ಹಾವುಗಳನ್ನು ಹಿಡಿದು ಕಾಡಿಗೆ ಬಿಡ್ತಿದ್ದ.. ಆದರೆ ತನಗೆ ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ..
ಹುಬ್ಬಳ್ಳಿ: ಆತ ಯಾರಾದ್ರು ಮನೆಯಲ್ಲಿ ಹಾವುಗಳನ್ನು ಕಂಡ್ರೆ ಸಾಕು ಅವುಗಳನ್ನ ಹಿಡಿದು ಕಾಡಿಗೆ ಬಿಡುತ್ತಿದ್ದ. ಎಲ್ಲರು ಆತನನ್ನ ಸ್ನೇಕ್ ವಿಶ್ವನಾಥ ಅಂತಲೇ ಕರೆಯುತ್ತಿದ್ದರು. ಆದ್ರೆ ಅದೇ ವ್ಯಕ್ತಿಗೆ ಹಾವು ಕಡಿದಿದ್ದು, ಕಚ್ಚಿದ ಹಾವನ್ನು ಆ ವ್ಯಕ್ತಿ ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಬಂದು ಎಲ್ಲರಿಗೂ ಒಂದು ಕ್ಷಣ ಶಾಕ್ ನೀಡಿದ್ದಾನೆ. ಕಿಮ್ಸ್ ಸಿಬ್ಬಂದಿ ಹಾವು ನೋಡುತ್ತಿದ್ದಂತೆಯೇ ಬೆಚ್ಚಿ ಬಿದ್ದಿದ್ದಾರೆ. ಹೌದು ಹುಬ್ಬಳ್ಳಿಯ ವಿಶ್ವನಾಥ ಎಂಬ ವ್ಯಕ್ತಿಗೆ ಹಾವು ಕಚ್ಚಿದ್ದು, ಕಚ್ಚಿದ ಹಾವನ್ನು ಡಬ್ಬಿಯಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಹಾವನ್ನು […]

ಹುಬ್ಬಳ್ಳಿ: ಆತ ಯಾರಾದ್ರು ಮನೆಯಲ್ಲಿ ಹಾವುಗಳನ್ನು ಕಂಡ್ರೆ ಸಾಕು ಅವುಗಳನ್ನ ಹಿಡಿದು ಕಾಡಿಗೆ ಬಿಡುತ್ತಿದ್ದ. ಎಲ್ಲರು ಆತನನ್ನ ಸ್ನೇಕ್ ವಿಶ್ವನಾಥ ಅಂತಲೇ ಕರೆಯುತ್ತಿದ್ದರು. ಆದ್ರೆ ಅದೇ ವ್ಯಕ್ತಿಗೆ ಹಾವು ಕಡಿದಿದ್ದು, ಕಚ್ಚಿದ ಹಾವನ್ನು ಆ ವ್ಯಕ್ತಿ ಕಿಮ್ಸ್ ಆಸ್ಪತ್ರೆಗೆ ತೆಗೆದುಕೊಂಡು ಬಂದು ಎಲ್ಲರಿಗೂ ಒಂದು ಕ್ಷಣ ಶಾಕ್ ನೀಡಿದ್ದಾನೆ. ಕಿಮ್ಸ್ ಸಿಬ್ಬಂದಿ ಹಾವು ನೋಡುತ್ತಿದ್ದಂತೆಯೇ ಬೆಚ್ಚಿ ಬಿದ್ದಿದ್ದಾರೆ.
ಹೌದು ಹುಬ್ಬಳ್ಳಿಯ ವಿಶ್ವನಾಥ ಎಂಬ ವ್ಯಕ್ತಿಗೆ ಹಾವು ಕಚ್ಚಿದ್ದು, ಕಚ್ಚಿದ ಹಾವನ್ನು ಡಬ್ಬಿಯಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಬಂದಿದ್ದಾನೆ. ಹಾವನ್ನು ನೋಡಿದ ಸಿಬ್ಬಂದಿಗಳು ಆತಂಕಗೊಂಡು ಚಿಕಿತ್ಸೆ ನೀಡಲು ಕೂಡ ಭಯಗೊಂಡಿದ್ದು, ಬಳಿಕ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಸುಮಾರು ದಿನಗಳಿಂದ ಜನರನ್ನು ಭಯದಿಂದ ಮುಕ್ತ ಮಾಡುತ್ತಿದ್ದ ಸ್ನೇಕ್ ವಿಶ್ವನಾಥ ಅವರಿಗೆ ನಾಗರಹಾವು ಕಚ್ಚಿದೆ. ಸದ್ಯ ಈಗ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Published On - 7:21 am, Thu, 22 October 20




