ಇಲ್ಲೇ ಬಾಳಿನಿ, ಇಲ್ಲೇ ಇರ್ತಿನಿ.. ಪ್ರವಾಹದ ಮನೆಯಲ್ಲಿ ಅಜ್ಜಿ ಹಠ
ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ವರುಣನ ಆರ್ಭಟ ದಿನೇದಿನೇ ಹೆಚ್ಚಾಗುತ್ತಲೇ ಇದ್ದು, ಆ ಭಾಗದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜೊತೆಗೆ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಅಲ್ಲಿಯ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ ಅಧಿಕ ಮಳೆಯಿಂದಾಗಿ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮ ಪ್ರವಾಹಕ್ಕೆ ಸಿಲುಕಿದ್ದು, ಗ್ರಾಮದ 85 ವರ್ಷದ ಶಿವನವ್ವ ಎಂಬ ಅಜ್ಜಿ ಮನೆ ಬಿಟ್ಟು ಬರಲು ತಿರಸ್ಕರಿಸಿದ್ದಾರೆ. […]

ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ವರುಣನ ಆರ್ಭಟ ದಿನೇದಿನೇ ಹೆಚ್ಚಾಗುತ್ತಲೇ ಇದ್ದು, ಆ ಭಾಗದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಜೊತೆಗೆ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಅಲ್ಲಿಯ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಗದಗ ಜಿಲ್ಲೆಯಲ್ಲಿ ಅಧಿಕ ಮಳೆಯಿಂದಾಗಿ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮ ಪ್ರವಾಹಕ್ಕೆ ಸಿಲುಕಿದ್ದು, ಗ್ರಾಮದ 85 ವರ್ಷದ ಶಿವನವ್ವ ಎಂಬ ಅಜ್ಜಿ ಮನೆ ಬಿಟ್ಟು ಬರಲು ತಿರಸ್ಕರಿಸಿದ್ದಾರೆ.
ಮಳೆ ಬಂದಾಗಲೆಲ್ಲಾ ಪದೇಪದೇ ಹೀಗೆ ಆದರೆ ನಾವು ಎಲ್ಲಿಗೆ ಹೋಗುವುದೆಂದು ಆಳಲು ತೋಡಿಕೊಂಡಿರುವ ಅಜ್ಜಿ, ನಾನು ಬಾಳಿದ ಮನೆಯನ್ನು ತೊರೆಯುವುದಿಲ್ಲ, ಜೊತೆಗೆ ಇಲ್ಲೇ ಇರ್ತೀನಿ, ನೀರು ಬಂದರೆ ಇದರಲ್ಲೇ ಹೋಗುತ್ತೇನೆ ಎಂದು ಅಜ್ಜಿ ಹಠ ಹಿಡಿದು ಕುಳಿತಿದ್ದಾರೆ.
ಹಠ ಹಿಡಿದು ಕುಳಿತಿರುವ ಅಜ್ಜಿಯನ್ನು ಮನೆಯಿಂದ ಹೊರ ತರುವ ಗೋಜಿಗೂ ತಾಲೂಕು ಆಡಳಿತ ಹೋಗಿಲ್ಲ, ಇದರಿಂದಾಗಿ ಗ್ರಾಮಸ್ಥರು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.




