ಕೋತಿಗೂ ಗೊತ್ತು ಸೆಲ್ಫಿಯ ಗಮ್ಮತ್ತು!!

ಕೋತಿಗೂ ಗೊತ್ತು ಸೆಲ್ಫಿಯ ಗಮ್ಮತ್ತು!!

ಕೇವಲ ಮಾನವರಿಗಷ್ಟೇ ತಮ್ಮ ತಮ್ಮ ಮೊಬೈಲ್​ಗಳಲ್ಲಿ ಸೆಲ್ಫಿಗಳನ್ನು ತೆಗೆದುಕೊಳ್ಳುವ ಹುಚ್ಚಿರುತ್ತದೆ ಅಂತ ನೀವು ಭಾವಿಸಿದ್ದರೆ ನಿಮ್ಮ ಎಣಿಕೆ ಸರ್ವಥಾ ತಪ್ಪು. ಯಾಕೆಂದರೆ ನಮ್ಮ ಪೂರ್ವಜರೆಂದು ಗುರುತಿಸಿಕೊಂಡಿರುವ ಮಂಗಗಳಿಗೂ ಅಂಥ ಕ್ರೇಜ್ ಇದೆ. ಇದೇನು ತಮಾಶೆ ಅಂತೀರಾ? ಆದರಿದು ಅಕ್ಷರಶಃ ನಿಜ ಮಾರಾಯ್ರೇ. ಮೊನ್ನೆ ಮಲೇಷ್ಯಾದಲ್ಲಿ ಏನಾಗಿದೆ ಗೊತ್ತಾ? ಒಬ್ಬ ವ್ಯಕ್ತಿ ಮಲಗಿದ್ದಾಗ ಅವನ ಪಕ್ಕದಲ್ಲೇ ಮಿರಮಿರನೆ ಮಿಂಚುತ್ತಿದ್ದ ಮೊಬೈಲ್ ಫೋನನ್ನು ಮಂಗವೊಂದು ಅವನು ಮಲಗಿದ್ದ ಕೋಣೆಯ ಕಿಟಕಿಯ ಮೂಲಕ ನೋಡಿದೆ. ಕಿಟಕಿಯಿಂದ ಕೈ ಹಾಕಿ ಅದನ್ನೆತ್ತಿಕೊಂಡು ಮರ […]

Arun Belly

|

Sep 17, 2020 | 8:07 PM

ಕೇವಲ ಮಾನವರಿಗಷ್ಟೇ ತಮ್ಮ ತಮ್ಮ ಮೊಬೈಲ್​ಗಳಲ್ಲಿ ಸೆಲ್ಫಿಗಳನ್ನು ತೆಗೆದುಕೊಳ್ಳುವ ಹುಚ್ಚಿರುತ್ತದೆ ಅಂತ ನೀವು ಭಾವಿಸಿದ್ದರೆ ನಿಮ್ಮ ಎಣಿಕೆ ಸರ್ವಥಾ ತಪ್ಪು. ಯಾಕೆಂದರೆ ನಮ್ಮ ಪೂರ್ವಜರೆಂದು ಗುರುತಿಸಿಕೊಂಡಿರುವ ಮಂಗಗಳಿಗೂ ಅಂಥ ಕ್ರೇಜ್ ಇದೆ. ಇದೇನು ತಮಾಶೆ ಅಂತೀರಾ? ಆದರಿದು ಅಕ್ಷರಶಃ ನಿಜ ಮಾರಾಯ್ರೇ.

ಮೊನ್ನೆ ಮಲೇಷ್ಯಾದಲ್ಲಿ ಏನಾಗಿದೆ ಗೊತ್ತಾ? ಒಬ್ಬ ವ್ಯಕ್ತಿ ಮಲಗಿದ್ದಾಗ ಅವನ ಪಕ್ಕದಲ್ಲೇ ಮಿರಮಿರನೆ ಮಿಂಚುತ್ತಿದ್ದ ಮೊಬೈಲ್ ಫೋನನ್ನು ಮಂಗವೊಂದು ಅವನು ಮಲಗಿದ್ದ ಕೋಣೆಯ ಕಿಟಕಿಯ ಮೂಲಕ ನೋಡಿದೆ. ಕಿಟಕಿಯಿಂದ ಕೈ ಹಾಕಿ ಅದನ್ನೆತ್ತಿಕೊಂಡು ಮರ ಹತ್ತಿದೆ. ಮರದ ಮೇಲೆ ಕೂತು ಫೋನಿನ ಫೀಚರ್​ಗಳನ್ನು ಗಮನಿಸುವಾಗ ಅದರ ಕೆಮೆರಾ ಆನ್ ಆಗಿ, ಮಂಗನ ಇಮೇಜುಗಳು ಕ್ಲಿಕ್ಕಾಗಿವೆ ಮತ್ತು ವಿಡಿಯೊ ಕೂಡ ರೆಕಾರ್ಡ್ ಆಗಿದೆ. ಇಷ್ಟೆಲ್ಲಾ ಆದಮೇಲೆ ಅದು ತಿನ್ನಲಾಗದ ವಸ್ತು ಅಂತ ಮಂಗನಿಗೆ ಮನವರಿಕೆಯಾಗಿ ಅದನ್ನು ಕೆಳಕ್ಕೆ ಬಿಸಾಡಿದೆ. 

ನಿದ್ರೆಯಿಂದ ಎದ್ದ ನಂತರ ಆ ವ್ಯಕ್ತಿ ಫೋನಿಗಾಗಿ ಹುಡುಕಾಡಿದಾಗ ಅದು ಅವನ ಮನೆ ಹಿತ್ತಲಿನ ಮರದ ಕೆಳಗೆ ಅದು ದೊರೆತಿದೆ. ಸದ್ಯ ಸಿಕ್ಕಿತಲ್ಲ ಅಂತ ಅವನು ಮನಗೆ ತಂದು ನೋಡಿದಾದ ಅದರಲ್ಲಿ ಬರೀ ಮಂಗ ಚೇಷ್ಟೆಗಳು!

Follow us on

Related Stories

Most Read Stories

Click on your DTH Provider to Add TV9 Kannada