ಮಗನ ಮಾನಸಿಕ ಕಾಯಿಲೆಯಿಂದ ನೊಂದು ಹೋಗಿದ್ದ ತಾಯಿ ಮಾಡಿದ್ದೇನು ಗೊತ್ತಾ?

ಚಿಕ್ಕಬಳ್ಳಾಪುರ:ಮಗನ ಮಾನಸಿಕ ಕಾಯಿಲೆ ಗುಣಮುಖವಾಗದ ಹಿನ್ನೆಲೆಯಿಂದಾಗಿ ಮಗನನ್ನು ನೀರಿನ ಸಂಪಿಗೆ ಹಾಕಿ, ತಾಯಿ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ಹೊರವಲಯದ ಗ್ರಾಮ ಕೊತ್ತಪಲ್ಲಿಯಲ್ಲಿ ಈ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ವಿಶಾಲ್ (7) ಮತ್ತು ಶೋಭಾರಾಣಿ (29)ಮೃತ ದುರ್ದೈವಿಗಳು ಎನ್ನಲಾಗಿದೆ. ಶೋಭಾರಾಣಿಯ ಮಗ ವಿಶಾಲ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಮಗನ ಈ ಕಾಯಿಲೆಯಿಂದ ನೊಂದು ಹೋಗಿದ್ದ ತಾಯಿ, ಮೊದಲು ಮಗನನ್ನು ನೀರಿನ ಸಂಪಿಗೆ ಹಾಕಿ ಸಾಯಿಸಿ, ತದನಂತರ ತಾನೂ ಸಹ ನೇಣು […]

ಮಗನ ಮಾನಸಿಕ ಕಾಯಿಲೆಯಿಂದ ನೊಂದು ಹೋಗಿದ್ದ ತಾಯಿ ಮಾಡಿದ್ದೇನು ಗೊತ್ತಾ?

Updated on: Aug 18, 2020 | 3:56 PM

ಚಿಕ್ಕಬಳ್ಳಾಪುರ:ಮಗನ ಮಾನಸಿಕ ಕಾಯಿಲೆ ಗುಣಮುಖವಾಗದ ಹಿನ್ನೆಲೆಯಿಂದಾಗಿ ಮಗನನ್ನು ನೀರಿನ ಸಂಪಿಗೆ ಹಾಕಿ, ತಾಯಿ ನೇಣಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ಹೊರವಲಯದ ಗ್ರಾಮ ಕೊತ್ತಪಲ್ಲಿಯಲ್ಲಿ ಈ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ವಿಶಾಲ್ (7) ಮತ್ತು ಶೋಭಾರಾಣಿ (29)ಮೃತ ದುರ್ದೈವಿಗಳು ಎನ್ನಲಾಗಿದೆ. ಶೋಭಾರಾಣಿಯ ಮಗ ವಿಶಾಲ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

ಮಗನ ಈ ಕಾಯಿಲೆಯಿಂದ ನೊಂದು ಹೋಗಿದ್ದ ತಾಯಿ, ಮೊದಲು ಮಗನನ್ನು ನೀರಿನ ಸಂಪಿಗೆ ಹಾಕಿ ಸಾಯಿಸಿ, ತದನಂತರ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.