ಅನಾರೋಗ್ಯ ದಿನಗಳ ಭೀಕರತೆ ಬಗ್ಗೆ ಮೌನ ಮುರಿದ ರಾನಾ ದಗ್ಗುಬಾಟಿ

ಹಾಥಿ ಮೆರೆ ಸಾಥಿ ಸಿನಿಮಾದ ಶೂಟಿಂಗ್​ ವೇಳೆ ರಾನಾಗೆ ಹೃದಯ ಸಮಸ್ಯೆ ಹಾಗೂ ಕಿಡ್ನಿ ವೈಫಲ್ಯದ ತೊಂದರೆ ಅನುಭವಿಸುತ್ತಿರುವ ವಿಚಾರ ಪರೀಕ್ಷೆಯಿಂದ ತಿಳಿದು ಬಂದಿತ್ತು. ಇದಾದ ನಂತರ ಅವರು ಒಂದು ಬ್ರೇಕ್​ ತೆಗೆದುಕೊಂಡು ಆಪರೇಷನ್​ಗೆ ಒಳಗಾಗಿದ್ದರು.

ಅನಾರೋಗ್ಯ ದಿನಗಳ ಭೀಕರತೆ ಬಗ್ಗೆ ಮೌನ ಮುರಿದ ರಾನಾ ದಗ್ಗುಬಾಟಿ
ರಾನಾ ದಗ್ಗುಬಾಟಿ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 24, 2021 | 6:45 PM

ನಟ ರಾನಾ ದಗ್ಗುಬಾಟಿ ಟಾಲಿವುಡ್​ನ ಬಹುಬೇಡಿಕೆಯ ನಟ. ಅವರ ವಿಲನ್​ ಕ್ಯಾರೆಕ್ಟರ್​ ಬಾಹುಬಲಿ ಸಿನಿಮಾಗೆ ತೂಕ ನೀಡಿತ್ತು. ರಾನಾ ಅವರಿಗೆ ಇತ್ತೀಚೆಗೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಕೆಲ ತಿಂಗಳ ಕಾಲ ಗ್ಯಾಪ್​ ತೆಗೆದುಕೊಂಡು ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದರು. ತಮ್ಮ ಅನಾರೋಗ್ಯದ ದಿನಗಳು ಹೇಗಿದ್ದವು ಎನ್ನುವ ಬಗ್ಗೆ ರಾನಾ ಮೌನ ಮುರಿದಿದ್ದಾರೆ. ‘ಹಾಥಿ ಮೆರೆ ಸಾಥಿ’ ಸಿನಿಮಾದ ಶೂಟಿಂಗ್​ ವೇಳೆ ರಾನಾಗೆ ಹೃದಯ ಸಮಸ್ಯೆ ಹಾಗೂ ಕಿಡ್ನಿ ವೈಫಲ್ಯದ ತೊಂದರೆ ಅನುಭವಿಸುತ್ತಿರುವ ವಿಚಾರ ಪರೀಕ್ಷೆಯಿಂದ ತಿಳಿದು ಬಂದಿತ್ತು. ಇದಾದ ನಂತರ ಅವರು ಒಂದು ಬ್ರೇಕ್​ ತೆಗೆದುಕೊಂಡು ಆಪರೇಷನ್​ಗೆ ಒಳಗಾಗಿದ್ದರು.ಈಗ ಅವರು ಸಮಸ್ಥಿತಿಯಲ್ಲಿದ್ದಾರೆ. ತಾವು ಅನುಭವಿಸಿದ ಕಷ್ಟದ ಬಗ್ಗೆ ರಾಣಾ ಹೇಳಿಕೊಂಡಿದ್ದಾರೆ.

ಹಾಥಿ ಮೆರೆ ಸಾತಿ ಸಿನಿಮಾದ ನಿರ್ದೇಶಕ ಪ್ರಭು ಅವರಿಗೆ ಧನ್ಯವಾದ ಹೇಳಿರುವ ರಾಣಾ, ಸಿನಿಮಾ ಕೆಲಸಗಳು ನಡೆಯುತ್ತಿರುವಾಗಲೇ ನನ್ನ ಅನಾರೋಗ್ಯದ ವಿಚಾರ ಹೊರ ಬಿದ್ದಿತ್ತು. ನಾನು ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ ಪ್ರಭು ಅವರು ಸಿನಿಮಾ ಶೂಟಿಂಗ್​ ನಿಲ್ಲಿಸಿ ನನಗಾಗಿ ಕಾದಿದ್ದರು. ನನ್ನ ಸಮಸ್ಯೆಗಳು ಕಡಿಮೆ ಆಗಲು ಕಾಡು ಮೊದಲ ಕಾರಣ ಎಂದಿದ್ದಾರೆ.

ಕಾಡಿನಲ್ಲಿ ಒಂದು ವಾರ ಕಳೆದು ಹಿಂತಿರುಗಿ ಬಂದರೆ ನಿಮಗೆ ವಿಭಿನ್ನ ಮನಸ್ಥಿತಿ ಇರುತ್ತದೆ. ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಕಾಡಿನಲ್ಲಿ ಸಮಯ ಕಳೆದಿದ್ದರಿಂದ ಅನಾರೋಗ್ಯದಿಂದ ಎದುರಿಸಿದ ಯಾತನೆ ಪರಿಹಾರ ಆಯಿತು ಎಂದು ರಾಣಾ ಹೇಳಿದ್ದಾರೆ.

ರಾನಾ ದಗ್ಗುಬಾಟಿಗೆ ರಕ್ತೊದತ್ತಡ, ಹೃದಯ ಸಮಸ್ಯೆ ಹಾಗೂ ಕಿಡ್ನಿ ವೈಫಲ್ಯ ಉಂಟಾಗಿತ್ತಂತೆ. ಶೇ.70 ಉಳಿದುಕೊಳ್ಳುವ ಸಾಧ್ಯತೆ ಹಾಗೂ ಶೇ.30 ಮೃತಪಡುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದರಂತೆ.

ಹಾಥಿ ಮೆರೆ ಸಾಥಿ ಸಿನಿಮಾ ಮಾರ್ಚ್​ 26ರಂದು ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಿಲೀಸ್​ ಆಗುತ್ತಿದೆ. ತಮಿಳಿನಲ್ಲಿ ಕಾಡನ್​ ಹಾಗೂ ತೆಲುಗಿನಲ್ಲಿ ಅರಣ್ಯ ಹೆಸರಿನಲ್ಲಿ ಸಿನಿಮಾ ರಿಲೀಸ್​ ಆಗುತ್ತಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಹಿಂದಿ ಭಾಷೆಯಲ್ಲಿ ಚಿತ್ರ ರಿಲೀಸ್​ ಆಗುತ್ತಿಲ್ಲ. ಹಿಂದಿ ವರ್ಷನ್​ನಲ್ಲಿ ಮುಂದಿನ ದಿನಗಳಲ್ಲಿ ಸಿನಿಮಾ ರಿಲೀಸ್​ ಮಾಡುವ ಆಲೋಚನೆ ಚಿತ್ರತಂಡದ್ದು.

ಇದನ್ನೂ ಓದಿ: ಸಲಾರ್​ ನಂತರವೂ ಪ್ರಶಾಂತ್​ ನೀಲ್​ ಕನ್ನಡ ಸಿನಿಮಾ ಮಾಡೋದು ಡೌಟ್​; ಇಲ್ಲಿದೆ ಹೊಸ ನ್ಯೂಸ್​

Published On - 5:30 pm, Wed, 24 March 21

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್