲ್ಲದೇ, ಸಿಂಗಾಪುರದಲ್ಲಿ ನಡೆದ ಅತಿ ಹೆಚ್ಚು ‘ಮಾಡೆಲ್ಸ್ ವಾಕಿಂಗ್ ರನ್ ವೇ’ನಲ್ಲಿ ಭಾಗವಹಿಸಿದ್ದಕ್ಕಾಗಿ ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ಮತ್ತು ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್’ ಅನ್ನು ಕೂಡ ಹೊಂದಿದ್ದಾರೆ.

ಸುಮಾರು 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ‘ಬಾಂಬೆ ಬೇಗಮ್ಸ್’ ಆಡಿಷನ್‌ನಲ್ಲಿ ಕೊನೆಗೂ ಆಯ್ಕೆಗೊಂಡು ಅವಕಾಶ ಪಡೆದುಕೊಂಡಿರುವ ಕನ್ನಡತಿ ಆಧ್ಯಾ ಕನ್ನಡ ಚಿತ್ರಗಳಲ್ಲೂ ನಟಿಸುವ ಅಭಿಲಾಶೆ ಹೊಂದಿದ್ದಾರೆ.

ಇದನ್ನೂ ಓದಿ: Valentine’s Day 2021 | ಪ್ರೇಮಿಗಳ ದಿನ 2021; ಪ್ರೇಮದ ಪಾತ್ರ ಮಾಡುತ್ತಲೇ ಸಪ್ತಪದಿ ತುಳಿದ ಸ್ಯಾಂಡಲ್​ವುಡ್​ ಜೋಡಿಗಳು..

ಇದನ್ನೂ ಓದಿ: ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೂ ರಶ್ಮಿಕಾ ಹವಾ.. ಬಿಟೌನ್ ನಲ್ಲೂ ಕ್ರೇಜ್ ಹುಟ್ಟಿಸಿದ ಕನ್ನಡತಿ

Follow us on

Related Stories

Most Read Stories

Click on your DTH Provider to Add TV9 Kannada