ಹೃದಯ ಸುರಕ್ಷಿತವಾಗಿರಬೇಕಿದ್ದರೆ ವೀಡ್, ಗಾಂಜಾದಿಂದ ಗಾವುದ ದೂರವಿರಿ!
ನೀವೊಂದು ವೇಳೆ ವೀಡ್ (ಗಾಂಜಾದಂಥ ಮಾದಕ ಪದಾರ್ಥ) ಸೇವಿಸುತ್ತಿದ್ದರೆ ಕೂಡಲೇ ಆ ಚಟವನ್ನು ತೊಡೆದುಹಾಕುವುದು ಒಳಿತು. ಯಾಕಂತೀರಾ? ಅಮೆರಿಕಾದ ಸಂಶೋಧಕರ ಪ್ರಕಾರ ವೀಡ್ ಸೇವನೆ ನಿಮ್ಮ ಹೃದಯವನ್ನು ತೀವ್ರವಾಗಿ ಘಾಸಿಗೊಳಿಸಬಹುದಾಗಿದೆ. “ಧೂಮ್ರಪಾನ, ವೇಪ್ ಸೇವನೆ ಅಥವಾ ಗಾಂಜಾ ಮುಂತಾದವುಗಳು ಸೇರಿದಂತೆ ಯಾವುದೇ ಮಾದಕ ಪದಾರ್ಥ ಬಳಸುವುದನ್ನು ನಿಲ್ಲಿಸಬೇಕೆಂದು ಆಮೆರಿಕನ್ ಹಾರ್ಟ್ ಅಸೋಸಿಯೇಷನ್ ಶಿಫಾರಸ್ಸು ಮಾಡುತ್ತದೆ. ಯಾಕೆಂದರೆ, ಇವು ಹೃದಯ, ಶ್ವಾಸಕೋಶ, ಮತ್ತು ರಕ್ತನಾಳಗಳಿಗೆ ತೀವ್ರವಾಗಿ ಘಾಸಿಯನ್ನುಂಟು ಮಾಡಬಲ್ಲವು,” ಎಂದು ಈ ಸಂಸ್ಥೆಯ ಉಪ–ಮುಖ್ಯಸ್ಥರು ಹಾಗೂ ವೈದ್ಯಾಧಿಕಾರಿಗಳಾಗಿರುವ ಡಾ. […]

ನೀವೊಂದು ವೇಳೆ ವೀಡ್ (ಗಾಂಜಾದಂಥ ಮಾದಕ ಪದಾರ್ಥ) ಸೇವಿಸುತ್ತಿದ್ದರೆ ಕೂಡಲೇ ಆ ಚಟವನ್ನು ತೊಡೆದುಹಾಕುವುದು ಒಳಿತು. ಯಾಕಂತೀರಾ? ಅಮೆರಿಕಾದ ಸಂಶೋಧಕರ ಪ್ರಕಾರ ವೀಡ್ ಸೇವನೆ ನಿಮ್ಮ ಹೃದಯವನ್ನು ತೀವ್ರವಾಗಿ ಘಾಸಿಗೊಳಿಸಬಹುದಾಗಿದೆ.
“ಧೂಮ್ರಪಾನ, ವೇಪ್ ಸೇವನೆ ಅಥವಾ ಗಾಂಜಾ ಮುಂತಾದವುಗಳು ಸೇರಿದಂತೆ ಯಾವುದೇ ಮಾದಕ ಪದಾರ್ಥ ಬಳಸುವುದನ್ನು ನಿಲ್ಲಿಸಬೇಕೆಂದು ಆಮೆರಿಕನ್ ಹಾರ್ಟ್ ಅಸೋಸಿಯೇಷನ್ ಶಿಫಾರಸ್ಸು ಮಾಡುತ್ತದೆ. ಯಾಕೆಂದರೆ, ಇವು ಹೃದಯ, ಶ್ವಾಸಕೋಶ, ಮತ್ತು ರಕ್ತನಾಳಗಳಿಗೆ ತೀವ್ರವಾಗಿ ಘಾಸಿಯನ್ನುಂಟು ಮಾಡಬಲ್ಲವು,” ಎಂದು ಈ ಸಂಸ್ಥೆಯ ಉಪ–ಮುಖ್ಯಸ್ಥರು ಹಾಗೂ ವೈದ್ಯಾಧಿಕಾರಿಗಳಾಗಿರುವ ಡಾ. ರೋಸ್ ಮಾರೀ ರಾರ್ಬಟ್ಸನ್ ಹೇಳುತ್ತಾರೆ.
ಸರ್ಕ್ಯುಲೇಷನ್ ಎಂಬ ಮತ್ತೊಂದು ಸಂಸ್ಥೆಯು, ಗಾಂಜಾ ಸೇವನೆ ಹಾಗೂ ಹೃದಯದ ಮಧ್ಯೆಯಿರುವ ಸಂಬಂಧ ಕುರಿತು ಪ್ರಸ್ತುತವಿರುವ ಸಂಶೋಧನೆಯನ್ನು ಅಧ್ಯಯನ ಮಾಡಿದೆ. ಸದರಿ ಸಂಸ್ಥೆಯು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ವೀಡ್ ಸೇವನೆಯು, ವ್ಯಕ್ತಿಯೊಬ್ಬ ಯಾವುದಾದರು ಔಷಧಿ ತೆಗೆದುಕೊಳ್ಳುತ್ತಿದ್ದರೆ ಅದರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಷ್ಟು ಶಕ್ತವಾಗಿದೆ ಮತ್ತು ಹೃದಯದ ನಾಳಗಳನ್ನು ಘಾಸಿಗೊಳಿಸಿ; ಹೃದಯಾಘಾತ, ಸ್ಟ್ರೋಕ್ಗೆ ಒಳಗಾಗಬಹುದಾದ ಸ್ಥಿತಿಯನ್ನು ನಿರ್ಮಿಸುತ್ತದೆ,” ಎಂದು ಹೇಳಿದೆ.
“ವೀಡ್, ಗಾಂಜಾ ಮುಂತಾದವುಗಳನ್ನು ಔಷಧೀಯ ರೂಪದಲ್ಲಿ, ಅಥವಾ ಮನರಂಜನೆನಗೋಸ್ಕರ ಮೌಖಿಕವಾಗಿ ಅಥವಾ ಲೇಪನವಾಗಿ ಉಪಯೋಗಿಸುವವರು, ವೈದ್ಯರ ಸಲಹೆ ಪಡೆದು ಮುಂದುವರಿಯುವುದು ಸೂಕ್ತ, ಯಾಕೆಂದರೆ ಹಾಗೆ ಆ ಪದಾರ್ಥಗಳನ್ನು ಬಳಸುವಾಗ ನಿಖರ ಪ್ರಮಾಣ (ಡೊಸೇಜ್) ಗೊತ್ತಾಗುವುದಿಲ್ಲ. ಅಲ್ಲದೆ, ಕಾನೂನಾತ್ಮಕವಾಗಿ ಮಾರಾಟಗೊಳ್ಳುವ ಪದಾರ್ಥಗಳನ್ನು ಮಾತ್ರ ಕೊಳ್ಳಬೇಕು,” ಎಂದು ಸರ್ಕ್ಯುಲೇಷನ್ನ ತಙ್ಞರು ಹೇಳುತ್ತಾರೆ.
ಆದರೆ, ಭಾರತದಲ್ಲಿ ಗಾಂಜಾ ಆಕ್ರಮವಾಗಿ ಯಾವುದೇ ಅಡೆತಡೆಯಿಲ್ಲದೆ ಮಾರಾಡವಾಗುತ್ತದೆ.




