Love Story ಹೇಳೋಕೆ ಬಂದ್ರು ನಾಗ ಚೈತನ್ಯ-ಸಾಯಿ ಪಲ್ಲವಿ!
ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಒಟ್ಟಾಗಿ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಲವ್ ಸ್ಟೋರಿ ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ಟೀಸರ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಟ್ರೆಂಡಿಂಗ್ನಲ್ಲಿ ಮೂರನೇ ಸ್ಥಾನದಲ್ಲಿದೆ.
ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಈಗ ಒಟ್ಟಾಗಿ ಲವ್ ಸ್ಟೋರಿ ಹೇಳೋಕೆ ಮುಂದೆ ಬಂದಿದ್ದಾರೆ! ತಮ್ಮ ಪ್ರೇಮ ಕಹಾನಿ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಹಾಗಾಂತ ಇದು ನಿಜ ಜೀವನದ ವಿಚಾರವಲ್ಲ! ಇದು ತೆರೆ ಮೇಲಿನ ಕತೆ.
ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಒಟ್ಟಾಗಿ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ‘ಲವ್ ಸ್ಟೋರಿ’ ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ಟೀಸರ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಟ್ರೆಂಡಿಂಗ್ನಲ್ಲಿ ಮೂರನೇ ಸ್ಥಾನದಲ್ಲಿದೆ.
ರೇವಂತ್ ಹೆಸರಿನ ಪಾತ್ರದಲ್ಲಿ ನಾಗ ಚೈತನ್ಯ ಕಾಣಿಸಿಕೊಂಡರೆ, ಮೌನಿಕಾ ಪಾತ್ರಕ್ಕೆ ಸಾಯಿ ಪಲ್ಲವಿ ಜೀವ ತುಂಬಿದ್ದಾರೆ. ಲವ್ ಸ್ಟೋರಿ ಹೇಗಿರಲಿದೆ ಎನ್ನುವ ಚಿಕ್ಕ ಗುಟ್ಟನ್ನು ನಿರ್ದೇಶಕ ಶೇಖರ್ ಕಮ್ಮುಲ ಬಿಟ್ಟುಕೊಟ್ಟಿದ್ದಾರೆ. ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ರೇವಂತ್ ಹಾಗೂ ಮೌನಿಕಾ ನಗರಕ್ಕೆ ಬರುತ್ತಾರೆ. ರೇವಂತ್ ಟೆರೇಸ್ ಮೇಲೆ ಜಿಮ್ ನಡೆಸಿದರೆ, ಮೌನಿಕಾ ಸಾಫ್ಟ್ವೇರ್ ಕೆಲಸಕ್ಕಾಗಿ ಕಂಪೆನಿಯಿಂದ ಕಂಪೆನಿಗೆ ಅಲೆಯುತ್ತಿರುತ್ತಾಳೆ. ಇಬ್ಬರ ನಡುವೆ ಪ್ರೀತಿ ಮೂಡುತ್ತದೆ. ಇದು ಚಿತ್ರದ ಒಂದೆಳೆ ಅನ್ನೋದು ಟೀಸರ್ನಲ್ಲಿ ಗೊತ್ತಾಗುತ್ತದೆ.
ಮೌನಿಕಾಗೆ ಐಟಿ ಕೆಲಸಕ್ಕಿಂತ ನೃತ್ಯದ ಮೇಲೆ ಹೆಚ್ಚು ಆಸಕ್ತಿ ಎಂಬುದನ್ನು ನಿರ್ದೇಶಕರು ಸೂಕ್ಷ್ಮವಾಗಿ ಟೀಸರ್ನಲ್ಲಿ ಹೇಳಿದ್ದಾರೆ. ನಾಗ ಚೈತನ್ಯ ನಟನೆಯ ಮಜಲಿ ಸಿನಿಮಾ ತುಂಬಾನೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅದರಲ್ಲಿದ್ದ ಪ್ರೀತಿ ಕತೆಯೇ ಸಿನಿಮಾ ಯಶಸ್ಸಿಗೆ ಕಾರಣವಾಗಿತ್ತು. ಈಗ ಅಂತಹುದೇ ಎಳೆ ಹಿಡಿದು ಅವರು ತೆರೆಮೇಲೆ ಬರುತ್ತಿರುವುದಕ್ಕೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.