ಕದ್ದ ಹಣ ಹಂಚಿಕೊಳ್ಳುವಾಗ ಗಲಾಟೆ: ಕಳ್ಳನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಕಿರಾತಕರು

  • Publish Date - 9:05 am, Wed, 2 September 20
ಕದ್ದ ಹಣ ಹಂಚಿಕೊಳ್ಳುವಾಗ ಗಲಾಟೆ: ಕಳ್ಳನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಕಿರಾತಕರು

ಮೈಸೂರು: ಕದ್ದ ಹಣವನ್ನು ಹಂಚಿಕೊಳ್ಳುವ ವೇಳೆ ಕಳ್ಳರ ನಡುವೆ ಜಗಳವಾಗಿ ಕಳ್ಳನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ನಡೆದಿದೆ. ರಾಚಪ್ಪ(28) ಕೊಲೆಯಾದ ಕಳ್ಳ.

ಹಣ ಹಂಚಿಕೆ ವೇಳೆ ಗಲಾಟೆ ಮಾಡಿಕೊಂಡು ಕಳ್ಳ ಮುನಿಯಪ್ಪ ಹಾಗೂ ರಾಜು ಸೇರಿ ರಾಚಪ್ಪನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ಮುನಿಯಪ್ಪ ತಲೆಮರೆಸಿಕೊಂಡಿದ್ದಾನೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿರಿಯಾಪಟ್ಟಣ ತಾಲೂಕು ನುಗ್ಗೇಹಳ್ಳಿ ಗ್ರಾಮದ ನಿವಾಸಿ ಮೃತ ರಾಚಪ್ಪ ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದ. 3 ವರ್ಷಗಳ ಹಿಂದೆ ಮನೆ ಬಿಟ್ಟು ಕಳ್ಳರ ಜೊತೆ ಸೇರಿದ್ದ. ಆಗಸ್ಟ್ 28 ರಂದು ರಾಚಪ್ಪ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆ ಮಾಡಿ ರಾಚಪ್ಪನ ಶವಕ್ಕೆ ಬೆಂಕಿ ಹಚ್ಚಲಾಗಿದೆ.

Click on your DTH Provider to Add TV9 Kannada