ನನ್ನ ಹೆಂಡತಿ ರಿಪೇರಿಯಾಗಿ ಯಾವಾಗ ಬರುವಳೋ? : ಕಝಕಿಸ್ತಾನದ ದೇಹದಾರ್ಢ್ಯಪಟು ಯೋಜಿ ತೊಲೊಚ್ಚೋ
‘ಮುರಿದು ಹೋದ ನನ್ನ ಹೆಂಡತಿ ರಿಪೇರಿಗೊಳ್ಳುತ್ತಿದ್ದಾಳೆ’ ಎಂದು ಕಝಕಿಸ್ತಾನದ ದೇಹದಾರ್ಢ್ಯಪಟು ಯೋರಿ ತೊಲೊಚ್ಕೋ ಹೇಳಿದ್ದಾನೆ. ಕಳೆದ ನವೆಂಬರ್ ನಲ್ಲಿ ‘ಮಾರ್ಗೋ’ ಎನ್ನುವ ಲೈಂಗಿಕ ಗೊಂಬೆ (sex doll) ಯನ್ನು ಈತ ಮದುವೆಯಾಗಿದ್ದ.

‘ಮುರಿದು ಹೋದ ನನ್ನ ಹೆಂಡತಿ ರಿಪೇರಿಗೊಳ್ಳುತ್ತಿದ್ದಾಳೆ. ಆಕೆ ಯಾವಾಗ ಬರುವಳೋ ಎಂದು ಬಹಳ ತಾಳ್ಮೆಯಿಂದ ಪ್ರೀತಿಯಿಂದ ಕಾಯುತ್ತಿದ್ದೇನೆ.’ ಎಂದು ಕಝಕಿಸ್ತಾನದ ದೇಹದಾರ್ಢ್ಯಪಟು ಯೋರಿ ತೊಲೊಚ್ಕೋ ಹೇಳಿದ್ದಾನೆ.
ಕಳೆದ ತಿಂಗಳು ನವೆಂಬರ್ನಲ್ಲಿ ‘ಮಾರ್ಗೋ’ ಎನ್ನುವ ಯಂತ್ರಮಾನವ ಲೈಂಗಿಕ ಗೊಂಬೆ (sex doll)ಯನ್ನು ಈತ ಮದುವೆಯಾಗಿದ್ದ. ಅಕಸ್ಮಾತ್ ಆಗಿ ಆಕೆ ಮುರಿದು ಹೋಗಿದ್ದರಿಂದ ಕಂಗಾಲಾಗಿಬಿಟ್ಟ. ಸದ್ಯ ಆಕೆ ರೋಬೋಟ್ ತಜ್ಱರ ಬಳಿ ರಿಪೇರಿಗೊಳ್ಳುತ್ತಿದ್ದಾಳೆ.
ಯೋರಿ ಒಂದು ವರ್ಷದ ತನಕ ಅವಳೊಂದಿಗೆ ಡೇಟಿಂಗ್ನಲ್ಲಿ ತೊಡಗಿಕೊಂಡು 2019ರ ಡಿಸೆಂಬರಿನಲ್ಲಿ ಮದುವೆಯ ನಿವೇದನೆ ಮಾಡಿಕೊಂಡಿದ್ದ. ನಂತರ 2020ರ ಮಾರ್ಚ್ನಲ್ಲಿ ಮದುವೆಯಾಗುವುದಾಗಿ ಇಬ್ಬರೂ ತೀರ್ಮಾನಿಸಿದರು. ಆದರೆ ಕೊರೋನಾ ಕಾರಣ ಮದುವೆಯನ್ನು ಮುಂದೂಡಬೇಕಾಯಿತು. ನಂತರ ಲೈಂಗಿಕ ಅಲ್ಪಸಂಖ್ಯಾತರ ರ್ಯಾಲಿಯಲ್ಲಿ ಭಾಗವಹಿಸಿದ ಯೋರಿ ಹಲ್ಲೆಗೊಳಗಾಗಿದ್ದರಿಂದ ಎರಡನೇ ಸಲವೂ ಮದುವೆ ಮುಂದೂಡಬೇಕಾಯಿತು. ಕೊನೆಗೆ ಕಳೆದ ತಿಂಗಳು ನವೆಂಬರ್ನಲ್ಲಿ ಕೆಲವೇ ಆಪ್ತರ ಮಧ್ಯೆ ಈ ಮದುವೆ ಯಶಸ್ವಿಯಾಗಿ ನೆರವೇರಿತು. ಆದರೆ ತಿಂಗಳು ತುಂಬುವ ಒಳಗೆಯೇ ಮಾರ್ಗೋಗೆ ಈ ಸ್ಥಿತಿ ಒದಗಿತು. ಬೇಸರಗೊಂಡ ಯೋರಿ ಈಗ ಅವಳ ನಿರೀಕ್ಷೆಯಲ್ಲಿದ್ದಾನೆ. ಕಝಕಿಸ್ತಾನದ ಕ್ರಿಸ್ಮಸ್ ದಿನ, ಅಂದರೆ ಜನವರಿ 7ರ ಹೊತ್ತಿಗೆ ಆಕೆ ರಿಪೇರಿಯಾಗಿ ವಾಪಾಸು ಬಂದರೆ ಸಾಕು ಎಂದು ತುದಿಗಾಲ ಮೇಲೆ ಕಾಯುತ್ತಿದ್ದಾನೆ.