
ಬೆಂಗಳೂರು: ನೆಹರು ಕುಟುಂಬ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದವ್ರು. ಆದ್ರೆ ಬಿಜೆಪಿಯವ್ರು ಇದನ್ನ ಎಲ್ಲೂ ಹೇಳಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ನೆಹರು ಜನ್ಮದಿನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.
ನೆಹರು ನಿಧನ ವೇಳೆ ಇಡೀ ವಿಶ್ವವೇ ಸಂತಾಪ ವ್ಯಕ್ತಪಡಿಸಿತ್ತು. ನ್ಯೂಯಾರ್ಕ್ ಟೈಮ್ಸ್ ಆಧುನಿಕ ಭಾರತ ನಿರ್ಮಾತೃ ಎಂದಿತ್ತು. ನೆಹರು ಹೇಳಿ ಬರೆಸಿದ್ರಾ? ಇದನ್ನು ಏಕೆ ಬಿಜೆಪಿಯವ್ರು ಒಪ್ಪಲ್ಲ. ನೆಹರುರವರು ಅಲ್ಪಸಂಖ್ಯಾತರನ್ನ ತಳವೂರುವಂತೆ ಮಾಡಿದ್ರು. ಅಲ್ಪಸಂಖ್ಯಾತರ ವಿರೋಧಿಗಳು ಬಿಜೆಪಿಯವರು.
ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್‌ನವರ ಪಾತ್ರವೇನು? ಸ್ವಾತಂತ್ರ್ಯಕ್ಕಾಗಿ ಅವರ ಬಲಿದಾನವೇನು? ಭಗತ್‌ಸಿಂಗ್, ವಿವೇಕಾನಂದರವರ ಹೆಸರು ಮುಂದೆ ತರ್ತಾರೆ. ಪಟೇಲ್‌ರವರ ಪ್ರತಿಮೆಯನ್ನ ಹಾಕಿ ಆರ್‌ಎಸ್‌ಎಸ್ ಅಂತಾರೆ. ಇವರೆಲ್ಲಾ RSSನಿಂದ ಬಂದವರಾ?, ಸ್ವಾತಂತ್ರ ಸೇನಾನಿಗಳು ಇವರನ್ನು ಆರ್‌ಎಸ್‌ಎಸ್ ನಮ್ಮವರೆಂದು ಬಿಂಬಿಸಿಕೊಳ್ಳುತ್ತಾರೆ. ಸುಳ್ಳು ಹುಟ್ಟಿದ್ದೇ RSSನವರಿಂದ, ಇವರ ಬಗ್ಗೆ ಎಚ್ಚರ ಇರಬೇಕು ಎಂದು ಆರ್‌ಎಸ್‌ಎಸ್ ವಿರುದ್ಧ ವಿಪಕ್ಷನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.