
ನವದೆಹಲಿ: ಕೊರೊನಾ ಹೆಮ್ಮಾರಿಯ ಆರ್ಭಟಕ್ಕೆ ನಲುಗಿರುವ ವಿಶ್ವಕ್ಕೆ ಈಗ ಅರ್ಜೆಂಟಾಗಿ ವ್ಯಾಕ್ಸಿನ್ ಬೇಕಾಗಿದೆ. ಆದ್ರೆ ಈ ವ್ಯಾಕ್ಸಿನ್ ಇನ್ನೂ ಟ್ರಯಲ್ಸ್‌ನಲ್ಲೇ ಇವೆ. ಆದ್ರೆ ವ್ಯಾಕ್ಸಿನ್ ಪ್ರಯೋಗ ಯಶಸ್ವಿಯಾದ ತಕ್ಷಣವೇ ಜಗತ್ತಿನಾದ್ಯಂತ ವಿತರಿಸಲು ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಪೌಂಡೇಶನ್ ಭಾರತದ ಸೀರಮ್ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಜತೆ ಒಪ್ಪಂದ ಮಾಡಿಕೊಂಡಿದೆ.
ಹೌದು ಪುಣೆಯಲ್ಲಿರುವ ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ಔಷಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರು ಮಾಡುವ ಇದರ ಶಕ್ತಿ ಮತ್ತು ಸಾಮರ್ಥ್ಯ. ಹೀಗಾಗಿ ಆಕ್ಸ್‌ಫರ್ಡ್ ಯುನಿವರ್ಸಿಟಿ ಮತ್ತು ಆಸ್ಟ್ರಾಜನೆಕಾ, ಸೀರಮ್ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಜತೆ ಒಪ್ಪಂದ ಮಾಡಿಕೊಂಡಿವೆ.
ಹೀಗಾಗಿ ಈಗ ಮೈಕ್ರೋಸಾಪ್ಟ್ ಕಂಪನಿಯ ಸ್ಥಾಪಕರಾದ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ತಮ್ಮ ಗೇಟ್ಸ್ ಫೌಂಡೇಶನ್ ಮುಖಾಂತರ ಆಫ್ರಿಕಾದ ದೇಶಗಳು ಸೇರಿದಂತೆ 92 ಬಡರಾಷ್ಟ್ರಗಳಿಗಾಗಿ 100 ಮಿಲಿಯನ್ ಡೋಸ್‌ಗಳನ್ನು ತಯಾರು ಮಾಡಿಕೊಡಲು ಸೀರಮ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಈಗ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಬಾರತದ ಜತೆಗೆ ವಿಶ್ವದ ಬಹುತೇಕ ಬಡ ರಾಷ್ಟ್ರಗಳಿಗೆ ವ್ಯಾಕ್ಸಿನ್ ಅನ್ನು ತಯಾರು ಮಾಡಿಕೊಡು ಜವಾಬ್ದಾರಿ ಹೊತ್ತಿದೆ.