ಜಂಬೂ ಸವಾರಿಯಲ್ಲಿ 2 ಸ್ತಬ್ಧಚಿತ್ರಕ್ಕಷ್ಟೇ ಅವಕಾಶ, ಕೊರೊನಾ ಜಾಗೃತಿ ಮೂಡಿಸೋ ಟ್ಯಾಬ್ಲೋ ಪ್ರದರ್ಶನ

ಜಂಬೂ ಸವಾರಿಯಲ್ಲಿ 2 ಸ್ತಬ್ಧಚಿತ್ರಕ್ಕಷ್ಟೇ ಅವಕಾಶ, ಕೊರೊನಾ ಜಾಗೃತಿ ಮೂಡಿಸೋ ಟ್ಯಾಬ್ಲೋ ಪ್ರದರ್ಶನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ‌ಈ ಬಾರಿ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಕೇವಲ ಅರಮನೆಯ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಇನ್ನು ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾಗಿದ್ದ ಸ್ತಬ್ಧಚಿತ್ರಗಳನ್ನು ಎರಡಕ್ಕೆ ಸೀಮಿತಗೊಳಿಸಲಾಗಿದೆ. ಮೈಸೂರು ಜಿಲ್ಲಾ ಪಂಚಾಯತಿಯಿಂದ ಕೊರೊನಾ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ನಿರ್ಮಿಸಲಾಗಿದೆ. ಮಹಾಮಾರಿ ಕೊರೊನಾವನ್ನು ತಡೆಯಲು ಕೊರೊನಾ ವಾರಿಯರ್ಸ್​ಗಳ ಪಾತ್ರ ಅತಿ ಮುಖ್ಯ ಹೀಗಾಗಿ ಈ ಸ್ತಬ್ಧಚಿತ್ರವನ್ನು ಅವರಿಗಾಗಿ ಅರ್ಪಿಸಲಾಗಿದೆ. ಇಡೀ ವಿಶ್ವ, ಕುಟುಂಬವನ್ನು ವೈದ್ಯರು […]

Ayesha Banu

|

Oct 26, 2020 | 8:26 AM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ‌ಈ ಬಾರಿ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಕೇವಲ ಅರಮನೆಯ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಇನ್ನು ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾಗಿದ್ದ ಸ್ತಬ್ಧಚಿತ್ರಗಳನ್ನು ಎರಡಕ್ಕೆ ಸೀಮಿತಗೊಳಿಸಲಾಗಿದೆ.

ಮೈಸೂರು ಜಿಲ್ಲಾ ಪಂಚಾಯತಿಯಿಂದ ಕೊರೊನಾ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ನಿರ್ಮಿಸಲಾಗಿದೆ. ಮಹಾಮಾರಿ ಕೊರೊನಾವನ್ನು ತಡೆಯಲು ಕೊರೊನಾ ವಾರಿಯರ್ಸ್​ಗಳ ಪಾತ್ರ ಅತಿ ಮುಖ್ಯ ಹೀಗಾಗಿ ಈ ಸ್ತಬ್ಧಚಿತ್ರವನ್ನು ಅವರಿಗಾಗಿ ಅರ್ಪಿಸಲಾಗಿದೆ. ಇಡೀ ವಿಶ್ವ, ಕುಟುಂಬವನ್ನು ವೈದ್ಯರು ಕಾಪಾಡುತ್ತಿದ್ದಾರೆ ಎಂದು ಸಾರುವ ಚಿತ್ರ ಇದಾಗಿದೆ.

ಅಲ್ಲದೆ ಕೊರೊನಾ ರೋಲ್ಸ್​ಗಳ ಪರಿಚಯವನ್ನು ಈ ಸ್ತಬ್ಧಚಿತ್ರದಲ್ಲಿ ಮೂಡಿಬಂದಿದೆ. ಇನ್ನು ಮತ್ತೊಂದು ವಿಶೇಷ ಅಂದ್ರೆ ಅದು ಅರಮನೆ ವಾದ್ಯಗೋಷ್ಠಿಯ ನಿರ್ಮಾಣ ಮಾಡಲಾಗಿದೆ. ಇದನ್ನು ಆನೆ ಬಂಡಿ ಸ್ತಬ್ಧಚಿತ್ರ ಎನ್ನಲಾಗುತ್ತೆ. ಈ ಎರಡು ಸ್ತಬ್ಧಚಿತ್ರಗಳು ಮಾತ್ರ ಮೆರೆವಣೆಗೆಯಲ್ಲಿ ಭಾಗವಹಿಸಲಿವೆ.

Follow us on

Related Stories

Most Read Stories

Click on your DTH Provider to Add TV9 Kannada