
ಕೊಡಗು: ಅಕ್ಟೋಬರ್ 17ರಂದು ಬೆಳಗ್ಗೆ 7 ಗಂಟೆ 03 ನಿಮಿಷಕ್ಕೆ ಜರುಗಲಿರುವ ಕಾವೇರಿ ತೀರ್ಥೋದ್ಭವದ ಕುರಿತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸುದ್ದಿಗೋಷ್ಠಿ ನಡೆಸಿದರು.
35 ಸ್ವಯಂಸೇವಕರು, ದೇವಾಲಯ ಸಮಿತಿ ಸದಸ್ಯರು ಮತ್ತು ಆಯ್ದ ಜನಪ್ರತಿನಿಧಿಗಳಿಗೆ ಮಾತ್ರ ಅವಕಾಶ ಇರುತ್ತದೆ. ಸಮಿತಿಯವರು ಮತ್ತು ಸ್ವಯಂಸೇವಕರಿಗೆ ಕೊವಿಡ್ ಟೆಸ್ಟ್ ಕಡ್ಡಾಯ. ಮೆಡಿಕಲ್ ರಿಪೋರ್ಟ್ ಇದ್ದವರಿಗೆ ಮಾತ್ರ ಪ್ರವೇಶ ಎಂದು ಹೇಳಿದರು.
ತೀರ್ಥೋದ್ಭವ ಬಳಿಕ ಎಂದಿನಂತೆ ಪೂಜಾ ಕಾರ್ಯ ನಡೆಸಲಾಗುವುದು ಹಾಗೂ ಆವಾಗ ಮಾತ್ರ ಭಕ್ತರು ಬಂದು ಪೂಜೆ ಮಾಡಿಸಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಕೊಡಗು ಡಿಸಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ಕೊಟ್ಟಿದ್ದಾರೆ.