ಸಕ್ಕರೆ ನಾಡಿನಲ್ಲಿ ದೋಖಾ: ಡಬಲ್ ಬಡ್ಡಿ ಕೊಡಿಸುವುದಾಗಿ ಹೇಳಿ 20 ಕೋಟಿ ಮೌಲ್ಯ ಚಿನ್ನಕ್ಕೆ ಪಂಗನಾಮ
ಮಂಡ್ಯ: ಸಕ್ಕರೆ ನಾಡಿನಲ್ಲೊಂದು ಮಹಾ ದೋಖಾ ನಡೆದಿದೆ. ಬ್ಯಾಂಕ್ನಲ್ಲಿಟ್ಟ ಚಿನ್ನಕ್ಕೆ ಹೆಚ್ಚಿನ ಬಡ್ಡಿ ಕೊಡಿಸುವುದಾಗಿ ಹೇಳಿ 20 ಕೋಟಿ ಮೌಲ್ಯದ ಚಿನ್ನ ಸಂಗ್ರಹಿಸಿ ಜನರಿಗೆ ಪಂಗನಾಮ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಫೆಡ್ ಖಾಸಗಿ ಫೈನಾನ್ಸ್ ಕಂಪನಿಯ ಎಕ್ಸಿಕ್ಯುಟಿವ್ನಿಂದ ಇಂತಹ ಮಹಾ ಮೋಸ ನಡೆದಿದೆ. ಬ್ಯಾಂಕ್ ನಲ್ಲಿ ಚಿನ್ನ ಇಟ್ಟರೆ ಹೆಚ್ಚಿನ ಬಡ್ಡಿ ಕೊಡಿಸುವುದಾಗಿ ಹೇಳಿ 20 ಕೋಟಿ ಚಿನ್ನ ಸಂಗ್ರಹಿಸಿ ವಂಚನೆ ಮಾಡಿದ್ದ ಖತರ್ನಾಕ್ ಖದೀಮ ಸೋಮಶೇಖರ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ […]

ಮಂಡ್ಯ: ಸಕ್ಕರೆ ನಾಡಿನಲ್ಲೊಂದು ಮಹಾ ದೋಖಾ ನಡೆದಿದೆ. ಬ್ಯಾಂಕ್ನಲ್ಲಿಟ್ಟ ಚಿನ್ನಕ್ಕೆ ಹೆಚ್ಚಿನ ಬಡ್ಡಿ ಕೊಡಿಸುವುದಾಗಿ ಹೇಳಿ 20 ಕೋಟಿ ಮೌಲ್ಯದ ಚಿನ್ನ ಸಂಗ್ರಹಿಸಿ ಜನರಿಗೆ ಪಂಗನಾಮ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಫೆಡ್ ಖಾಸಗಿ ಫೈನಾನ್ಸ್ ಕಂಪನಿಯ ಎಕ್ಸಿಕ್ಯುಟಿವ್ನಿಂದ ಇಂತಹ ಮಹಾ ಮೋಸ ನಡೆದಿದೆ.
ಬ್ಯಾಂಕ್ ನಲ್ಲಿ ಚಿನ್ನ ಇಟ್ಟರೆ ಹೆಚ್ಚಿನ ಬಡ್ಡಿ ಕೊಡಿಸುವುದಾಗಿ ಹೇಳಿ 20 ಕೋಟಿ ಚಿನ್ನ ಸಂಗ್ರಹಿಸಿ ವಂಚನೆ ಮಾಡಿದ್ದ ಖತರ್ನಾಕ್ ಖದೀಮ ಸೋಮಶೇಖರ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಗುತ್ತಲು ಬಡಾವಣೆಯ ನಿವಾಸಿ. ಈತ ನಮ್ಮ ಬ್ಯಾಂಕ್ನಲ್ಲಿ ಚಿನ್ನ ಇಟ್ಟರೆ ವಾರಕ್ಕೆ 20%, ತಿಂಗಳಿಗೆ 40% ಬಡ್ಡಿ ಸಿಗುತ್ತೆ ಎಂದು ಆಮಿಷವೊಡ್ಡುತ್ತಿದ್ದ.
ಹೆಚ್ಚಾಗಿ ಮಹಿಳೆಯರು ಮತ್ತು ಮಂಗಳಮುಖಿಯರನ್ನೇ ಟಾರ್ಗೆಟ್ ಮಾಡ್ತಿದ್ದ. ಹೆಚ್ಚಿನ ಬಡ್ಡಿ ಸಿಗುತ್ತೆ ಎಂಬ ಆಮಿಷಕ್ಕೆ ಒಳಗಾಗಿ ಗ್ರಾಹಕರು ಚಿನ್ನ ಕಳೆದುಕೊಂಡಿದ್ದಾರೆ. ಸತ್ಯ ತಿಳಿಯುತ್ತಿದ್ದಂತೆ ಮಂಗಳಮುಖಿಯೊಬ್ಬರು ಮಂಡ್ಯ ಠಾಣೆಯಲ್ಲಿ ದೂರು ದಾಖಲಿಸಿದ್ರು. ತನಿಖೆ ಶುರು ಮಾಡಿದ ಪೊಲೀಸರಿಂದ ಸುಮಾರು 20 ಕೋಟಿ ವಂಚನೆ ಪ್ರಕರಣ ಬಯಲಾಗಿದೆ. ಸದ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

Published On - 1:59 pm, Thu, 15 October 20




