ಮಕ್ಕಳನ್ನ ಬಳಸಿ ಮೊಬೈಲ್ ಕಳ್ಳತನ: Red Hand ಆಗಿ ಸಿಕ್ಕಿಬಿದ್ದ ಆಂಧ್ರ ಗ್ಯಾಂಗ್

  • Updated On - 10:58 am, Fri, 11 September 20
ಮಕ್ಕಳನ್ನ ಬಳಸಿ ಮೊಬೈಲ್ ಕಳ್ಳತನ: Red Hand ಆಗಿ ಸಿಕ್ಕಿಬಿದ್ದ ಆಂಧ್ರ ಗ್ಯಾಂಗ್

ಗದಗ: ಜಿಲ್ಲೆಯಲ್ಲಿ ಮೊಬೈಲ್ ಕಳ್ಳರ ಹಾವಳಿಗೆ ಸ್ಥಳೀಯರು ಕಂಗಾಲಾಗಿದ್ದಾರೆ. ಈ ನಡುವೆ ಮೊಬೈಲ್ ಕಳ್ಳತನ ಮಾಡಲು ಬಂದಿದ್ದ ಖದೀಮರನ್ನ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ರೋಣ ತಾಲೂಕಿನಲ್ಲಿ ಠಿಕಾಣಿ ಹೂಡಿರುವ ಆಂಧ್ರಪ್ರದೇಶ‌ ಮೂಲದ ಗ್ಯಾಂಗ್ ಒಂದು ಮಕ್ಕಳ ಮೂಲಕ ಮೊಬೈಲ್ ಕಳ್ಳತನ ಮಾಡಿಸುತ್ತಿರೋ ಮಾಹಿತಿ ದೊರೆತಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರೂ ಡೋಂಟ್​ ಕೇರ್​ ಅಂತೆ. ರೋಣ ಮತ್ತು ನರೇಗಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೂ ಖದೀಮರನ್ನು ಬಂಧಿಸುತ್ತಿಲ್ಲ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ. ಜೊತೆಗೆ, ಪೊಲೀಸರ ನಡೆಯ ಬಗ್ಗೆ ಅನುಮಾನ ಸಹ ವ್ಯಕ್ತಪಡಿಸಿದ್ದಾರೆ.

Click on your DTH Provider to Add TV9 Kannada