ಸತತ ಮಳೆಗೆ ನದಿಯಲ್ಲಿ ತೆಲಿ ಬಂದು ಹಾವುಗಳಿಗೆ ಮಠದ ಮರಗಳೇ ಆಶ್ರಯ
ಶಿವಮೊಗ್ಗ: ರಾಜ್ಯದ್ಯಂತ ಸುರಿಯುತ್ತಿರುವಂತೆ ಶಿವಮೊಗ್ಗದಲ್ಲೂ ಮಳೆ ಸತತವಾಗಿ ಸುರಿಯುತ್ತಿದೆ. ಹೀಗಾಗಿ ನದಿಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಹೀಗೆ ತುಂಗಾ ನದಿ ತುಂಬಿ ಹರಿಯುತ್ತಿರುವುದರಿಂದ ನೀರಿನ ರಭಸದಲ್ಲಿ ಕೊಚ್ಚಿಕೊಂಡು ಬಂದ ಹಾವುಗಳು ನದಿ ದಂಡೆಯ ಪಕ್ಕದ ಗಿಡಗಂಟೆಗಳಲ್ಲಿ ಆಶ್ರಯ ಪಡಿಯುತ್ತಿವೆ. ಹೌದು ಶಿವಮೊಗ್ಗದ ಬೆಕ್ಕಿನ ಕಲ್ಮಠ ತುಂಗಾ ನದಿ ಪಕ್ಕದಲ್ಲೇ ಇರುವುದರಿಂದ ಇಲ್ಲಿನ ಮರದಲ್ಲಿ 10 ಕ್ಕೂ ಹೆಚ್ಚು ಹಾವುಗಳು ಪ್ರತ್ಯಕ್ಷವಾಗಿವೆ. ಇದಕ್ಕೆ ಕಾರಣ ತುಂಗಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಆದ ಹೆಚ್ಚಳ. ನದಿ ನೀರಿನಲ್ಲಿ ತೇಲಿಕೊಂಡು ಬಂದಿರುವ ಹಾವುಗಳು […]

ಶಿವಮೊಗ್ಗ: ರಾಜ್ಯದ್ಯಂತ ಸುರಿಯುತ್ತಿರುವಂತೆ ಶಿವಮೊಗ್ಗದಲ್ಲೂ ಮಳೆ ಸತತವಾಗಿ ಸುರಿಯುತ್ತಿದೆ. ಹೀಗಾಗಿ ನದಿಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಹೀಗೆ ತುಂಗಾ ನದಿ ತುಂಬಿ ಹರಿಯುತ್ತಿರುವುದರಿಂದ ನೀರಿನ ರಭಸದಲ್ಲಿ ಕೊಚ್ಚಿಕೊಂಡು ಬಂದ ಹಾವುಗಳು ನದಿ ದಂಡೆಯ ಪಕ್ಕದ ಗಿಡಗಂಟೆಗಳಲ್ಲಿ ಆಶ್ರಯ ಪಡಿಯುತ್ತಿವೆ.
ಹೌದು ಶಿವಮೊಗ್ಗದ ಬೆಕ್ಕಿನ ಕಲ್ಮಠ ತುಂಗಾ ನದಿ ಪಕ್ಕದಲ್ಲೇ ಇರುವುದರಿಂದ ಇಲ್ಲಿನ ಮರದಲ್ಲಿ 10 ಕ್ಕೂ ಹೆಚ್ಚು ಹಾವುಗಳು ಪ್ರತ್ಯಕ್ಷವಾಗಿವೆ. ಇದಕ್ಕೆ ಕಾರಣ ತುಂಗಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಆದ ಹೆಚ್ಚಳ. ನದಿ ನೀರಿನಲ್ಲಿ ತೇಲಿಕೊಂಡು ಬಂದಿರುವ ಹಾವುಗಳು ಈಗ ಇಲ್ಲಿನ ಮರಗಳಲ್ಲಿ ರಕ್ಷಣೆ ಪಡೆಯುತ್ತಿವೆ.
ನದಿಯಲ್ಲಿ 80 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು ನೂರಾರು ಹಾವುಗಳು ನದಿಯಲ್ಲಿ ತೇಲಿ ಬರುತ್ತಿವೆ. ಹೀಗಾಗಿ ಈ ಹಾವುಗಳನ್ನು ನೋಡಲು ಜನರು ಈಗ ಮಳೆಯಲ್ಲಿಯೇ ತಂಡೋಪತಂಡಗಳಲ್ಲಿ ಬರುತ್ತಿದ್ದಾರೆ.