
ಬೆಂಗಳೂರು: ಇಂದು ಮಕ್ಕಳ ಮಮತೆಯ ಚಾಚಾ ಪಂಡಿತ್ ಜವಾಹರ್ ಲಾಲ್ ನೆಹರು ಜನ್ಮದಿನ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನೆಹರು ಜನ್ಮದಿನ ಆಚರಣೆ ಮಾಡಲಾಯಿತು. ನೆಹರು ಭಾವಚಿತ್ರಕ್ಕೆ ಕಾಂಗ್ರೆಸ್ ನಾಯಕರು ಪುಷ್ಪನಮನ ಸಲ್ಲಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, K.H.ಮುನಿಯಪ್ಪ, ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, H.ಆಂಜನೇಯ, ಬಿ.ಕೆ. ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್ ನಾಯಕರು ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ್ರು.
ನೆಹರು ಐಡಿಯಾಲಜಿಯನ್ನು ನಾಶ ಮಾಡಲು ಹೊರಟಿದ್ದಾರೆ:
ಈ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ RSS ಐಡಿಯಾಲಜಿ ಮೇಲೆ ಮೋದಿ ಸರ್ಕಾರ ನಡೆಯುತ್ತಿದೆ. ಹಾಗು ನೆಹರು ಐಡಿಯಾಲಜಿಯನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಸರ್ಕಾರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ. ನೆಹರು ಹೆಸರು ನೆನಪಿನಲ್ಲಿರದಂತೆ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ನೆಹರು ಮಾಡಿರುವ ಅಭಿವೃದ್ಧಿಗಳು ಜನರಿಗೆ ಗೊತ್ತಾಗುತ್ತದೆ.
ಹೀಗಾಗಿ ನೆಹರು ಹೆಸರನ್ನು ಕೆಡಿಸೋದಕ್ಕೆ ಹೊರಟಿದ್ದಾರೆ. ಸುಳ್ಳನ್ನ ಬರೆದು ಪ್ರಚಾರ ಮಾಡುತ್ತಿದ್ದಾರೆ. ನೆಹರು ತತ್ವಗಳು ಮುಗಿಸದೆ ಹೋದರೆ ಅವರಿಗೆ ನಷ್ಟ. ಅದಕ್ಕೆ ಸಾಕಷ್ಟು ಪ್ರಯತ್ನಗಳನ್ನ ಮಾಡುತ್ತಲೇ ಇದ್ದಾರೆ. ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸುತ್ತಿದ್ದಾರೆ. ಅವರೊಬ್ಬ ಸಂತ, ಪ್ರತಿಮೆಯನ್ನು ಕೂರಿಸಲಿ ಸಂತೋಷ ಆದರೆ ನೆಹರು ವಿವಿಯಲ್ಲೂ ಪ್ರತಿಮೆ ಮಾಡಿದ್ದಾರೆ. ನೆಹರು ಮಾಡಿರುವ ಕೆಲಸಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
Published On - 12:56 pm, Sat, 14 November 20