ಖುದ್ದು ಸ್ನೇಹಿತರಿಗೆ ಹೇರ್ ಕಟ್​ ಮಾಡಿ ಕೃತಾರ್ಥನಾದ ಬಾಲಕ, ಕ್ಯಾಮೆರಾದಲ್ಲಿ ಸೆರೆ!

ಖುದ್ದು ಸ್ನೇಹಿತರಿಗೆ ಹೇರ್ ಕಟ್​ ಮಾಡಿ ಕೃತಾರ್ಥನಾದ ಬಾಲಕ, ಕ್ಯಾಮೆರಾದಲ್ಲಿ ಸೆರೆ!

ಮೈಸೂರು: ಇದು ಬರೀ ಮೈಸೂರು ಅಂತಲ್ಲ, ಕೊರೊನಾ ಸುಂಟರಗಾಳಿಗೆ ಸಿಲುಕಿ ಪತರಗುಟ್ರುಟಿರುವ ಜಗತ್ತಿನ ಬಹುತೇಕ ಎಲ್ಲ ಕಡೆಯೂ ಇದು ಕಂಡುಬಂದಿದೆ. ನಮ್ಮದೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಏನಾಗಿದೆಯೆಂದು ನೋಡಿದಾಗ ಲಾಕ್ ಡೌನ್ ಎಫೆಕ್ಟ್​ನಿಂಧಾಗಿ ಕಳೆದ 37 ದಿನಗಳಿಂದ ಬಾರ್ಬರ್ ಶಾಪ್​ಗಳು ಬಂದ್ ಆಗಿವೆ. ಬಾಗಿಲು ತೆರೆಯದ ಬಾರ್ಬರ್ ಶಾಪ್ ಗೆ ಪರ್ಯಾಯವಾಗಿ ಪುಟಾಣಿ ಮಕ್ಕಳಿಂದಲೇ ಕಟಿಂಗ್, ಶೇವಿಂಗ್ ನಡೆದಿದೆ.

ಹೌದು ಈ ಬಾರಿಯ ಬೇಸಿಗೆ ರಜೆಯಲ್ಲಿ ಶಾಲಾ ಮಕ್ಕಳಿಗೆ ಇದೇ ಪಠ್ಯೇತರ ಚಟುವಟಿಕೆಯಾಗಿ ಮಾರ್ಪಟ್ಟಿದೆ. ಮೈಸೂರಿನಲ್ಲಿ ಮಕ್ಕಳು ಹೊಸ ಪ್ರಯತ್ನಕ್ಕೆ ಕೈಹಾಕಿದ್ದು ಲಾಕ್ ಡೌನ್ ಬೆಂಬಲಿಸಿ ಮನೆಯಲ್ಲಿಯೇ ಸೆಲ್ಫ್ ಕಟಿಂಗ್​ಗೆ ಕೈಹಾಕಿದ್ದಾರೆ. ತಮ್ಮ ತಮ್ಮ ಸ್ನೇಹಿತರಿಗೆ ಮುದ್ದು ಮಕ್ಕಳು ಖುದ್ದು ಕಟ್ಟಿಂಗ್ ಮಾಡಿ, ಕೃತಾರ್ಥರಾಗಿದ್ದಾರೆ!

ಮಕ್ಕಳ ಈ ಪ್ರಯತ್ನ ಮೊಬೈಲ್ ಕ್ಯಾಮೆರಾದಲ್ಲಿ ದಾಖಲಾರ್ಹವಾಗಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಟ್ರೆಂಡ್ ಆಗುತ್ತಿದೆ ಈ ಸೆಲ್ಫ್ ಕಟಿಂಗ್. ಶಾರದಾ ದೇವಿ ನಗರದ ನಿವಾಸಿ ಕೆ.ಎಸ್. ಶಿವರಾಂ ಪುತ್ರ ಪ್ರಣವ್ ಈ ಪ್ರಯತ್ನಕ್ಕೆ ಕೈಹಾಕಿದಾತ.

Published On - 10:54 am, Wed, 29 April 20

Click on your DTH Provider to Add TV9 Kannada