ದಸರಾ ಶಾಪಿಂಗ್ಗೆ ಅಂತಾ ಮಾರ್ಕೆಟ್ಗೆ ಹೋಗಿದ್ರಾ? ಹಬ್ಬದ ಖರೀದಿಗೆ ಹೋದವರಿಗೆ ಬಿಗ್ ಶಾಕ್ ?
ಬೆಂಗಳೂರು: ಆಯುಧ ಪೂಜೆ, ವಿಜಯದಶಮಿ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ಮಾರುಕಟ್ಟೆಗಳು ಜನರಿಂದ ತುಂಬಿ ಹೋಗಿದ್ದವು. ಜನ ಕೊರೊನಾವನ್ನು ಮರೆತು ಹೂವು, ಹಣ್ಣು ಖರೀದಿಗೆ ಮುಂದಾಗಿದ್ದರು. ಆದರೆ ಅಂದು ಮಾಡಿದ ಕೇರ್ ಲೆಸ್ಗೆ ಇಂದು ಕೊರೊನಾ ಬಿಗ್ ಗಿಫ್ಟ್ ಕೊಡಲಿದೆ. ಅಕ್ಟೋಬರ್ 23 ಮತ್ತು 24ರಂದು ಕೆ.ಆರ್ ಮಾರ್ಕೆಟ್, ಮಲ್ಲೇಶ್ವರಂ ಹೂವಿನ ಮಾರ್ಕೆಟ್ಗೆ ಬಂದು ಹೋದವರಿಗೆ ಕೋವಿಡ್ ತಗುಲಿರುವ ಸಾಧ್ಯತೆ ಹೆಚ್ಚಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು ಖರೀದಿಗಾಗಿ ಜನ ಮುಗಿಬಿದ್ದಿದ್ದರು. ಮಾಸ್ಕ್ ಹಾಕದೆ, ಸಾಮಾಜಿಕ ಅಂತರ […]

ಬೆಂಗಳೂರು: ಆಯುಧ ಪೂಜೆ, ವಿಜಯದಶಮಿ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ಮಾರುಕಟ್ಟೆಗಳು ಜನರಿಂದ ತುಂಬಿ ಹೋಗಿದ್ದವು. ಜನ ಕೊರೊನಾವನ್ನು ಮರೆತು ಹೂವು, ಹಣ್ಣು ಖರೀದಿಗೆ ಮುಂದಾಗಿದ್ದರು. ಆದರೆ ಅಂದು ಮಾಡಿದ ಕೇರ್ ಲೆಸ್ಗೆ ಇಂದು ಕೊರೊನಾ ಬಿಗ್ ಗಿಫ್ಟ್ ಕೊಡಲಿದೆ.
ಅಕ್ಟೋಬರ್ 23 ಮತ್ತು 24ರಂದು ಕೆ.ಆರ್ ಮಾರ್ಕೆಟ್, ಮಲ್ಲೇಶ್ವರಂ ಹೂವಿನ ಮಾರ್ಕೆಟ್ಗೆ ಬಂದು ಹೋದವರಿಗೆ ಕೋವಿಡ್ ತಗುಲಿರುವ ಸಾಧ್ಯತೆ ಹೆಚ್ಚಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು ಖರೀದಿಗಾಗಿ ಜನ ಮುಗಿಬಿದ್ದಿದ್ದರು. ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾರುಕಟ್ಟೆಗಳು ಫುಲ್ ಆಗಿದ್ದವು, ಭರ್ಜರಿ ವ್ಯಾಪಾರವಾಗಿತ್ತು. ಈ ವೇಳೆ ಟಿವಿ9 ಸುದ್ದಿ ಪ್ರಸಾರ ಮಾಡಿ ಕೊರೊನಾ ತಗುಲುವ ಬಗ್ಗೆ ಎಚ್ಚರಿಸಿತ್ತು.
ಅಕ್ಟೋಬರ್ 23ರಂದು ಮಾರ್ಕೆಟ್ಗೆ ಬಂದು ಹೋಗಿದ್ದ 53 ವರ್ಷದ ಓರ್ವ ವ್ಯಕ್ತಿಗೆ ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಕೋವಿಡ್ ಟೆಸ್ಟ್ ಮಾಡಿಸಿದ್ದಾಗ ಸೋಂಕು ಇರುವುದು ದೃಢಪಟ್ಟಿದೆ. ಮಾರ್ಕೆಟ್ನಲ್ಲಿ ಸೋಂಕಿತರು ಸಂಪರ್ಕಕ್ಕೆ ಬಂದಿರುವ ಅನುಮಾನ ಇದೆ ಎಂದಿದ್ದಾರೆ.
ಜೊತೆಗೆ ಅಕ್ಟೋಬರ್ 25 ರಂದು ಕೂಡ ಕೆ.ಆರ್ ಮಾರ್ಕೆಟ್, ಯಶವಂತಪುರ, ಮಲ್ಲೇಶ್ವರಂ, ಸಾರಕಿ ಮಾರ್ಕೆಟ್ಗಳು ತುಂಬಿ ಹೋಗಿದ್ದವು. ಸದ್ಯ ಈಗ ಒಬ್ಬ ವ್ಯಕ್ತಿ ಸೋಂಕು ತಗುಲಿರುವುದ ತಿಳಿದು ಬಂದಿದೆ. ಆದರೆ ಮುಂದಿನ ಮೂರು ದಿನದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ದಸರಾ ವೇಳೆ ಕೊರೊನಾ ಬಗ್ಗೆ ಕೇರ್ ಮಾಡದವರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಇದನ್ನೂ ಓದಿ: ಹಬ್ಬದ ಸಂಭ್ರಮದಲ್ಲಿ ಅಪಾಯವನ್ನೇ ಮರೆತ ಜನ, ಕೆ.ಆರ್.ಮಾರ್ಕೆಟ್ನಲ್ಲಿ ಜನ ಸಂದಣಿ
Published On - 8:16 am, Tue, 27 October 20
